ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಮತ್ತೆ ಇ.ಡಿ ಸಮನ್ಸ್

|
Google Oneindia Kannada News

ನವದೆಹಲಿ, ನವೆಂಬರ್ 4: ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ತಾಯಿ ಮತ್ತು ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನ.7ಕ್ಕೆ ಮುಂದೂಡಿದೆ. ಅದರ ಬೆನ್ನಲ್ಲೇ ನ.8ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಅವರಿಗೆ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ.

ಆಸ್ಪತ್ರೆಯಿಂದ ಡಿ. ಕೆ. ಶಿವಕುಮಾರ್ ಡಿಸ್ಚಾರ್ಜ್‌, ವಿಶ್ರಾಂತಿಗೆ ಸಲಹೆಆಸ್ಪತ್ರೆಯಿಂದ ಡಿ. ಕೆ. ಶಿವಕುಮಾರ್ ಡಿಸ್ಚಾರ್ಜ್‌, ವಿಶ್ರಾಂತಿಗೆ ಸಲಹೆ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್, ಅವರ ಸಹೋದರ ಮತ್ತು ಸಂಸದ ಡಿಕೆ ಶಿವಕುಮಾರ್ ಹಾಗೂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆಗೆ ಹಾಜರಾಗುವಂತೆ ಅವರ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಅವರಿಗೆ ಎರಡು ಬಾರಿ ಸಮನ್ಸ್ ನೀಡಿತ್ತು. ಈಗ ಮೂರನೇ ಬಾರಿ ಸಮನ್ಸ್ ಜಾರಿ ಮಾಡಲಾಗಿದೆ.

ಡಿಕೆಶಿ ತಾಯಿ, ಪತ್ನಿಗೆ ತಾತ್ಕಾಲಿಕ ನೆಮ್ಮದಿ ನೀಡಿದ ಹೈಕೋರ್ಟ್ಡಿಕೆಶಿ ತಾಯಿ, ಪತ್ನಿಗೆ ತಾತ್ಕಾಲಿಕ ನೆಮ್ಮದಿ ನೀಡಿದ ಹೈಕೋರ್ಟ್

ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ಅನ್ನು ರದ್ದುಗೊಳಿಸಬೇಕು ಅಥವಾ ವಿಚಾರಣೆಯನ್ನು ಬೆಂಗಳೂರಿನಲ್ಲಿಯೇ ನಡೆಸಲು ಸೂಚನೆ ನೀಡಬೇಕು ಎಂದು ಕೋರಿ ಡಿಕೆ ಶಿವಕುಮಾರ್ ತಾಯಿ ಮತ್ತು ಪತ್ನಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಅರ್ಜಿ ವಿಚಾರಣೆ ನಾಲ್ಕು ಬಾರಿ ಮುಂದೂಡಿಕೆಯಾಗಿತ್ತು. ಸೋಮವಾರ ನಡೆದ ವಿಚಾರಣೆಯನ್ನು ಕೂಡ ನ್ಯಾ. ಬ್ರಿಜೇಶ್ ಸೇಥಿ ಅವರ ಏಕಸದಸ್ಯ ನ್ಯಾಯಪೀಠ ನ.7ಕ್ಕೆ ಮುಂದೂಡಿದೆ.

ED Issues Summons DK Shivakumars Wife And Mother Hearing Adjourned

ಸುಪ್ರೀಂಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ ಡಿ. ಕೆ. ಶಿವಕುಮಾರ್ಸುಪ್ರೀಂಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ ಡಿ. ಕೆ. ಶಿವಕುಮಾರ್

ಇಡಿ ಸಮನ್ಸ್ ರದ್ದು‌ ಮಾಡಿ ಅಥವಾ ಬೆಂಗಳೂರಿನಲ್ಲಿ ವಿಚಾರಣೆ ಮಾಡಿ ಡಿಕೆಶಿ ತಾಯಿ ಮತ್ತು ಹೆಂಡತಿ ಅರ್ಜಿ ಸಲ್ಲಿಸಿದ್ದಾರೆ. ಗೌರಮ್ಮ ಅವರಿಗೆ 85 ವರ್ಷ ಆಗಿದ್ದು ದೆಹಲಿಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಗೌರಮ್ಮ ಅವರ ಜತೆಗೆ ಉಷಾ ಅವರನ್ನು ಕೂಡ ಬೆಂಗಳೂರಿನಲ್ಲಿ ವಿಚಾರಣೆಗೆ ಒಳಪಡಿಸಲು ಇಡಿಗೆ ಸೂಚಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

English summary
Delhi high court on Monday adjourned hearing the plea of Dk Shivakumar's wife and mother to November 7. ED has issued fresh summons to them to appear before it on Nov 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X