ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಟ್‌ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಮೇಲೆ ಇಡಿ ದಾಳಿ

|
Google Oneindia Kannada News

ನವದೆಹಲಿ, ಆಗಸ್ಟ್ 23: ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಆಸ್ತಿ ಮೇಲೆ ಇಡಿ ಅಧಿಕಾರಿಗಳು ಶುಕ್ರವಾರ(ಆಗಸ್ಟ್ 23)ರಂದು ದಾಳಿ ನಡೆಸಿದ್ದಾರೆ. ದೆಹಲಿ ಹಾಗೂ ಮುಂಬೈನಲ್ಲಿರುವ ಗೋಯಲ್ ಅವರ ಆಸ್ತಿ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

2014 ರಲ್ಲಿ ಜೆಟ್ ಪ್ರಿವಿಲೇಜ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಎತಿಹಾಡ್ ಷೇರುಗಳನ್ನು ಸ್ವಾಧೀನಪಡಿಸಿಕೊಂಡಾಗ ಜಾರಿ ನಿರ್ದೇಶನಾಲಯವು ವಿದೇಶಿ ನೇರ ತನಿಖೆ (ಎಫ್‌ಡಿಐ) ಉಲ್ಲಂಘನೆಯ ಬಗ್ಗೆ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿತ್ತು.

Recommended Video

ಅಂತೂ ನನಸಾಯಿತು ನರೇಂದ್ರ ಮೋದಿ ಕಂಡ ಕನಸು | Oneindia Kannada

ದೇಶ ಬಿಟ್ಟು ಹೊರಟಿದ್ದ ಮತ್ತೊಬ್ಬ ಸಾಲಗಾರನನ್ನು ತಡೆದ ಅಧಿಕಾರಿಗಳುದೇಶ ಬಿಟ್ಟು ಹೊರಟಿದ್ದ ಮತ್ತೊಬ್ಬ ಸಾಲಗಾರನನ್ನು ತಡೆದ ಅಧಿಕಾರಿಗಳು

ಜೆಟ್ ಏರ್ವೇಸ್ ಈ ವರ್ಷದ ಆರಂಭದಲ್ಲಿ ತನ್ನ ಅಪಾರ ಸಾಲದಿಂದಾಗಿ ಅನಿರ್ದಿಷ್ಟವಾಗಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿ, ಸಾವಿರಾರು ಉದ್ಯೋಗಿಗಳಿಗೆ ಕೆಲಸವಿಲ್ಲದಂತೆ ಮಾಡಿದೆ.

ED Searches Jet Airways Founder Naresh Property In Delhi And Mumbai

ಮಾರ್ಚ್‌ನಲ್ಲಿ, ನರೇಶ್ ಗೋಯಲ್ ಮತ್ತು ಅವರ ಪತ್ನಿ 1992 ರಲ್ಲಿ 26 ವರ್ಷಗಳ ಹಿಂದೆ ಸ್ಥಾಪಿಸಿದ ಜೆಟ್ ಏರ್ವೇಸ್ ಮಂಡಳಿಗೆ ರಾಜೀನಾಮೆ ನೀಡಿದರು. ಅವರು ವಿಮಾನಯಾನ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.

ವಿಮಾನಯಾನವು ರೂ. 8,000 ಕೋಟಿ ಸಾಲದಲ್ಲಿದೆ. ಇತ್ತೀಚಿನವರೆಗೂ, ವಿಮಾನಯಾನವು ಮಾರುಕಟ್ಟೆ ಪಾಲಿನಿಂದ ಭಾರತದ ಎರಡನೇ ಅತಿದೊಡ್ಡ ವಾಹಕವಾಗಿದೆ. ನಗದು ಕೊರತೆಯಿರುವ ವಿಮಾನಯಾನ ಸಂಸ್ಥೆ ತನ್ನ ಕಾರ್ಯಾಚರಣೆಯನ್ನು ಏಪ್ರಿಲ್‌ನಲ್ಲಿ ಸ್ಥಗಿತಗೊಳಿಸಿತು.

ಜೆಟ್ ಏರ್ವೇಸ್ ಗೆ ಮತ್ತೆ ಆಘಾತ: ಮುಖ್ಯ ಹಣಕಾಸು ಅಧಿಕಾರಿ ರಾಜೀನಾಮೆ ಜೆಟ್ ಏರ್ವೇಸ್ ಗೆ ಮತ್ತೆ ಆಘಾತ: ಮುಖ್ಯ ಹಣಕಾಸು ಅಧಿಕಾರಿ ರಾಜೀನಾಮೆ

ಈ ಬಿಕ್ಕಟ್ಟು 20,000 ಉದ್ಯೋಗಗಳನ್ನು ಪಣಕ್ಕಿಟ್ಟಿದೆ ಮತ್ತು ಅವರಲ್ಲಿ ಹಲವರು ವೇತನ ಕಡಿತದೊಂದಿಗೆ ಇತರೆ ವಿಮಾನಯಾನ ಸಂಸ್ಥೆಗಳಲ್ಲಿ ಉದ್ಯೋಗ ಅರಸಿಕೊಂಡು ಹೋಗಿದ್ದಾರೆ.

ಸಿಬ್ಬಂದಿಗಳು ಕಂಪನಿಯ ಪುನರುಜ್ಜೀವನಕ್ಕೆ ಸರ್ಕಾರ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದರು.

English summary
ED Searches Jet Airways Founder Naresh Property In Delhi And Mumbai, being searched by officials of the Enforcement Directorate in connection with a case of alleged contravention of the foreign exchange law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X