ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ಅಮಿತ್ ಶಾ ಹಾಗೂ ರಾಹುಲ್ ವಿರುದ್ಧ ದೂರು ವಿಚಾರಣೆ

|
Google Oneindia Kannada News

ನವದೆಹಲಿ, ಏಪ್ರಿಲ್ 29: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಇರುವ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಬಗ್ಗೆ ತೀರ್ಮಾನ ಕೈಗೊಳ್ಳಲು ಮಂಗಳವಾರ ಚುನಾವಣೆ ಆಯೋಗವು ಸಭೆ ಸೇರಲಿದೆ ಎಂದು ಚುನಾವಣೆ ಸಮಿತಿಯ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಹಲವು ಆರೋಪಗಳು ಇದ್ದರೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ, ಇದಕ್ಕೂ ಮುನ್ನ ಕಾಂಗ್ರೆಸ್ ನಿಂದ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಲಾಗಿದೆ.

ಮೋದಿ, ಶಾ ವಿರುದ್ಧ ಕ್ರಮ ಜರುಗಿಸದ ಆಯೋಗದ ವಿರುದ್ಧ ಸುಪ್ರೀಂಗೆ ದೂರುಮೋದಿ, ಶಾ ವಿರುದ್ಧ ಕ್ರಮ ಜರುಗಿಸದ ಆಯೋಗದ ವಿರುದ್ಧ ಸುಪ್ರೀಂಗೆ ದೂರು

ಕಾಂಗ್ರೆಸ್ ನ ಸುಷ್ಮಿತಾ ದೇವ್ ತಮ್ಮ ಅರ್ಜಿಯಲ್ಲಿ, ಮೋದಿ ಹಾಗೂ ಶಾ ದ್ವೇಷ ಭಾಷಣ ಮಾಡಿದ್ದಾರೆ ಹಾಗೂ ಸಶಸ್ತ್ರ ಪಡೆಯನ್ನು ರಾಜಕಾರಣಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಅರೋಪ ಮಾಡಿದ್ದಾರೆ.

EC to decide on complaints against PM Modi, Rahul Gandhi tomorrow

ಕಾಂಗ್ರೆಸ್ ನ ಮಹಿಳಾ ವಿಭಾಗದ ಮುಖ್ಯಸ್ಥೆ ಸುಷ್ಮಿತಾ ದೇವ್ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ, ಮಾರ್ಚ್ ಹತ್ತರಂದು ಚುನಾವಣೆ ನೀತಿ ಸಂಹಿತೆ ಜಾರಿ ಆದಾಗಿನಿಂದ ಕಾಂಗ್ರೆಸ್ ನಿಂದ ನಲವತ್ತಕ್ಕೂ ಹೆಚ್ಚು ಪ್ರಕರಣಗಳನ್ನು ಚುನಾವಣೆ ಆಯೋಗದ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.

ಮೋದಿ ವಿರುದ್ಧ ಆರು ಹಾಗೂ ಅಮಿತಾ ಶಾ ವಿರುದ್ಧ ಎರಡು ಸಂದರ್ಭಗಳಲ್ಲಿ ನೀತಿ ಸಂಹಿತೆ ಮೀರಿದ ದೂರು ಕಾಂಗ್ರೆಸ್ ನಿಂದ ಚುನಾವಣೆ ಆಯೋಗದ ಬಳಿ ದಾಖಲಾಗಿವೆ.

English summary
Election Commission will meet tomorrow to decide on poll code violation complaints against Prime Minister Narendra Modi, BJP chief Amit Shah and Congress president Rahul Gandhi, a senior poll panel official said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X