ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಸಚಿವ ಸತ್ಯೇಂದ್ರ ಜೈನ್ 4.8 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

|
Google Oneindia Kannada News

ನವದೆಹಲಿ, ಏಪ್ರಿಲ್‌ 06: ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಅವರ ಕುಟುಂಬ ಮತ್ತು ಕಂಪನಿಗಳಿಗೆ ಸಂಬಂಧಿಸಿದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ಆಸ್ತಿಗಳನ್ನು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ "ಸತ್ಯೇಂದ್ರ ಜೈನ್ ಅವರು ಲಾಭದಾಯಕವಾಗಿ ಒಡೆತನ ಹೊಂದಿದ್ದಾರೆ ಮತ್ತು ನಿಯಂತ್ರಿಸಿದ್ದಾರೆ. ಅವರ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ತಾತ್ಕಾಲಿಕವಾಗಿ ಆಸ್ತಿಯನ್ನು ಜಪ್ತಿ ಮಾಡಲಾಗಿದೆ," ಎಂದು ಈ ಸಂದರ್ಭದಲ್ಲೇ ಇಡಿ ಹೇಳಿದೆ.

ಸತ್ಯೇಂದರ್ ಜೈನ್ ಬಂಧನ ಸಾಧ್ಯತೆ ಕುರಿತು ಮಾತನಾಡಿದ ಕೇಜ್ರಿವಾಲ್

ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಡರಲ್ ಏಜೆನ್ಸಿ 2018 ರಲ್ಲಿ ಜೈನ್ ಅವರನ್ನು ಪ್ರಶ್ನಿಸಿತ್ತು. ಜೈನ್ ಅವರು ಮೊದಲು ಕೇಂದ್ರ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ನಂತರ ಆರ್ಕಿಟೆಕ್ಚರಲ್ ಕನ್ಸಲ್ಟೆನ್ಸಿ ಸಂಸ್ಥೆಯನ್ನು ಸ್ಥಾಪಿಸಲು ತಮ್ಮ ಕೆಲಸವನ್ನು ತೊರೆದರು.

ED attaches assets worth Rs 4.8 crore linked to Delhi Health minister Satyendar Jain and family

ಯಾವೆಲ್ಲಾ ಆಸ್ತಿಗಳು ಜಪ್ತಿ ಮಾಡಲಾಗಿದೆ?

ಅಕಿಂಚನ್ ಡೆವಲಪರ್ಸ್ ಪ್ರೈ.ಲಿ.ಗೆ ಸೇರಿದ 4.81 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು, ಇಂಡೋ ಮೆಟಲ್ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್, ಪರ್ಯಾಸ್ ಇನ್ಫೋಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್, ಮಂಗಳಾಯತನ್ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್, ಜೆ.ಜೆ. ಐಡಿಯಲ್ ಎಸ್ಟೇಟ್ ಪ್ರೈ. ಲಿಮಿಟೆಡ್, ವೈಭವ್ ಜೈನ್ ಅವರ ಪತ್ನಿ ಸ್ವಾತಿ ಜೈನ್, ಅಜಿತ್ ಪ್ರಸಾದ್ ಜೈನ್ ಅವರ ಪತ್ನಿ ಸುಶೀಲಾ ಜೈನ್ ಮತ್ತು ಸುನಿಲ್ ಜೈನ್ ಅವರ ಪತ್ನಿ ಇಂದು ಜೈನ್‌ಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಹೇಳಿದೆ.

Breaking: ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್‌ ಆಸ್ಪತ್ರೆಗೆ ದಾಖಲುBreaking: ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್‌ ಆಸ್ಪತ್ರೆಗೆ ದಾಖಲು

