ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ರಾಜ್ಯಗಳಲ್ಲಿ ಕೊರೊನಾ ಲಸಿಕೆ ಕಾರ್ಯಕ್ರಮದ ಪೂರ್ವಾಭ್ಯಾಸ

|
Google Oneindia Kannada News

ನವದೆಹಲಿ, ಡಿಸೆಂಬರ್ 25: ಭಾರತದಲ್ಲಿ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಇನ್ನೂ ಅನುಮತಿ ದೊರೆತಿಲ್ಲ. ಕೊರೊನಾ ಲಸಿಕೆಯ ಸಾಮೂಹಿಕ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಮುಂದಿನ ವಾರ ದೇಶದ ನಾಲ್ಕು ರಾಜ್ಯಗಳಲ್ಲಿ ಲಸಿಕೆ ಪ್ರಕ್ರಿಯೆಯ ಪೂರ್ವಾಭ್ಯಾಸ ನಡೆಸುವುದಾಗಿ ತಿಳಿದುಬಂದಿದೆ.

ಈಗಾಗಲೇ ಲಸಿಕೆ ನೀಡುವ ತರಬೇತಿಯೂ ಪೂರ್ಣಗೊಂಡಿರುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಎಲ್ಲಾ ಸಿದ್ಧತೆಗಳು ನಡೆದಿರುವುದರಿಂದ ನಾಲ್ಕು ರಾಜ್ಯಗಳಲ್ಲಿ ಪೂರ್ವ ತಯಾರಿ ನಡೆಸುವುದಾಗಿ ಕೇಂದ್ರ ತಿಳಿಸಿದೆ. ಅಸ್ಸಾಂ, ಆಂಧ್ರ ಪ್ರದೇಶ, ಗುಜರಾತ್, ಪಂಜಾಬ್ ರಾಜ್ಯಗಳಲ್ಲಿ ಮುಂದಿನ ವಾರದಿಂದ ಪೂರ್ವಾಭ್ಯಾಸ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಕೊರೊನಾ ರೂಪಾಂತರ ಸೋಂಕು ಪತ್ತೆಗೆ ಎಷ್ಟು ಸಮಯ ಬೇಕಾಗಬಹುದು?ಕೊರೊನಾ ರೂಪಾಂತರ ಸೋಂಕು ಪತ್ತೆಗೆ ಎಷ್ಟು ಸಮಯ ಬೇಕಾಗಬಹುದು?

ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಏನಾದರೂ ಲೋಪವಿದೆಯೇ ಎಂಬುದನ್ನು ಮುನ್ನವೇ ತಿಳಿದುಕೊಳ್ಳಲು ಇದು ನೆರವಾಗಲಿದೆ. ಪೂರ್ವಾಭ್ಯಾಸದಿಂದ ಕೊರೊನಾ ಲಸಿಕಾ ಕಾರ್ಯಕ್ರಮವನ್ನು ಪರೀಕ್ಷಿಸಿದಂತಾಗುತ್ತದೆ. ಕೋವಿನ್ ಆಪ್ ಬಳಕೆಯ ಕುರಿತೂ ಕಂಡುಕೊಳ್ಳಲು ಸಹಾಯಕವಾಗುತ್ತದೆ" ಎಂದು ಸರ್ಕಾರ ತಿಳಿಸಿದೆ.

 Dry Run To Be Conducted In Four Districts Next Week

ಪಂಜಾಬ್ ನಲ್ಲಿ ಲೂದಿಯಾನ, ಶಾಹೀದ್ ಭಗತ್ ಸಿಂಗ್ ನಗರದಲ್ಲಿ ಪೂರ್ವಾಭ್ಯಾಸ ಆರಂಭಿಸಲಿದ್ದು, ಒಂದು ರಾಜ್ಯದ ಐದು ಕಡೆಗಳಲ್ಲಿ ಅಭ್ಯಾಸ ನಡೆಯಲಿದೆ. ರಾಜ್ಯ ಮಟ್ಟದಿಂದ 7000 ಮಂದಿ ತರಬೇತಿ ಪಡೆದಿದ್ದಾರೆ. ಸದ್ಯಕ್ಕೆ ಭಾರತ್ ಬಯೋಟೆಕ್, ಸೆರಂ ಇನ್ ಸ್ಟಿಟ್ಯೂಟ್ ಹಾಗೂ ಫೈಜರ್ ಲಸಿಕೆಯ ತುರ್ತು ಬಳಕೆಗೆ ಅರ್ಜಿ ಸಲ್ಲಿಸಿದ್ದು, ಡಿಸಿಜಿಐ ಪರಿಶೀಲನೆ ನಡೆಸುತ್ತಿದೆ. ಡಿಸೆಂಬರ್ ಮುಗಿಯುವುದರೊಳಗೆ ಒಪ್ಪಿಗೆ ದೊರೆಯುವ ನಿರೀಖ್ಷೆಯಿದ್ದು, ಜನವರಿಯಿಂದ ಲಸಿಕಾ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಲಸಿಕಾ ಕಾರ್ಯಕ್ರಮದ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಕೊರೊನಾ ಸೋಂಕಿನ ವಿರುದ್ಧ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವವರಿಗೆ, 50 ವರ್ಷ ಮೇಲ್ಪಟ್ಟವರಿಗೆ, ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ 50 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತದೆ.

English summary
Dry run for vaccine administration will be conducted in Andhra Pradesh, Assam, Gujarat and Punjab starting from next week
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X