ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿಯಲ್ಲಿ ನಡುಗಿದ ಭೂಮಿ; 4.6ರ ತೀವ್ರತೆ ದಾಖಲು

|
Google Oneindia Kannada News

ನವದೆಹಲಿ, ಮೇ 29 : ನವದೆಹಲಿಯ ಜನರು ಶುಕ್ರವಾರ ರಾತ್ರಿ ಕೆಲವು ಕ್ಷಣಗಳ ಕಾಲ ಆತಂಕಕ್ಕೆ ಒಳಗಾದರು. ಮಳೆ ಮತ್ತು ಗಾಳಿಯ ನಡುವೆಯೇ ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪದ ಅನುಭವ ಆಗಿದೆ.

ಶುಕ್ರವಾರ ರಾತ್ರಿ 9.08ರ ಸುಮಾರಿಗೆ ನವದೆಹಲಿಯಲ್ಲಿ ಭೂಮಿ ನಡುಗಿದ ಅನುಭವ ಆಗಿದೆ. ಭಯಭೀತರಾದ ಜನರು ಮನೆಯಿಂದ ಹೊರಗೆ ಬಂದರು. ರಿಕ್ಟರ್ ಮಾಪಕದಲ್ಲಿ 4.6ರ ತೀವ್ರತೆಯ ಕಂಪನ ದಾಖಲಾಗಿದೆ.

ಮೆಕ್ಸಿಕೋದ ಪಶ್ಚಿಮಕ್ಕಿರುವ ಪೆಸಿಫಿಕ್ ಮಹಾಸಾಗರದಲ್ಲಿ ಪ್ರಬಲ ಭೂಕಂಪಮೆಕ್ಸಿಕೋದ ಪಶ್ಚಿಮಕ್ಕಿರುವ ಪೆಸಿಫಿಕ್ ಮಹಾಸಾಗರದಲ್ಲಿ ಪ್ರಬಲ ಭೂಕಂಪ

ಭೂಕಂಪದ ಕೇಂದ್ರ ಬಿಂದು ಹರ್ಯಾಣದ ರೋಟಕ್‌ನಲ್ಲಿ ದಾಖಲಾಗಿದೆ. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಭೂಮಿ ನಡುಗಿದ ಅನುಭವವಾಗಿದೆ.

ಮಣಿಪುರದಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲುಮಣಿಪುರದಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲು

Earthquake In New Delhi People Rush Out Of Home

ಹಲವಾರು ಜನರು ಭೂಮಿ ನಡುಗಿದ ಅನುಭವವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. 3.3 ಕಿ. ಮೀ. ತನಕ ಭೂಮಿ ನಡುಗಿದ ಅನುಭವ ಉಂಟಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಚೀನಾದಲ್ಲಿ 5.2 ತೀವ್ರತೆಯ ಪ್ರಬಲ ಭೂಕಂಪ: 4 ಮಂದಿ ಸಾವು ಚೀನಾದಲ್ಲಿ 5.2 ತೀವ್ರತೆಯ ಪ್ರಬಲ ಭೂಕಂಪ: 4 ಮಂದಿ ಸಾವು

ಭೂಕಂಪದ ಕೇಂದ್ರ ಬಿಂದು ಹರ್ಯಾಣದ ರೋಟಕ್‌ ನವದೆಹಲಿಯಿಂದ 65 ಕಿ.ಮೀ. ದೂರದಲ್ಲಿದೆ. 7 ರಿಂದ 8 ಸೆಕೆಂಡ್ ತನಕ ಭೂಮಿ ಕಂಪಿಸಿದೆ ಎಂದು ಜನರು ಟ್ವೀಟ್ ಮಾಡಿದ್ದಾರೆ.

English summary
On Friday May 29, 2020 night an earthquake of magnitude 4.6 struck near Delhi. People rush out of their homes for some time. The epicentre of the earthquake was near Rohtak, Haryana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X