2015 ಮತ್ತು 2016 ರ ನಡುವಿನ ತನ್ನ ತನಿಖೆಯಲ್ಲಿ ಸತ್ಯೇಂದ್ರ ಕುಮಾರ್ ಜೈನ್ ಅವರು ಸಮಾಜ ಸೇವಕರಾಗಿದ್ದರೂ ಕೂಡಾ ಅವರ ಮಾಲೀಕತ್ವದ ಮತ್ತು ನಿಯಂತ್ರಣದಲ್ಲಿರುವ ಕಂಪನಿಗಳಿಗೆ ಲಾಭವನ್ನು ಪಡೆದಿದ್ದಾರೆ ಎಂದು ಇಡಿ ಹೇಳಿಕೊಂಡಿದೆ. ಈ ಕಂಪನಿಗಳು ಕೋಲ್ಕತ್ತಾ ಮೂಲದ ಎಂಟ್ರಿ ಆಪರೇಟರ್‌ಗಳಿಗೆ ಹವಾಲಾ ಮಾರ್ಗದಿಂದ 4.81 ಕೋಟಿ ಮೊತ್ತದ ವಸತಿ ಪಡೆದಿದೆ.

ED attaches assets worth Rs 4.8 crore linked to Delhi Health minister Satyendar Jain and family

ಈ ಮೊತ್ತವನ್ನು ಭೂಮಿಯನ್ನು ನೇರವಾಗಿ ಖರೀದಿಸಲು ಅಥವಾ ದೆಹಲಿ ಮತ್ತು ಸುತ್ತಮುತ್ತಲಿನ ಕೃಷಿ ಭೂಮಿಯನ್ನು ಖರೀದಿಸಲು ತೆಗೆದುಕೊಂಡ ಸಾಲದ ಮರುಪಾವತಿಗಾಗಿ ಬಳಸಲಾಗಿದೆ ಎಂದು ಕೇಂದ್ರ ಸಂಸ್ಥೆ ಮಾಹಿತಿ ನೀಡಿದೆ. ಎಎಪಿ ಸಚಿವರ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣವು ಆಗಸ್ಟ್ 2017 ರಲ್ಲಿ ಬಹಿರಂಗವಾಗಿದೆ. ಈ ಬಗ್ಗೆ ಸಿಬಿಐ ಎಫ್‌ಐಆರ್ ದಾಖಲು ಮಾಡಿದೆ.

ಜೈನ್ ಅವರು 2018 ರ ಹಿಂದಿನ ಐದು ವರ್ಷಗಳಲ್ಲಿ ದೆಹಲಿಯಲ್ಲಿ ತಮ್ಮ ನಿಯಂತ್ರಣದಲ್ಲಿರುವ ಕಂಪನಿಗಳ ಹೆಸರಿನಲ್ಲಿ 200 ಬಿಘಾಸ್ ಕೃಷಿ ಭೂಮಿಯನ್ನು ಖರೀದಿಸಿದ್ದಾರೆ. ಹಲವಾರು ಕೋಟಿ ರೂಪಾಯಿಗಳ ಕಪ್ಪು ಹಣವನ್ನು ಬಿಳಿ ಮಾಡಿದ್ದಾರೆ ಎಂದು ಸಿಬಿಐ ಹೇಳಿಕೊಂಡಿದೆ.

2010-16ರ ನಡುವೆ ದೆಹಲಿಯ ಔಚಂಡಿ, ಬವಾನಾ, ಕರಾಲಾ ಮತ್ತು ಮೊಹಮ್ಮದ್ ಮಜ್ವಿ ಗ್ರಾಮಗಳಲ್ಲಿ 200 ಬಿಘಾಸ್ ಭೂಮಿಯನ್ನು ಖರೀದಿಸಲು ಲಾಂಡರಿಂಗ್ ಮಾಡಿದ ಹಣವನ್ನು ಬಳಸಲಾಗಿದೆ ಎಂದು ಸಿಬಿಐ ಹೇಳಿಕೊಂಡಿದೆ. ಆದಾಯ ತೆರಿಗೆ ಇಲಾಖೆ ಕೂಡ ಈ ವಹಿವಾಟುಗಳ ಬಗ್ಗೆ ತನಿಖೆ ನಡೆಸಿತ್ತು ಮತ್ತು ಜೈನ್‌ಗೆ ಸಂಬಂಧಿಸಿದ 'ಬೇನಾಮಿ ಆಸ್ತಿಗಳನ್ನು' ಜಪ್ತಿ ಮಾಡಿ ಆದೇಶ ಹೊರಡಿಸಿದೆ.

English summary
ED attaches assets worth Rs 4.8 crore linked to Delhi Health minister Satyendar Jain and family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X