ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಸಮೀಕ್ಷೆ ವರದಿ: ಸರ್ಕಾರ ನಿರಾಶಾವಾದಿಯಾಗಿದೆ ಎಂದ ಕಾಂಗ್ರೆಸ್ ನಾಯಕರು

|
Google Oneindia Kannada News

ನವದೆಹಲಿ, ಜುಲೈ 04: ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ ಮೊದಲ ಆರ್ಥಿಕ ಸಮೀಕ್ಷೆಯ ವರದಿ ಇಂದು ಹೊರಬಿದ್ದಿದ್ದು, ಅದಕ್ಕೆ ವಿವಿಧ ರೀತಿಯ ಪ್ರತಿಕ್ರಿಯೆ ಹೊರಬಂದಿದೆ.

ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಮಣಿಯನ್ ಅವರು ತಮ್ಮ ಮೊದಲ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿಗೆ ಸಲ್ಲಿಸಿದರು. ನಾಳೆ, ಅಂದರೆ ಜುಲೈ 5 ಶುಕ್ರವಾರದಂದು ಬಜೆಟ್ ಮಂಡನೆಯಾಗಲಿದ್ದು, ಅದಕ್ಕೂ ಒಂದು ದಿನ ಮೊದಲು ಸಮೀಕ್ಷೆ ವರದಿ ಹೊರಬಂದಿದೆ. 2018-19ರ ಆರ್ಥಿಕ ಸಮೀಕ್ಷೆಯಲ್ಲಿ ಭಾರತದ 2019-2020ರ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆಯ ದರವನ್ನು ಶೇ 7ರಷ್ಟು ಅಂದಾಜಿಸಲಾಗಿದ್ದು, ಜಿಡಿಪಿ ದರದಲ್ಲಿ ಇಳಿಕೆಯಾಗಿದೆ ಎಂದು ಸಮೀಕ್ಷೆ ತನ್ನ ವರದಿಯಲ್ಲಿ ಹೇಳಿದೆ.

ನಿರುದ್ಯೋಗದ ಪ್ರಮಾಣದಲ್ಲಿ ತೀವ್ರ ಹೆಚ್ಚಳವಾಗಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿರುವ ಹೊತ್ತಲ್ಲಿ ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳಿವೆ. ಆ ನಿಟ್ಟಿನಲ್ಲಿ ಆರ್ಥಿಕ ಸೀಕ್ಷೆ ವರದಿಯು ಆರ್ಥಿಕತೆಯ ಸದ್ಯದ ಸ್ಥಿತಿ ಮತ್ತು ಭವಿಷ್ಯದ ಸವಾಲುಗಳನ್ನು ತೋರಿಸಿಕೊಟ್ಟಿದೆ.

ಆರ್ಥಿಕ ಸಮೀಕ್ಷೆ ಮಂಡನೆ: ಶೇ 7ರ ಜಿಡಿಪಿ ಬೆಳವಣಿಗೆ ನಿರೀಕ್ಷೆ ಆರ್ಥಿಕ ಸಮೀಕ್ಷೆ ಮಂಡನೆ: ಶೇ 7ರ ಜಿಡಿಪಿ ಬೆಳವಣಿಗೆ ನಿರೀಕ್ಷೆ

ಆರ್ಥಿಕ ಸಮೀಕ್ಷೆಯ ವರದಿಗೆ ಸಂಬಂಧಿಸಿದಂತೆ ಪರ ಮತ್ತು ವಿರೋಧದ ಪ್ರತಿಕ್ರಿಯೆಗಳು ಹೊರಬರುತ್ತಿದ್ದು, ಅದರಲ್ಲಿ ಕೆಲವು ಹೀಗಿವೆ...

