ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಕರನ್ ಪ್ರಕರಣ ತನಿಖೆಗೆ ಅಡ್ಡಿಯಾಯ್ತು ವಾಟ್ಸಾಪ್ ತಂತ್ರಜ್ಞಾನ

ಟಿಟಿವಿ ದಿನಕರನ್ ಹಾಗೂ ಅವರ ಏಜೆಂಟ್ ಸುಖೇಶ್ ನಡುವಿನ ಸಂಭಾಷಣೆಗಳನ್ನು ಆಲಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅದರೆ, ಫೋನ್ ಕಾಲ್ ಗಳನ್ನು ಬೇಧಿಸಲು ಸಾಧ್ಯವಾಗಿಲ್ಲ.

By ಅನುಷಾ ರವಿ
|
Google Oneindia Kannada News

ನವದೆಹಲಿ, ಏಪ್ರಿಲ್ 25: ಚುನಾವಣಾ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಅವರ ಸಂಬಂಧಿ ಟಿಟಿವಿ ದಿನಕರನ್ ಹಾಗೂ ಈ ಪ್ರಕರಣದಲ್ಲಿ ಅವರ ಏಜೆಂಟ್ ಆಗಿ ಕಾರ್ಯ ನಿರ್ವಹಿಸಿರುವ ಸುಖೇಶ್ ಚಂದ್ರಶೇಖರ್ ಅವರ ನಡುವಿನ ತನಿಖೆಗೆ ಕೊಂಚ ಹಿನ್ನೆಡೆಯುಂಟಾಗಿದೆ.

ಇದಕ್ಕೆ ಕಾರಣ, ಈ ಇಬ್ಬರೂ ವಾಟ್ಸಾಪ್ ನಲ್ಲಿ ಫೋನ್, ಮೆಸೇಜ್ ಮಾಡಿಕೊಂಡಿರುವುದು. ಇವರಿಬ್ಬರ ನಡುವಿನ ಸಂಭಾಷಣೆಗಳನ್ನು ಆಲಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅದರೆ, ಫೋನ್ ಕಾಲ್ ಗಳನ್ನು ಬೇಧಿಸಲು ಸಾಧ್ಯವಾಗಿಲ್ಲ.

ECI bribery row: Why Delhi crime branch can't crack Dinakaran's calls

ವಾಟ್ಸಾಪ್ ಸಂಸ್ಥೆಯು ತನ್ನ ಫೋನ್ ಕಾಲ್ಸ್, ಮೇಸೇಜ್ ಹಾಗೂ ವೀಡಿಯೋಗಳಲ್ಲಿ ಎನ್-ಟು-ಎಂಡ್ ಎನ್ ಕ್ರಿಪ್ಷನ್ ಎಂಬ ತಂತ್ರಜ್ಞಾನವನ್ನು ಉಪಯೋಗಿಸುತ್ತಿರುವುದರಿಂದ ಯಾರೂ ಈ ಮೇಸೆಜ್ ಹಾಗೂ ಕರೆಗಳನ್ನು ಬೇಧಿಸಲು ಸಾಧ್ಯವಾಗುವುದಿಲ್ಲ.

ಆದರೂ, ದಿನಕರನ್ ಅವರು ವಿಚಾರಣೆ ವೇಳೆ, ತಾವು ಸುಖೇಶ್ ನನ್ನು ಭೇಟಿಯಾಗಿದ್ದಾಗಿ ಒಪ್ಪಿಕೊಂಡಿದ್ದಾರೆಂದು ಹೇಳಲಾಗಿದೆ. ಆದರೂ, ಅವರ ನಡುವಿನ ಮಾತುಕತೆಯ ಸಂಪೂರ್ಣ ವಿವರಗಳನ್ನು ತಿಳಿಯಲು ಅವರಿಬ್ಬರ ವಾಟ್ಸಾಪ್ ಕರೆ, ಮೆಸೇಜುಗಳನ್ನು ಜಾಲಾಡಲು ನಿರ್ಧರಿಸಿದೆ.

English summary
The Delhi police cannot crack T T Dinakaran's calls. The calls between Dinakaran and Sukesh Chandrasekhar were made on an encrypted WhatsApp network and this may be tough for the cops to breach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X