ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ-ಚೀನಾ ಅಧ್ಯಕ್ಷ ಭೇಟಿ: ಕಾಶ್ಮೀರದ ಬಗ್ಗೆ ಪ್ರಸ್ತಾಪವಾಗಿಲ್ಲ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 12: ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ನಡೆದ ಮಾತುಕತೆ ವೇಳೆ ಕಾಶ್ಮೀರದ ವಿಚಾರ ಪ್ರಸ್ತಾಪವೇ ಆಗಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ.

ತಮಿಳುನಾಡಿನ ಮಹಾಬಲಿಪುರಂ ನಲ್ಲಿ ನಡೆದ ಎರಡನೇ ಮೋದಿ-ಕ್ಸಿ ಅನೌಪಚಾರಿಕ ಶೃಂಗಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ವಿದೇಶಾಂಗ ಕಾರ್ಯದರ್ಶಿಮಾತನಾಡಿದ್ದು ಈ ಚರ್ಚೆಯಲ್ಲಿ ಎಲ್ಲಿಯೂ ಖಾಶ್ಮೀರ ವಿಷಯ ಪ್ರಸ್ತಾಪವಾಗಿಲ್ಲ ಎಂದು ಮತ್ತು ಅದೆಂದಿಗೂ ಭಾರತದ ಆಂತರಿಕ ವಿಚಾರ ಎಂದು ಅವರು ಹೇಳಿದರು.

ಮಹಾಬಲಿಪುರಂ ಬೀಚ್‌ನಲ್ಲಿ ಕಸ ಹೆಕ್ಕಿದ ಮೋದಿ: ವೈರಲ್ ವಿಡಿಯೋಮಹಾಬಲಿಪುರಂ ಬೀಚ್‌ನಲ್ಲಿ ಕಸ ಹೆಕ್ಕಿದ ಮೋದಿ: ವೈರಲ್ ವಿಡಿಯೋ

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಭಾರತದ ನಿರ್ಧಾರವನ್ನು ಅನುಸರಿಸಿ ಬಿಕ್ಕಟ್ಟಿನ ಸೃಷ್ಟಿಯ ಕುರಿತು ಮರುಪರಿಶೀಲಿಸುವ ನಿಟ್ಟಿನಲ್ಲಿ ಉಭಯ ನಾಯಕರು ಯೋಜಿಸಿದ್ದಾರೆ.

During Modi-Xi Talks Kashmir Issue Not Discussed

ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ವಿವೇಕಯುತವಾಗಿ ನಿರ್ವಹಿಸುತ್ತೇವೆ ಮತ್ತು ಅವುಗಳನ್ನು ವಿವಾದಗಳಾಗಲು ಅನುಮತಿಸುವುದಿಲ್ಲ ನಾವು ಪರಸ್ಪರರ ಕಾಳಜಿಗಳ ಬಗ್ಗೆ ಸೂಕ್ಷ್ಮವಾಗಿರುತ್ತೇವೆ ಮತ್ತು ನಮ್ಮ ಸಂಬಂಧಗಳು ಪ್ರಪಂಚದಾದ್ಯಂತ ಶಾಂತಿ ಮತ್ತು ಸ್ಥಿರತೆಗೆ ಕಾರಣವಾಗುತ್ತವೆ.

ಮುಂದಿನ ಭಾರತ-ಚೀನಾ ಶೃಂಗಸಭೆಗೆ ಅಧ್ಯಕ್ಷ ಜಿನ್‌ಪಿಂಗ್ ಅವರು ಪ್ರಧಾನಿ ಮೋದಿಯವರನ್ನು ಚೀನಾಕ್ಕೆ ಆಹ್ವಾನಿಸಿದ್ದಾರೆ ಎಂದು ವಿಜಯ್ ಗೋಖಲೆ ಹೇಳಿದ್ದಾರೆ.
ಇವು ನಮಗೆ ಇನ್ನಷ್ಟು ದೊಡ್ಡ ಸಾಧನೆಗಳು ಮತ್ತು ಭವಿಷ್ಯದಲ್ಲಿ ಹೆಚ್ಚಿನದನ್ನು ಮಾಡಲು ಪ್ರೇರಣೆ ನೀಡಲಿದೆ ಎಂದು ನಾಯಕರು ಹೇಳಿದ್ದಾಗಿ ಗೋಖಲೆ ವಿವರಿಸಿದರು.

ಕಾಶ್ಮೀರದ ವಿಚಾರ ಎಂದಿಗೂ ಭಾರತದ ಆಂತರಿಕ ವಿಚಾರ ಅದನ್ನು ಬೇರೆ ದೇಶಗಳ ಜೊತೆ ಯಾವುದೇ ಕಾರಣಕ್ಕೂ ಚರ್ಚೆ ನಡೆಸುವುದಿಲ್ಲ.ಭಯೋತ್ಪಾದನೆಯ ಸವಾಲನ್ನು ಎದುರಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಮೋದಿ ಮತ್ತು ಕ್ಸಿ ಒಪ್ಪಿಕೊಂಡರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಉಗ್ರವಾದದ ಸವಾಲುಗಳನ್ನು ಎದುರಿಸುವುದು ಮುಖ್ಯ ಎಂದು ಎರಡೂ ನಾಯಕರು ಒಪ್ಪಿಕೊಂಡರು.

English summary
The Kashmir issue was not discussed during the one-on-one talks between Prime Minister Narendra Modi and Chinese President Xi Jinping, Foreign Secretary Vijay Gokhale said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X