ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಕ್ಕೆ ಔಷಧಿ: ರಾಮಾಯಣ ಉಲ್ಲೇಖಿಸಿದ ಬ್ರೆಜಿಲ್ ಅಧ್ಯಕ್ಷ..!

|
Google Oneindia Kannada News

ನವದೆಹಲಿ, ಏಪ್ರಿಲ್ 8: ಕೊರೊನಾ ಮಹಾಮಾರಿ ಇಡೀ ಜಗತ್ತನ್ನು ಕಾಡುತ್ತಿದೆ. ಈ ಜಾಗತಿಕ ಪೀಡಿಗಿಗೆ ಔಷಧಿ ಕಂಡು ಹಿಡಿಯಲಾಗದೇ ಚೀನಾ, ಅಮೇರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಒದ್ದಾಡುತ್ತಿವೆ.

ಆದರೆ, ಕೊರೊನಾ ರೋಗಿಗಳನ್ನು ಉಳಿಸಲು ಹೈಡ್ರಾಕ್ಸಿಕ್ಲೋರೋಕ್ವಿನ್ (ಮಲೇರಿಯಾ ತಡೆ ಔಷಧಿ) ನೆರವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಹೈಡ್ರಾಕ್ಸಿಕ್ಲೋರೋಕ್ವಿನ್ನು ಉತ್ಪಾದಿಸುವಲ್ಲಿ ಭಾರತ ಮುಂಚೂಣಿಯಲ್ಲಿದೆ. ಹೀಗಾಗಿ ಕೊರೊನಾ ರೋಗಿಗಳಿಗೆ ಈ ಔಷಧಿ ಈಗ ಭಾರೀ ಬೇಡಿಕೆ ತಂದೊಡ್ಡಿದೆ.

ವಿಧಿಯೇ ಇಲ್ಲ, ಮಹಾಮಾರಿ ಕೊರೊನಾದೊಂದಿಗೆ ನಾವು ಬದುಕಲೇಬೇಕಂತೆ..!ವಿಧಿಯೇ ಇಲ್ಲ, ಮಹಾಮಾರಿ ಕೊರೊನಾದೊಂದಿಗೆ ನಾವು ಬದುಕಲೇಬೇಕಂತೆ..!

ಬಾರತ ಹೈಡ್ರಾಕ್ಸಿಕ್ಲೋರೋಕ್ವಿನ್ ರಪ್ತಿನ ಮೇಲೆ ನಿರ್ಭಂಧ ಹೇರಿರುವುದರಿಂದ ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತದ ಮೇಲೆ ಮುನಿಸಿಕೊಂಡಿವೆ. ಆದರೆ, ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೋ ಈ ವಿಷಯದಲ್ಲಿ ಟ್ರಂಪ್ ರೀತಿ ಮಾತನಾಡದೇ, ಭಾವನಾತ್ಮಕವಾಗಿ ಮಾತನಾಡಿ, ಹೈಡ್ರಾಕ್ಸಿಕ್ಲೋರೋಕ್ವಿನ್ ಪಡೆದುಕೊಳ್ಳುವ ಬಗೆಯನ್ನು ಕಂಡುಕೊಂಡಿದ್ದಾರೆ. ಅವರು ರಾಮಾಯಣವನ್ನು ಉಲ್ಲೇಖಿಸಿ ಮೋದಿಗೆ ಪತ್ರ ಬರೆದಿದ್ದಾರೆ.

ನರೇಂದ್ರ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ನರೇಂದ್ರ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಬ್ರೆಜಿಲ್ ಪ್ರಧಾನಿ ಜೈರ್ ಬೊಲ್ಸನಾರೋ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳೆದ ಶನಿವಾರ ಪತ್ರ ಬರೆದಿದ್ದಾರೆ. ಮಹಾಮಾರಿ ಕೊರೊನಾಕ್ಕೆ ಔಷಧಿಗಾಗಿ ಜಗತ್ತು ಒದ್ದಾಡುತ್ತಿರುವ ಈ ಸಂದಿಗ್ದ ಪರಿಸ್ಥಿತಿಯಲ್ಲಿ ಬ್ರೆಜಿಲ್ ಪ್ರಧಾನಿ ರಾಮಾಯಾಣವನ್ನು ಉಲ್ಲೇಖಿಸಿ ಪತ್ರ ಬರೆದಿದ್ದಾರೆ. ಇಂದು ಹನುಮ ಜಯಂತಿ ಇದೆ. ಈ ಹೊತ್ತಿನ್ಲೇ ಬ್ರೆಜಿಲ್ ಪ್ರಧಾನಿ ಬರೆದಿರುವ ಪತ್ರದ ಸಾರಾಂಶ ವೈರಲ್ ಆಗುತ್ತಿದೆ.

