ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣನಿಗೆ ಮತ್ತೆ ಇಡಿ ಸಂಕಷ್ಟ ಎದುರಾದ ಬಗ್ಗೆ ಡಿ.ಕೆ.ಸುರೇಶ್ ಪ್ರತಿಕ್ರಿಯೆ

|
Google Oneindia Kannada News

Recommended Video

ಡಿಕೆಶಿ ಮೇಲಿನ ಆರೋಪದ ಬಗ್ಗೆ ಗುಡುಗಿದ ಡಿ ಕೆ ಸುರೇಶ್..? | DK Shivakumar | Oneindia Kannada

ನವದೆಹಲಿ, ಸೆಪ್ಟೆಂಬರ್ 13: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಸೆಪ್ಟೆಂಬರ್ 17 ರ ವರೆಗೆ ಇಡಿ ವಶಕ್ಕೆ ನೀಡಿ ವಿಶೇಷ ನ್ಯಾಯಾಲಯವು ಶುಕ್ರವಾರ ಆದೇಶ ನೀಡಿದೆ.

ಆದೇಶ ಹೊರಬೀಳುತ್ತಿದ್ದಂತೆ ಡಿಕೆಶಿ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಇಡಿ ಇಂದು ನ್ಯಾಯಾಲಯದಲ್ಲಿ ಮಾಡಿದ ಆರೋಪಗಳೆಲ್ಲಾ ಹುರುಳಿಲ್ಲದವು ಎಂದು ಹೇಳಿದರು.

800 ಕೋಟಿ ಬೇನಾಮಿ ಆಸ್ತಿ ಡಿ.ಕೆ.ಶಿವಕುಮಾರ್ ಬಳಿ ಇದೆ ಎಂದು ಇಡಿ ವಾದ ಮಂಡಿಸಿದ್ದನ್ನು ಹಾಸ್ಯಾಸ್ಪದ ಎಂದ ಡಿ.ಕೆ.ಸುರೇಶ್, 800 ಕೋಟಿ ಆಸ್ತಿ ಇರುವುದನ್ನು ಡಿಕೆಶಿ ಅವರೇ ಘೋಷಿಸಿಕೊಂಡಿದ್ದಾರೆ. ಶಿವಕುಮಾರ್ ಅವರ ಒಟ್ಟು ಆಸ್ತಿಯ ಈಗಿನ ಮೌಲ್ಯ 800 ಇರುವುದು ಸತ್ಯ, ಅದು ಬೇನಾಮಿ ಅಲ್ಲ, ಅವರ ಸ್ವಂತದ್ದು ಎಂದು ಡಿ.ಕೆ.ಸುರೇಶ್ ಹೇಳಿದರು.

ಡಿಕೆ ಶಿವಕುಮಾರ್ ದುಃಸ್ಥಿತಿಗೆ ಮೈಲಾರಲಿಂಗದ ಶಾಪವೆ ಕಾರಣವೇ?ಡಿಕೆ ಶಿವಕುಮಾರ್ ದುಃಸ್ಥಿತಿಗೆ ಮೈಲಾರಲಿಂಗದ ಶಾಪವೆ ಕಾರಣವೇ?

ಐಟಿ ಇಲಾಖೆಯು ಹೇಗೆ 87 ಮನೆಗಳ ಮೇಲೆ ದಾಳಿ ನಡೆಸಿ ಎಲ್ಲ ಹಣವೂ, ಆಸ್ತಿಯೂ ನಮ್ಮದೇ ಎಂದು ಬಿಂಬಿಸಿತೋ ಹಾಗೆಯೇ ಇಡಿ ಸಹ ರಾಜಕೀಯ ಒತ್ತಡಕ್ಕೆ ಮಣಿದು ನಮ್ಮದಲ್ಲದ ಖಾತೆಗಳನ್ನು, ಆಸ್ತಿಗಳನ್ನು ನಮ್ಮದೆಂದು ಬಿಂಬಿಸಲು ಹೊರಟಿದೆ ಎಂದು ಡಿ.ಕೆ.ಸುರೇಶ್ ಆರೋಪಿಸಿದರು.

317 ಖಾತೆ ಇದೆ ಎಂದು ಸಾಬೀತು ಮಾಡಲಿ: ಸುರೇಶ್ ಸವಾಲು

317 ಖಾತೆ ಇದೆ ಎಂದು ಸಾಬೀತು ಮಾಡಲಿ: ಸುರೇಶ್ ಸವಾಲು

ಇಡಿ ಹೇಳಿದಂತೆ 317 ಖಾತೆಯನ್ನು ಡಿ.ಕೆ.ಶಿವಕುಮಾರ್ ಹೊಂದಿರುವುದನ್ನು ಇಡಿ ಸಾಬೀತು ಪಡಿಸಲಿ, ಅವರು ನ್ಯಾಯಾಲಯದಲ್ಲಿ ಹೇಳಿದ್ದಾರೆಂದರೆ ಅದನ್ನು ಸಾಬೀತು ಪಡಿಸಲೇಬೇಕು ಎಂದು ಡಿ.ಕೆ.ಸುರೇಶ್ ಉದ್ವೇಗದಿಂದ ಹೇಳಿದರು.

