ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡಿ ದಾಳಿ ಲಿಮ್ಕಾ ದಾಖಲೆಗೆ ಸೇರಿಸಿ: ಸುಳೆ ವ್ಯಂಗ್ಯ

|
Google Oneindia Kannada News

ನವದೆಹಲಿ, ಜೂ. 6: ಜೈಲಿನಲ್ಲಿರುವ ಎನ್‌ಸಿಪಿ ಪಕ್ಷದ ನಾಯಕರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ವಿರುದ್ಧದ ದಾಳಿ ಸಂಬಂಧ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಸೋಮವಾರ ವಾಗ್ದಾಳಿ ನಡೆಸಿದ್ದು, ದೇಶಮುಖ್ ಕುಟುಂಬದ ಮೇಲೆ ಕೇಂದ್ರೀಯ ಸಂಸ್ಥೆಗಳು 109 ಬಾರಿ ದಾಳಿ ನಡೆಸಿದ್ದು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಬೇಕು ಎಂದು ಹೇಳಿದರು.

ನಮ್ಮ ಇಬ್ಬರು ನಾಯಕರು - ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ - ಏನನ್ನೂ ಮಾಡದೆ ಜೈಲಿನಲ್ಲಿ ಸಿಲುಕಿಕೊಂಡಿದ್ದಾರೆ. ದೇಶಮುಖ್ ಕುಟುಂಬದ ಮೇಲೆ 109 ಬಾರಿ ದಾಳಿ ನಡೆದಿದ್ದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಬೇಕು. ಇಂದು ಅಥವಾ ನಾಳೆ ಕೋರ್ಟ್ ಆರೋಪ ಮುಕ್ತ ಮಾಡಲಿದೆ. ಕೇಂದ್ರದ ವಿರುದ್ಧ ಯಾರೇ ಮಾತನಾಡಿದರೂ ದಾಳಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯಸಭಾ ಚುನಾವಣೆ: ಒಂದು ದಿನದ ಜಾಮೀನು ಕೋರಿ ನವಾಬ್ ಮಲಿಕ್ ಅರ್ಜಿ ರಾಜ್ಯಸಭಾ ಚುನಾವಣೆ: ಒಂದು ದಿನದ ಜಾಮೀನು ಕೋರಿ ನವಾಬ್ ಮಲಿಕ್ ಅರ್ಜಿ

ಮಹಾರಾಷ್ಟ್ರದಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿ ಕೋರಿ ಮಲಿಕ್ ಮತ್ತು ದೇಶ್‌ಮುಖ್ ಅವರ ಅರ್ಜಿಗಳಿಗೆ ಉತ್ತರಗಳನ್ನು ಸಲ್ಲಿಸಲು ಜಾರಿ ನಿರ್ದೇಶನಾಲಯ (ಇಡಿ) ಸಮಯ ಕೋರಿದಾಗಲೂ ಸುಳೆ ಅವರ ಹೇಳಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಇಡಿ ಮಂಗಳವಾರದೊಳಗೆ ಉತ್ತರವನ್ನು ಸಲ್ಲಿಸಬೇಕಾಗಿದ್ದು, ಮುಂದಿನ ವಿಚಾರಣೆ ಬುಧವಾರ ನಡೆಯಲಿದೆ ಎಂದು ಎಎನ್‌ಐ ತಿಳಿಸಿದೆ.

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಶುಕ್ರವಾರ ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಮತ ಚಲಾಯಿಸಲು ಒಂದು ದಿನದ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಮಾಜಿ ಸಚಿವರು ಮತ್ತು ಅವರ ಇಬ್ಬರು ಸಹಾಯಕರನ್ನು ಹೆಸರಿಸಿದ ಒಂದು ದಿನದ ನಂತರ ಈ ಅರ್ಜಿಯನ್ನು ಸಲ್ಲಿಸಲಾಗಿದೆ. 72 ವರ್ಷದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಅನಿಲ್‌ ದೇಶಮುಖ್‌ ಕಳೆದ ವರ್ಷ ನವೆಂಬರ್‌ನಲ್ಲಿ ಇಡಿ ಅವರ ವಿರುದ್ಧದ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಿತ್ತು.

ED Raids on Deshmukh Family Should Enter Limca Book, Says Supriya Sule

ದೇಶಮುಖ್, ಅವರ ಆಪ್ತ ಸಹಾಯಕ ಕುಂದನ್ ಶಿಂಧೆ ಮತ್ತು ಆಪ್ತ ಕಾರ್ಯದರ್ಶಿ ಸಂಜೀವ್ ಪಲಾಂಡೆ ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ತನಿಖೆ ನಡೆಸುತ್ತಿದೆ. ಪ್ರಾಥಮಿಕ ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ಮತ್ತು ಅವರ ಇಬ್ಬರು ಸಹಾಯಕರು "ತಮ್ಮ ಸಾರ್ವಜನಿಕ ಕರ್ತವ್ಯಗಳ ಅಸಮರ್ಪಕ ಮತ್ತು ಅಪ್ರಾಮಾಣಿಕ ನಿರ್ವಹಣೆಗಾಗಿ ಅನಗತ್ಯ ಲಾಭ ಪಡೆಯಲು" ಪ್ರಯತ್ನಿಸಿದ್ದಾರೆ ಎಂದು ಸಿಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳ ಮೇಲೆ ಮೂವರು ಅನಗತ್ಯ ಪ್ರಭಾವ ಬೀರಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

English summary
NCP MP Supriya Sule has said that Central Investigative Agencies have raided Deshmukh family 109 times, And this should be entered into Limca book of Records
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X