ಹನುಮ ಸಂಜೀವಿನಿ ಔಷಧ ತಂದಂತೆ

ಹನುಮ ಸಂಜೀವಿನಿ ಔಷಧ ತಂದಂತೆ

ರಾಮಾಯಣದಲ್ಲಿ ಹನುಮ ಸಂಜೀವಿನಿ ಪರ್ವತದಿಂದ ಔಷಧಿ ತಂದು ರಾಮನ ತಮ್ಮ ಲಕ್ಷ್ಮಣನನ್ನು ಬದುಕಿಸಿದಂತೆ, ಯೇಸು ಕಣ್ಣಿಲ್ಲದವರಿಗೆ ದೃಷ್ಟಿ ನೀಡಿರುವುದನ್ನು ನಾವು ಬಲ್ಲೇವು. ಭಾರತ ಈಗ ಅಂತಹದೇ ಕೆಲಸವನ್ನು ಜಗತ್ತಿಗೆ ಮಾಡಬೇಕಿದೆ. ಮಹಾಮಾರಿ ಕೊರೊನಾಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಜಗತ್ತಿಗೆ ಪೂರೈಸುವಲ್ಲಿ ನರೇಂದ್ರ ಮೋದಿ ಅವರು ಮಹಾತ್ಮಾರಂತೆ ಸಾಕಾರಾತ್ಮಕ ಹೆಜ್ಜೆ ಇಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಬೊಲ್ಸನಾರೋ ಪತ್ರ ಬರೆದಿದ್ದಾರೆ.

ವಿಜ್ಞಾನಿಯ ಶಾಕಿಂಗ್ ಹೇಳಿಕೆ: ಅಯ್ಯೋ ವಿಧಿಯೇ.. ಬದುಕು ಮೊದಲಿನಂತಾಗುವುದಿಲ್ಲವೇ?ವಿಜ್ಞಾನಿಯ ಶಾಕಿಂಗ್ ಹೇಳಿಕೆ: ಅಯ್ಯೋ ವಿಧಿಯೇ.. ಬದುಕು ಮೊದಲಿನಂತಾಗುವುದಿಲ್ಲವೇ?

ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ನಿಷೇಧ

ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ನಿಷೇಧ

ಮಾರ್ಚ್ 25 ರಂದು ಭಾರತದ ವಿದೇಶಾಂಗ ವ್ಯಾಪಾರ ನಿರ್ದೇಶನಾಲಯವು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡುವುದನ್ನು ನಿಷೇಧಿಸಿದೆ. ಆದರೆ ಮಾನವೀಯ ಆಧಾರದ ಮೇಲೆ ಕೆಲವು ಸಾಗಣೆಯನ್ನು ಕೇಸ್-ಬೈ-ಕೇಸ್ ಆಧಾರದ ಮೇಲೆ ಅನುಮತಿಸಬಹುದು ಎಂದು ಹೇಳಿದೆ. ಕೊವಿಡ್ ಹರಡುತ್ತಿರುವ ಈ ಸಂದರ್ಭದಲ್ಲಿ ಭಾರತಕ್ಕೆ ಔಷಧ ಪ್ರಮಾಣದಲ್ಲಿ ಕೊರತೆಯಾಗಬಾರದು ಎಂಬ ಕಾರಣಕ್ಕೆ ಭಾರತ ಸರ್ಕಾರ ಈ ಆದೇಶ ಹೊರಡಿಸಿತ್ತು.

ಟ್ರಂಪ್ ಎಚ್ಚರಿಕೆ

ಟ್ರಂಪ್ ಎಚ್ಚರಿಕೆ

ಹೈಡ್ರಾಕ್ಸಿಕ್ಲೋರೋಕ್ವಿನ್ ವಿಷಯದಲ್ಲಿ ಭಾರತಕ್ಕೆ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾನು ಭಾರತದ ಪ್ರಧಾನಿ ಬಳಿ ಭಾನುವಾರ ಮಾತನಾಡಿದ್ದೇನೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಕ್ಕಾಗಿ ಮನವಿ ಮಾಡಿದ್ದೇನೆ, ಒಂದು ವೇಳೆ ಭಾರತ ಆ ಔಷಧ ನೀಡಿದ್ರೆ ಸಂತೋಷ. ಕೊಡಲು ನಿರಾಕರಿಸಿದರೆ ಪರವಾಗಿಲ್ಲ. ಆದರೆ ಅದಕ್ಕೆ ಪ್ರತಿಕಾರವೂ ಇರಬಹುದು. ಏಕೆ ಇರಬಾರದೇ? ಎಂದಿದ್ದಾರೆ.

English summary
Drug For Coronavirus: Brazil President Jair Bolsonaro Mentioned Ramayana. Bolsonaro mentioned ramayanan's bhagavan hanuman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X