ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಸು ನಿಟ್ಟುಸಿರು ಬಿಟ್ಟ ದೆಹಲಿ ಜನತೆ: ಭಾರೀ ಏರಿಕೆಗೊಂಡಿದ್ದ ಟೊಮ್ಯಾಟೊ ಬೆಲೆ ಕೊಂಚ ಇಳಿಕೆ

|
Google Oneindia Kannada News

ದೆಹಲಿ, ಜುಲೈ 13: ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಕೆಜಿಗೆ 70 ರುಪಾಯಿ ತಲುಪಿದ್ದ ಟೊಮ್ಯಾಟೊ ಬೆಲೆ ಸೋಮವಾರ ಕೊಂಚ ಇಳಿಕೆ ಸಾಧಿಸಿದೆ. ದೆಹಲಿಯ ಅಸಂಘಟಿತ ಚಿಲ್ಲರೆ ಮಾರುಕಟ್ಟೆಗಳಲ್ಲಿ ಮಾತ್ರವಲ್ಲದೆ, ಮದರ್ ಡೈರಿಯ ಸಫಾಲ್ ಚಿಲ್ಲರೆ ತರಕಾರಿ ಮಳಿಗೆಗಳಲ್ಲಿ ಮತ್ತು ಬಿಗ್‌ಬಾಸ್ಕೆಟ್ ಮತ್ತು ಗ್ರೋಫರ್ಸ್‌ನ ರಿಟೈಲ್‌ಗಳಲ್ಲೂ ಜೂನ್ 1 ರಿಂದ ವಾರಕ್ಕೊಮ್ಮೆ ಬೆಲೆಗಳು ಪ್ರತಿ ಕೆ.ಜಿ.ಗೆ 10 ರುಪಾಯಿ ಹೆಚ್ಚಾಗಿದೆ.

Recommended Video

Steve Jobs , ಹೆತ್ತವರಿಗೆ ಬೇಡವಾಗಿದ್ದ ಕೂಸು , ಜಗತ್ತನ್ನೇ ಗೆದ್ದ ಕಥೆ | Oneindia Kannada

ಪೂರೈಕೆ ಕೊರತೆ ಹೆಚ್ಚಾಗಿದ್ದು, ಸದ್ಯ ದೆಹಲಿಯ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿ ಟೊಮ್ಯಾಟೊಗೆ 45 ರಿಂದ 50 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ರಿಟೇಲ್ ಶಾಪ್‌ಗಳಲ್ಲಿ, ಶಾಪಿಂಗ್‌ ಮಾಲ್‌ಗಳಲ್ಲಿ ಪ್ರತಿ ಕೆಜಿಗೆ 47 ರಿಂದ 64 ರುಪಾಯಿವರೆಗೆ ದರವಿದೆ.

ಟೊಮ್ಯಾಟೊ ಬೆಲೆ ಏರಿಕೆ, ಕೇಂದ್ರ ಸಚಿವರ ಪಾಸ್ವಾನ್ ಸಮರ್ಥನೆಟೊಮ್ಯಾಟೊ ಬೆಲೆ ಏರಿಕೆ, ಕೇಂದ್ರ ಸಚಿವರ ಪಾಸ್ವಾನ್ ಸಮರ್ಥನೆ

ಭಾನುವಾರ ಬಿಗ್‌ಬಾಸ್ಕೆಟ್ ಟೊಮೆಟೊವನ್ನು ಪ್ರತಿ ಕೆ.ಜಿ.ಗೆ 60-66 ರೂ.ಗಳಲ್ಲಿ ಮತ್ತು ಗ್ರೋಫರ್ಸ್ ಅನ್ನು ಪ್ರತಿ ಕೆ.ಜಿ.ಗೆ 53-55 ರೂ.ಗೆ ಮಾರಾಟ ಮಾಡುತ್ತಿತ್ತು.

Due To Supply Shortage: Tomato Prices Rs 50-60/Kg In Delhi

ಟೊಮ್ಯಾಟೊ ಉತ್ಪಾದಕ ರಾಜ್ಯಗಳಿಂದ ಕಳೆದ ಕೆಲವು ವಾರಗಳಲ್ಲಿ ಆಗಮನವು ತಡವಾಗುತ್ತಿದ್ದು, ಸಗಟು ಮಂಡಳಿಗಳಲ್ಲಿಯೂ ಬೆಲೆಗಳು ಹೆಚ್ಚಾಗುತ್ತಿವೆ ಎಂದು ವ್ಯಾಪಾರಿಗಳು ಹೇಳಿದ್ದರು.

ದಕ್ಷಿಣ ಭಾರತದ ಟೊಮ್ಯಾಟೊ ಉತ್ಪಾದನಾ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳವು ಬೆಳೆ ಕೊಯ್ಲು ಮಾಡುವುದನ್ನು ನಿರ್ಬಂಧಿಸಿದೆ ಎಂದು ವ್ಯಾಪಾರಿಗಳು ಉಲ್ಲೇಖಿಸಿದ್ದಾರೆ.

English summary
Retail tomato prices Rs 50-60 per kg on Monday in the national capital due to tight supply of the key kitchen staple during the lean period, a trade report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X