ಡಿಕೆಶಿ ಸುಪರ್ಧಿಯಲ್ಲಿ 317 ಬ್ಯಾಂಕ್ ಖಾತೆ: ಇಡಿ ತನಿಖೆಡಿಕೆಶಿ ಸುಪರ್ಧಿಯಲ್ಲಿ 317 ಬ್ಯಾಂಕ್ ಖಾತೆ: ಇಡಿ ತನಿಖೆ

ಡಿಕೆಶಿ ಮೇಲೆ ಯಾವ ಕ್ರಿಮಿನಲ್ ಮೊಕ್ಕದ್ದಮೆ ಇಲ್ಲ: ಸುರೇಶ್

ಡಿಕೆಶಿ ಮೇಲೆ ಯಾವ ಕ್ರಿಮಿನಲ್ ಮೊಕ್ಕದ್ದಮೆ ಇಲ್ಲ: ಸುರೇಶ್

ಇಡಿ ವಕೀಲರು ಡಿ.ಕೆ.ಶಿವಕುಮಾರ್ ಮೇಲೆ ಕ್ರಿಮಿನಲ್ ಆರೋಪ ಇದೆ ಎಂದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಡಿಕೆಶಿ ಅವರ ಮೇಲೆ ಯಾವ ಕ್ರಿಮಿನಲ್ ಮೊಕದ್ದಮೆಗಳೂ ಇಲ್ಲ, ಅವರ ಮೇಲೆ ಭ್ರಷ್ಟಾಚಾರದ ಆರೋಪಗಳೂ ಇಲ್ಲ, ನ್ಯಾಯಾಲಯದ ದಿಕ್ಕುತಪ್ಪಿಸುವ ಯತ್ನವನ್ನು ಇಡಿ ಮಾಡುತ್ತಿದೆ ಎಂದರು.

ಡಿಕೆಶಿ ಅಭಿಮಾನಿಗಳು ವಾಪಸ್ ಹೋಗಲು ಮನವಿ

ಡಿಕೆಶಿ ಅಭಿಮಾನಿಗಳು ವಾಪಸ್ ಹೋಗಲು ಮನವಿ

ರಾಜ್ಯದಿಂದ ಬಂದಿರುವ ಡಿಕೆ ಶಿವಕುಮಾರ್ ಅಭಿನಾಮಿಗಳು ವಾಪಸ್ ಮನೆಗಳಿಗೆ ತೆರಳಿ ಎಂದು ಮನವಿ ಮಾಡಿದ ಡಿ.ಕೆ.ಸುರೇಶ್, 'ಡಿಕೆಶಿ ಸಹ ಇದನ್ನೇ ಹೇಳಿದ್ದಾರೆ. ಅವರು ಗೆದ್ದು ಹಿಂತಿರುತ್ತಾರೆ, ರಾಜ್ಯದಲ್ಲಿ ಯಾರೂ ಬರುವುದು ಬೇಡ ಎಂದು ಡಿಕೆಶಿ ಮನವಿ ಮಾಡಿದ್ದಾರೆ' ಎಂದು ಅವರು ಹೇಳಿದ್ದಾರೆ.

Breaking: ಡಿಕೆಶಿಗೆ ತಪ್ಪದ ಸಂಕಷ್ಟ: ಸೆಪ್ಟೆಂಬರ್ 17 ರವರೆಗೆ ಇಡಿ ವಶಕ್ಕೆBreaking: ಡಿಕೆಶಿಗೆ ತಪ್ಪದ ಸಂಕಷ್ಟ: ಸೆಪ್ಟೆಂಬರ್ 17 ರವರೆಗೆ ಇಡಿ ವಶಕ್ಕೆ

ಡಿ.ಕೆ.ಶಿವಕುಮಾರ್ ಮೇಲೆ ಜನರ ಆಶೀರ್ವಾದವಿದೆ: ಡಿಕೆ ಸುರೇಶ್

ಡಿ.ಕೆ.ಶಿವಕುಮಾರ್ ಮೇಲೆ ಜನರ ಆಶೀರ್ವಾದವಿದೆ: ಡಿಕೆ ಸುರೇಶ್

ಡಿ.ಕೆ.ಶಿವಕುಮಾರ್ ಅವರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಅದು ಸಾಧ್ಯವಾಗುವುದಿಲ್ಲ, ಕ್ಷೇತ್ರದ ಜನರ ಆಶೀರ್ವಾದ ಅವರ ಮೇಲೆ ಇದೆ, ರಾಜ್ಯದ ಜನರ ಅಭಿಮಾನ ಅವರಿಗೆ ಇದೆ ಎಂದು ಡಿ.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.

English summary
MP DK Suresh said, ED telling lies about DK Shivakumar in court. He also said ED should prove to court what it alleged on DKS today in court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X