ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಹಣ ವರ್ಗಾವಣೆ: ಚೀನಾದ ಪ್ರಜೆ ಮೇಲೆ ಇಡಿ ತನಿಖೆ

|
Google Oneindia Kannada News

ನವದೆಹಲಿ, ಆಗಸ್ಟ್‌ 17: ಚೀನಾದ ಪ್ರಜೆ ಲುವೋ ಸಾಂಗ್ ಅಲಿಯಾಸ್ ಚಾರ್ಲಿ ಪೆಂಗ್ ವಿರುದ್ಧ ಮನಿ ಲಾಂಡರಿಂಗ್ ಕಾಯ್ದೆಯಡಿ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿದ್ದು, 1000 ಕೋಟಿ ರೂಪಾಯಿಗಳ ಹವಾಲಾ ದಂಧೆ ಪ್ರಕರಣದಲ್ಲಿ ಬಂಧಿಸಲಾಗಿದೆ.

ಸಾವಿರಾರು ಕೋಟಿ ಮೌಲ್ಯದ ಹವಾಲಾ ಜಾಲವನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದ ನಂತರ, ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಚೀನಾದ ಪ್ರಜೆಯ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದೆ.

ಭಿನ್ನಾಭಿಪ್ರಾಯಗಳನ್ನು ಸರಿದೂಗಿಸಿ ಭಾರತದೊಂದಿಗೆ ಕೆಲಸ ಮಾಡಲು ಸಿದ್ದ: ಚೀನಾಭಿನ್ನಾಭಿಪ್ರಾಯಗಳನ್ನು ಸರಿದೂಗಿಸಿ ಭಾರತದೊಂದಿಗೆ ಕೆಲಸ ಮಾಡಲು ಸಿದ್ದ: ಚೀನಾ

ವಿಶೇಷವೆಂದರೆ 2018 ರಲ್ಲಿ ದೆಹಲಿ ಪೊಲೀಸರು ನಕಲಿ ಪಾಸ್‌ಪೋರ್ಟ್ ಅಡಿಯಲ್ಲಿ ಈತನನ್ನು ಅರೆಸ್ಟ್‌ ಮಾಡಿದ್ದರು. ಆದರೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವನನ್ನು ಬಿಡುಗಡೆ ಮಾಡಲಾಯಿತು. ಇದೀಗ ಹಳೆ ಕೇಸ್ ಆಧರಿಸಿ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಚಾರ್ಲಿ ಪೆಂಗ್ ಅಲಿಯಾಸ್ ಲೌ ಸಾಂಗ್ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.

ED Files Money Laundering Case Against Charlie Peng Alias Lou Sang

ಇಡಿ ಮತ್ತು ಆದಾಯ ತೆರಿಗೆ ಇಲಾಖೆಯು ಪೆಂಗ್ ಮತ್ತು ಆತನ ಹವಾಲಾ ಜಾಲದ ಬಗ್ಗೆ ತನಿಖೆ ನಡೆಸುತ್ತಿವೆ. ಆತನು ಗೂಢಚರ್ಯೆಗಾಗಿ ಸಾಂಗ್‌ನ ರಹಸ್ಯ ಶಿಬಿರವನ್ನು ದೆಹಲಿಯ ಮಜ್ನು ಕಾ ತಿಲಾದಲ್ಲಿ ನಿರ್ಮಿಸಲಾಗಿದೆ. ಈತ ಲಂಚ ನೀಡುವ ಮೂಲಕ ಟಿಬೆಟಿಯನ್ ಧಾರ್ಮಿಕ ಮುಖಂಡ ದಲೈ ಲಾಮಾ ಮತ್ತು ಅವರ ಸಹಚರರ ಬಗ್ಗೆ ಮಾಹಿತಿ ಸಂಗ್ರಹಿಸುವಲ್ಲಿ ತೊಡಗಿದ್ದರು.

ಮೂಲಗಳು ಉಲ್ಲೇಖಿಸಿದ ಮಾಹಿತಿಯ ಪ್ರಕಾರ, ಪ್ರಾಥಮಿಕ ತನಿಖೆಯ ನಂತರ, ಚಾರ್ಲಿ ಪೆಂಗ್ ಈ ಕೆಲಸದಲ್ಲಿ ಜನರನ್ನು ಚೈನೀಸ್ ಆಪ್ ವಿ ಚಾಟ್ ಮೂಲಕ ಸಂಪರ್ಕಿಸುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಚೀನಾದ ಘಟಕಗಳು ನಡೆಸುತ್ತಿರುವ ಹವಾಲಾ ದಂಧೆಯ ತನಿಖೆಯಲ್ಲಿ, ಆದಾಯ ತೆರಿಗೆ ಅಧಿಕಾರಿಗಳು ಲು ಸಾಂಗ್ ಎಂಬ ಶಂಕಿತ ವ್ಯಕ್ತಿಯು ತನ್ನ ಗುರುತನ್ನು ಭಾರತೀಯ ನಾಗರಿಕನಾಗಿದ್ದ ಚಾರ್ಲಿ ಪಾಂಗ್ ಎಂದು ಬದಲಾಯಿಸಿರುವುದು ಕಂಡುಬಂದಿದೆ. ಅವರ ಬಳಿ ಭಾರತೀಯ ಪಾಸ್‌ಪೋರ್ಟ್ ಮತ್ತು ಆಧಾರ್ ಕಾರ್ಡ್ ಕೂಡ ಇತ್ತು. ಮಣಿಪುರದ ಹುಡುಗಿಯೊಬ್ಬಳನ್ನು ಮದುವೆಯಾಗಿದ್ದಳು. ಅವರಿಗೆ ಮಣಿಪುರದಿಂದ ಪಾಸ್‌ಪೋರ್ಟ್ ನೀಡಲಾಗಿದೆ.

English summary
ED Monday lodged a money laundering case against the Chinese national after the Income-Tax department unearthed a hawala network being run by Charlie Peng alias Lou Sang
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X