ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GVK ಗ್ರೂಪ್ ಮೇಲೆ ಮನಿ ಲಾಂಡರಿಂಗ್ ಕೇಸ್ ದಾಖಲಿಸಿದ ಜಾರಿ ನಿರ್ದೇಶನಾಲಯ

|
Google Oneindia Kannada News

ನವದೆಹಲಿ, ಜುಲೈ 7: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಸುಮಾರು 800 ಕೋಟಿ ರೂಪಾಯಿ ಅಕ್ರಮ ವ್ಯವಹಾರದ ಆರೋಪಿಗಳಾದ ಜಿವಿಕೆ ಗ್ರೂಪ್ ಆಫ್ ಕಂಪೆನಿಸ್ ಅಧ್ಯಕ್ಷ ವೆಂಕಟ ಕೃಷ್ಣ ರೆಡ್ಡಿ ಗುಣಪತಿ ಮತ್ತು ಅವರ ಪುತ್ರ ಹಾಗೂ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಿ ವಿ ಸಂಜಯ್ ರೆಡ್ಡಿ ಮೇಲೆ ಜಾರಿ ನಿರ್ದೇಶನಾಲಯ ಮನಿ ಲಾಂಡರಿಂಗ್ ಕೇಸ್ ದಾಖಲಿಸಿದೆ.

Recommended Video

ಕಪ್ಪು ಪಟ್ಟಿ ಕಟ್ಟಿಕೊಂಡು ಬೀದಿಗೆ ಬಂದ ಡಾಕ್ಟರ್ ಮತ್ತು ನರ್ಸ್ ಗಳು | Oneindia Kannada

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಜಿವಿಕೆ ಏರ್ ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ಸಹಯೋಗದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮುಂಬೈ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಮತ್ತು ನಿರ್ವಹಣೆ ಮಾಡುವ ಕೆಲಸವನ್ನು ಜಿವಿಕೆ ಗ್ರೂಪ್ ಗೆ ನೀಡಿತ್ತು. ಈ ಒಪ್ಪಂದ 2006ರ ಏಪ್ರಿಲ್ 4ರಂದು ಆಗಿತ್ತು.

ನಕಲಿ ದಾಖಲೆ ಸೃಷ್ಟಿಸಿ ಮುಡಾ ಆಸ್ತಿ ಮಾರಾಟ ಮಾಡಿದ ವ್ಯಕ್ತಿನಕಲಿ ದಾಖಲೆ ಸೃಷ್ಟಿಸಿ ಮುಡಾ ಆಸ್ತಿ ಮಾರಾಟ ಮಾಡಿದ ವ್ಯಕ್ತಿ

ಜಿವಿಕೆ ಗ್ರೂಪ್ ಪ್ರವರ್ತಕರು ತಮ್ಮ ಕಾರ್ಯನಿರ್ವಾಹಕ ಸಿಬ್ಬಂದಿ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಗುರುತು ಪತ್ತೆಯಾಗದ ಅಧಿಕಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ED Registers A Case Of Money Laundering Against Mumbai Airport Run GVK Group

2017-18ರಲ್ಲಿ 9 ಕಂಪನಿಗಳಿಗೆ ನಕಲಿ ಕೆಲಸದ ಒಪ್ಪಂದಗಳನ್ನು ಮಾಡುವ ಮೂಲಕ ಕೆಲಸ ಮಾಡಿರುವುದಾಗಿ ತೋರಿಸಿ 310 ಕೋಟಿ ರೂಪಾಯಿಗಳನ್ನು ಜಿವಿಕೆ ಸಮೂಹದ ಪ್ರವರ್ತಕರು ತಮ್ಮ ಇಚ್ಛೆಯ ಕಂಪೆನಿಗಳಿಗೆ ಹಣ ಒದಗಿಸಿದ್ದಾರೆ. ಈ ಮೂಲಕ 395 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಈ ಹಿಂದೆ ಸಿಬಿಐ ಆರೋಪಿಸಿದೆ.

English summary
ED registers a case of money laundering against Mumbai Airport-run GVK Group, its Chairman Dr. GVK Reddy, his son GV Sanjay Reddy in connection with irregularities worth over Rs. 800 crores for development of Mumbai Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X