ಮಾಜಿ ವಿತ್ತ ಸಚಿವ ಚಿದಂಬರಂ

ಮಾಜಿ ವಿತ್ತ ಸಚಿವ ಚಿದಂಬರಂ

"ಆರ್ಥಿಕ ಸಮೀಕ್ಷೆಯ ಮೊದಲ ಅಧ್ಯಾಯದ ಮೊದಲ ಸಾಲಲ್ಲಿ ಸ್ವಗುಣಗಾನವಿದೆ. ವಲಯ ಆಧಾರಿತ ಅಭಿವೃದ್ಧಿಯ ಬಗ್ಗೆ ವಿವರವಿಲ್ಲ! ಆರ್ಥಿಕ ಸಮೀಕ್ಷೆಯ ಮೂಲಕ ಸರ್ಕಾರವೇ ಆರ್ಥಿಕತೆ ಬಗ್ಗೆ ನಿರಾಶಾವಾದಿಯಾಗಿ ಮಾತನಾಡುತ್ತಿದೆ ಎಂದು ನನಗನ್ನಿಸುತ್ತಿದೆ"- ಪಿ. ಚಿದಂಬರಂ, ಮಾಜಿ ವಿತ್ತ ಸಚಿವರು

ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್

ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್

ಆರ್ಥಿಕ ಸಮೀಕ್ಷೆ ವರದಿಯು ಸರ್ಕಾರದಿಂದ ಜಿಡಿಪಿ ದರವನ್ನು ಏರಿಸುವ ಜೊತೆಗೆ, ಹಣಕಾನರಅಜೀವ ಕುಮಅರಸಿ ಸ್ಥಿರತೆಯನ್ನು ಕಾಪಾಡುವ ಪ್ರಯತ್ನವನ್ನೂ ಮಾಡುತ್ತಿರುವುದನ್ನು ಪ್ರತಿಬಿಂಬಿಸಿದೆ- ರಾಜೀವ್ ಕುಮಾರ್, ನೀತಿ ಆಯೋಗದ ಉಪಾಧ್ಯಕ್ಷರು

ಬಜೆಟ್ ಬಗ್ಗೆ ಗೊತ್ತಿರಬೇಕಾದ ಕನಿಷ್ಠ ಮಾಹಿತಿಯ ಸರಳ ವಿವರಣೆಬಜೆಟ್ ಬಗ್ಗೆ ಗೊತ್ತಿರಬೇಕಾದ ಕನಿಷ್ಠ ಮಾಹಿತಿಯ ಸರಳ ವಿವರಣೆ

ರಂದೀಪ್ ಸಿಂಗ್ ಸುರ್ಜೇವಾಲಾ

ರಂದೀಪ್ ಸಿಂಗ್ ಸುರ್ಜೇವಾಲಾ

ಆರ್ಥಿಕ ಸಮೀಕ್ಷೆಯು ಆರ್ಥಿಕತೆಯ ಬಗ್ಗೆ ನಿರಾಶಾವಾದಿಯಾಗಿರುವಂತಿದೆ. ಆರ್ಥಿಕತೆಯಲ್ಲಿ ಏಳಿಗೆ ಸಾಧಿಸದ ಸರ್ಕಾರವನ್ನು ಮೇಲೆತ್ತುವ ದುರ್ಬಲ ಪ್ರಯತ್ನ ಈ ವರದಿಯಲ್ಲಿ ಕಾಣಿಸುತ್ತಿದೆ.

ಬಿಜೆಪಿ ಮುಖಂಡ ಸುರೇಶ್ ಪ್ರಭು

ಬಿಜೆಪಿ ಮುಖಂಡ ಸುರೇಶ್ ಪ್ರಭು

ಭಾರತ ಸದಸ್ಯದಲ್ಲೇ 5 ಟ್ರಿಲಿಯನ್ ಆರ್ಥಕತೆಯಾಗಲಿದೆ. ಕೃಷಿ, ಕೈಗಾರಿಕೆ, ಸೇವೆ ಎಲ್ಲವೂ ನಮ್ಮ ಒಟ್ತು ತಲಾದಾಯವನ್ನು ಹೆಚ್ಚಿಸಬೇಕಿದೆ. ಈ ಎಲ್ಲವೂ ಸಾಧ್ಯವಾಗುವುದು ನಾವೆಲ್ಲ ಟೀಂ ಇಂಡಿಯಾ ಎಂಬ ಭಾವನೆಯಿಂದ ಒಂದಾಗಿ ಕೆಲಸ ಮಾಡಿದಾಗ- ಸುರೇಶ್ ಪ್ರಭು, ಬಿಜೆಪಿ ಮುಖಂಡ

English summary
The first Economic Surveyof the Narendra Modi-led NDA government's second tenure has been tabled in the Parliament today. Congress leaders call it a pessimistic thinking,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X