ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡಿ ಕಚೇರಿಯಿಂದ ನ್ಯಾಯಾಲಯದತ್ತ ಡಿ.ಕೆ. ಶಿವಕುಮಾರ್

|
Google Oneindia Kannada News

Recommended Video

DK Shivakumar : ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಲು ಮಗಳೇ ಕಾರಣ? | Oneindia Kannada

ನವದೆಹಲಿ, ಸೆಪ್ಟೆಂಬರ್ 13: ಜಾರಿ ನಿರ್ದೇಶನಾಲಯ ಕಸ್ಟಡಿ ಅಂತ್ಯಗೊಂಡಿದ್ದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನ್ಯಾಯಾಲಯದತ್ತ ಹೊರಟಿದ್ದಾರೆ.

ಅಕ್ರಮ ಹಣ ಗಳಿಕೆ ಆರೋಪದ ಅಡಿಯಲ್ಲಿ ಕಳೆದ 10 ದಿನಗಳಿಂದ ಇಡಿ ವಿಚಾರಣೆಯಲ್ಲಿರುವಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಇಂದು ಮಹತ್ವದ ದಿನವಾಗಿದೆ.

ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಅಂತ್ಯ; ಮುಂದಿರುವ 4 ಆಯ್ಕೆಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಅಂತ್ಯ; ಮುಂದಿರುವ 4 ಆಯ್ಕೆ

ಇಂದಾದರೂ ಅವರಿಗೆ ಜಾಮೀನು ಸಿಗುತ್ತಾ ಅಥವಾ ಜಾರಿ ನಿರ್ದೇಶನಾಲಯದ ವಶದಲ್ಲಿಯೇ ಇರುತ್ತಾರೋ ಎನ್ನುವುದು ಕುತೂಹಲಕರ ವಿಷಯವಾಗಿದೆ.

ಇಡಿ ಮಾಹಿತಿ ಪ್ರಕಾರ ಡಿಕೆಶಿ ವಿಚಾರಣೆಗೆ ಸಹಕರಿಸುತ್ತಿಲ್ಲ

ಇಡಿ ಮಾಹಿತಿ ಪ್ರಕಾರ ಡಿಕೆಶಿ ವಿಚಾರಣೆಗೆ ಸಹಕರಿಸುತ್ತಿಲ್ಲ

ಇಡಿ ಇಲಾಖೆಯ ಮೂಲಗಳ ಪ್ರಕಾರ ಡಿ.ಕೆ.ಶಿವಕುಮಾರ್ ಅಧಿಕಾರಿಗಳ ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನಲಾಗುತ್ತಿದೆ. ಆರಂಭದಲ್ಲಿ ಸಮನ್ಸ್ ನೀಡಿದ್ದಾಗಲೂ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಇಡಿ ವಿಚಾರಣೆ ಮುಮದುವರಿಕೆ

ಇಡಿ ವಿಚಾರಣೆ ಮುಮದುವರಿಕೆ

ಹೀಗಾಗಿ ಡಿಕೆಶಿ ಅವರನ್ನು ಇನ್ನೂ 4 ದಿನ ಇಡಿ ಕಸ್ಟಡಿಗೆ ನೀಡಬೇಕು ಎಂದು ಜಾರಿ ನಿರ್ದೇಶನಾಲಯದ ವಕೀಲರು ನ್ಯಾಯಾಲಯದ ಎದುರು ಮನವಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಡಿಕೆಶಿ ಎಲ್ಲಾ ರೀತಿಯಲ್ಲೂ ಅಧಿಕಾರಿಗಳ ವಿಚಾರಣೆಗೆ ಸಹಕರಿಸಿದ್ದಾರೆ. ಆದರೆ, ಇಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಈವರೆಗೆ ಕಲೆಹಾಕಿಲ್ಲ. ಹೀಗಾಗಿ ಜಾಮೀನು ಅರ್ಜಿಯನ್ನು ಪುಸ್ಕರಿಸಬೇಕು ಎಂದು ಡಿಕೆಶಿ ಪರ ವಕೀಲರು ಸಹ ನ್ಯಾಯಾಲಯದ ಎದುರು ವಾದ ಮಂಡಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಲು ಮಗಳು ಐಶ್ವರ್ಯಳೇ ಕಾರಣ?ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಲು ಮಗಳು ಐಶ್ವರ್ಯಳೇ ಕಾರಣ?

ನ್ಯಾಯಾಲಯ ಇಡಿ ವಕೀಲರ ವಾದ ಪರಿಗಣಿಸುತ್ತಾ?

ನ್ಯಾಯಾಲಯ ಇಡಿ ವಕೀಲರ ವಾದ ಪರಿಗಣಿಸುತ್ತಾ?

ದೆಹಲಿಯ ರೋಸ್ ಅವೆನ್ಯೂ ರಸ್ತೆಯಲ್ಲಿರುವ ನ್ಯಾಯಾಲಯಕ್ಕೆ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ಇಂದು ಮಧ್ಯಾಹ್ನ ಹಾಜರುಪಡಿಸಲಿದ್ದಾರೆ. ಆದರೆ, ನ್ಯಾಯಾಲಯ ಇಡಿ ವಕೀಲರ ವಾದವನ್ನು ಪರಿಗಿಸುತ್ತಾ, ಅಥವಾ ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡುತ್ತಾ ಎಂಬುದು ಸಧ್ಯದ ಕುತೂಹಲ.

ಡಿಕೆ ಶಿವಕುಮಾರ್‌ ಆರೋಗ್ಯದಲ್ಲಿ ಏರುಪೇರು

ಡಿಕೆ ಶಿವಕುಮಾರ್‌ ಆರೋಗ್ಯದಲ್ಲಿ ಏರುಪೇರು

ದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆಗೆ ಎದುರಿಸುತ್ತಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಇದ್ದಕ್ಕಿದ್ದಂತೆ ಇಂದು ಸಂಜೆ ವೇಳೆಗೆ ರಕ್ತದೊತ್ತಡದಲ್ಲಿ ಏರುಪೇರಾಗಿದೆ ಹಾಗಾಗಿ ಅವರನ್ನು ಕೂಡಲೇ ಆರ್‌ಎಂವಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಡಿ.ಕೆ.ಶಿವಕುಮಾರ್ ಅವರಿಗೆ ಮಲಬದ್ಧತೆ ಪ್ರಾರಂಭವಾಗಿದೆ ಎಂದೂ ಹೇಳಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ಅವರನ್ನು ಇಡಿ ಅಧಿಕಾರಿಗಳು ಪೊಲೀಸರ ಬಂದೋಬಸ್ತ್‌ನಲ್ಲಿ ದೆಹಲಿಯ ಆರ್‌ಎಂವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅದಾನಿ ಸಂಸ್ಥೆಗೂ ನಿಮ್ಗೂ ಏನ್ ಸಂಬಂಧ? ಐಶ್ವರ್ಯಾಗೆ 'ಇಡಿ' ಹಿಟ್ಅದಾನಿ ಸಂಸ್ಥೆಗೂ ನಿಮ್ಗೂ ಏನ್ ಸಂಬಂಧ? ಐಶ್ವರ್ಯಾಗೆ 'ಇಡಿ' ಹಿಟ್

English summary
Karnataka Congress leader D K Shivakumar, arrested in a money laundering case, is produced before a Delhi court on September 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X