ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಸೋನಿಯಾಗಾಂಧಿ ವಿಚಾರಣೆ ಅಂತ್ಯ: ಮತ್ತೆ ಜುಲೈ 25ಕ್ಕೆ ಹಾಜರಾಗುವಂತೆ ಸಮನ್ಸ್

|
Google Oneindia Kannada News

ನವದೆಹಲಿ ಜುಲೈ 21: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಜಾರಿ ನಿರ್ದೇಶನಾಲಯ ಮತ್ತೆ ಸಮನ್ಸ ಜಾರಿ ಮಾಡಿದ್ದು, ಜುಲೈ 25ಕ್ಕೆ ಪುನಃ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರತ್ರಿಕೆ ಖರೀದಿ ಅವ್ಯವಹಾರ ಮತ್ತು ಹಣ ವರ್ಗಾವಣೆ ಆರೋಪದ ಹಿನ್ನೆಲೆ ಗುರುವಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದರು. ಮೂರು ಗಂಟೆಗಳ ವಿಚಾರಣೆ ಬಳಿ ಸೋನಿಯಾ ಗಾಂಧಿ ವಿಚಾರಣೆ ಅಂತ್ಯಗೊಂಡಿತು. ನಂತರ ಜುಲೈ 25ರಂದು ಮತ್ತೆ ವಿಚಾರಣೆಗೆ ಬರುವಂತೆ ಸೋನಿಯಾ ಗಾಂಧಿ ಅವರಿಗೆ ಇಡಿ ಸಮನ್ಸ ಜಾರಿ ಮಾಡಿತು.

ಗುರುವಾರ ಬೆಳಗ್ಗೆ 11ಗಂಟೆ ಹೊತ್ತಿಗೆ ದೆಹಲಿಯ ಇಡಿ ಅಧಿಕಾರಿಗಳ ಕಚೇರಿಗೆ ಸೋನಿಯಾ ಗಾಂಧಿ ಹಾಜರಾಗಿದ್ದರು. ಅಲ್ಲಿಂದ ನಿರಂತರವಾಗಿ ಮೂರು ಗಂಟೆಗಳ ಕಾಲ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಿ ಮಧ್ಯಾಹ್ನ ಮನೆಗೆ ತೆರಳಿದರು. ಬೆಳಗ್ಗೆ ಇಡಿ ಕಚೇರಿ ಆಗಮಿಸುವುದರಿಂದ ಹಿಡಿದು ಮನೆಗೆ ಮರಳುವವರೆಗೂ ಸೋನಿಯಾಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಸಾಥ್ ನೀಡಿದರು.

ED summons to Sonia Gandhi for come to hearing on July 25th

ಇಡಿ ಸಮಸ್ಸ ಜಾರಿ ಮಾಡಿದನ್ನು ವಿರೋಧಿಸಿ ಕೇರಳ, ದೆಹಲಿ, ಬೆಂಗಳೂರು, ಚಂಢಿಗಡ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂಢಿಗಡದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರ ಹಾಗೂ ಇಡಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಕೂಡಲೇ ಎಚ್ಚೆತ್ತ ಪೊಲೀಸ್ ಇಲಾಖೆ ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ದಾಳಿ ಪ್ರಯೋಗ ಮಾಡಿದೆ. ಈ ಮೂಲಕ ಪ್ರತಿಭಟನೆ ನಿಯಂತ್ರಣಕ್ಕೆ ತರಲು ಪ್ರಯತ್ನಿಸಲಾಗಿದೆ.

ದಾಳಿ ವೇಳೆ ನೀರಿನ ರಭಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲೇ ಉರುಳಿ ಬಿದ್ದಿದ್ದಾರೆ. ನೀರಿಗೆ ತೊಯ್ದು ತೊಪ್ಪೆಯಾಗಿದ್ದಾರೆ. ಅದರಲ್ಲೂ ಪ್ರತಿಭಟನೆ ಕೈ ಬಿಡದೆ ಪುನಃ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್ ವರೆಗೂ ಬಂದ ಸೋನಿಯಾ ಪರ ಘೋಷಣೆ ಮೊಳಗಿಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಪುನಃ ಸೋನಿಯಾ ಗಾಂಧಿಗೆ ಸಮನ್ಸ ನೀಡಿರುವ ಇಡಿ ಅಧಿಕಾರಿಗಳ ನಡೆಯನ್ನು ಖಂಡಿಸಿದ್ದಾರೆ.

Recommended Video

ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸ್ತಿದೆ ವಿರಾಟ್ ಕೊಹ್ಲಿಯ ಡಾನ್ಸ್ ವಿತ್ ವರ್ಕೌಟ್ ವಿಡಿಯೋ | *Cricket | OneIndia

English summary
Enforcement Directorate summons to Sonia Gandhi in National Herald case for come to hearing on July 25th, Today 3hour National Herald case hearing is ends, Congress workers protesting against ED summons to Sonia Gandhi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X