ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಿ ಲಾಂಡರಿಂಗ್ ಪ್ರಕರಣ: ತಬ್ಲಿಘಿ ಮುಖ್ಯಸ್ಥನ ವಿರುದ್ಧ FIR ದಾಖಲಿಸಿದ ಇಡಿ

|
Google Oneindia Kannada News

ದೆಹಲಿ, ಏಪ್ರಿಲ್ 16: ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನ್ ಸಾದ್ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಎಫ್‌ಐಆರ್ ದಾಖಲಿಸಿದೆ.

ದೇಶಾದ್ಯಂತ ಕೊರೊನಾ ವೈರಸ್ ಹರಡುತ್ತಿದ್ದ ಸಂದರ್ಭದಲ್ಲಿ, ದೆಹಲಿ ನಿಜಾಮುದ್ದೀನ್ ಪ್ರದೇಶದಲ್ಲಿ ತಬ್ಲಿಘಿ ಜಮಾತ್‌ನ ಧಾರ್ಮಿಕ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ವಿದೇಶದಿಂದ ನೂರಾರು ಧಾರ್ಮಿಕ ಮುಖಂಡರು ಒಳಗೊಂಡಂತೆ ದೇಶದ ಹಲವು ರಾಜ್ಯಗಳಿಂದ ಸಾವಿರಾರು ಜನರು ಭಾಗಿಯಾಗಿದ್ದರು.

'ದೇಶದ ಶೇಕಡಾ 63ರಷ್ಟು ಕೋವಿಡ್ ಪ್ರಕರಣಗಳಿಗೆ ತಬ್ಲಿಘಿ ಜಮಾತ್ ಕಾರಣ''ದೇಶದ ಶೇಕಡಾ 63ರಷ್ಟು ಕೋವಿಡ್ ಪ್ರಕರಣಗಳಿಗೆ ತಬ್ಲಿಘಿ ಜಮಾತ್ ಕಾರಣ'

ಈ ಸಭೆ ಮುಗಿಸಿಕೊಂಡು ಹೋದ ಅನೇಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಅವರಿಂದ ಮತ್ತಷ್ಟು ಜನರಿಗೆ ವೈರಸ್ ಅಂಟಿಕೊಂಡಿದೆ. ಹೀಗಾಗಿ, ದೆಹಲಿ ಪೊಲೀಸರು ತಬ್ಲಿಘಿ ಜಮಾತ್ ಮುಖ್ಯಸ್ಥನ ಮೌಲಾನ್ ಸಾದ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

ED Has Registered Money Laundering Case Against Maulana Saad

ಲಾಕ್‌ಡೌನ್ ಉಲ್ಲಂಘಿಸಿ ಧಾರ್ಮಿಕ ಸಭೆ ಆಯೋಜಿಸಿದ್ದ ಆರೋಪ ಮತ್ತು ದೆಹಲಿ ಪೊಲೀಸರ ಎಫ್ಐಆರ್ ಆಧರಿಸಿ ಇಡಿ ಇಲಾಖೆ ಮನಿ ಲಾಂಡರಿಂಗ್ ಪ್ರಕರಣ ಕಾಯ್ದೆ ಅಡಿ ಕೇಸ್ ದಾಖಲಿಸಿಕೊಂಡಿದೆ.

ತಬ್ಲಿಘಿ ಜಮಾತ್ ಮರ್ಕಾಜ್ : ಭಾರತದ ಕೊರೊನಾ ಹಾಟ್ ಸ್ಪಾಟ್ ಎನಿಸಿದ್ದೇಕೆ?ತಬ್ಲಿಘಿ ಜಮಾತ್ ಮರ್ಕಾಜ್ : ಭಾರತದ ಕೊರೊನಾ ಹಾಟ್ ಸ್ಪಾಟ್ ಎನಿಸಿದ್ದೇಕೆ?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಬ್ಲಿಘಿ ಜಮಾತ್ ಮುಖ್ಯಸ್ಥನ ಮೌಲಾನ್ ಸಾದ್ ಪರ ವಕೀಲ ಪ್ರತಿಕ್ರಿಯಿಸಿದ್ದು, ''ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಅದರ ಬಗ್ಗೆ ಮಾತನಾಡುವುದು ತಪ್ಪು. ಸದ್ಯ ನನ್ನ ಕಕ್ಷಿದಾರ 14 ದಿನಗಳ ಕ್ವಾರೆಂಟೈನ್‌ನಲ್ಲಿದ್ದಾರೆ. ಮೌಲಾನ್ ಸಾದ್ ಕುಟುಂಬ ಸದಸ್ಯರು ತನಿಖೆಗೆ ಸಹಕರಿಸುತ್ತಿದ್ದಾರೆ. ಕ್ವಾರೆಂಟೈನ್‌ ಮುಗಿದ ಬಳಿಕ ತಬ್ಲಿಘಿ ಜಮಾತ್ ಮುಖ್ಯಸ್ಥ ಹಾಜರಾಗ್ತಾರೆ' ಎಂದು ತಿಳಿಸಿದ್ದಾರೆ.

ಮಾರ್ಚ್ 31 ರಂದು ನಿಜಾಮುದ್ದೀನ್ ಠಾಣೆ ಅಧಿಕಾರಿಯ ದೂರಿನ ಮೆರೆಗೆ ದೆಹಲಿ ಕ್ರೈಂ ವಿಭಾಗದಲ್ಲಿ ಮೌಲಾನ್ ಸಾದ್ ವಿರುದ್ಛ ಎಫ್ಐಆರ್ ದಾಖಲಾಗಿದೆ. ತಬ್ಲಿಘಿ ಜಮಾತ್‌ನಲ್ಲಿ ಭಾಗವಹಿಸಿದ್ದವರ ಪೈಕಿ ಕೆಲವರು ಕೊರೊನಾ ಸೋಂಕಿನಿಂದ ಮೃತಪಟ್ಟ ಹಿನ್ನೆಲೆ ಕೊಲೆ ಪ್ರಕರಣವೂ ದಾಖಲಿಸಲಾಗಿದೆ.

English summary
ED has registered a money laundering case against tablighi jamaat markaz chief Maulana Saad & others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X