ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಡ್ ಕ್ಯಾನ್ಸಲ್ ಮಾಡುವ ಚಾಲಕರು; ಊಬರ್, ಓಲಾದಂಥ ಆಪ್‌ಗಳಲ್ಲಿ ಜನ ಎದುರಿಸುವ ಕಿರಿಕಿರಿ ಇವು

|
Google Oneindia Kannada News

ನವದೆಹಲಿ, ಏ. 7: ಓಲಾ, ಊಬರ್ ಇತ್ಯಾದಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ಬಳಸದೇ ಇರುವ ನಗರವಾಸಿಗಳು ವಿರಳ. ಈ ಕ್ಯಾಬ್ ಸೇವೆಗಳು ಜನರಿಗೆ ಸಂಚಾರ ಸುಗಮವಾಗಿ ಮಾಡಿಕೊಡುವುದೇನೋ ಹೌದು. ಆದರೆ, ಅದರದ್ದೇ ಆದ ಕಿರಿಕಿರಿಗಳು ಇದ್ದೇ ಇವೆ. ಸರಿಯಾದ ಸಮಯಕ್ಕೆ ಬರದೇ ಇರುವುದು, ನಿಗದಿಯಾದ ಚಾಲಕರು ದಿಢೀರ್ ರೇಡಿಂಗ್ ಕ್ಯಾನ್ಸಲ್ ಮಾಡುವುದು ಇತ್ಯಾದಿ ಸಮಸ್ಯೆಗಳು ಜನರಿಗೆ ಎದುರಾಗುತ್ತವೆ. ಲೋಕಲ್ ಸರ್ಕಲ್ಸ್ (LocalCircles) ಎಂಬ ಸಾಮುದಾಯಿಕ ಸಂಸ್ಥೆ ಒಂದು ಸಮೀಕ್ಷೆ ನಡೆಸಿದ್ದು, ಅದರ ಪ್ರಕಾರ, ಜನರಿಗೆ ಈ ಆಪ್ ಆಧಾರಿತ ಕ್ಯಾಬ್ ಸೇವೆಗಳಲ್ಲಿ ಅತಿ ಹೆಚ್ಚು ಕಿರಿಕಿರಿ ಆಗಿರುವ ಅಂಶ ಎಂದರೆ ಚಾಲಕರು ರೇಡಿಂಗ್ ಕ್ಯಾನ್ಸಲ್ ಮಾಡುವುದು ಎಂದು ಹೇಳಲಾಗಿದೆ.

ಸಮೀಕ್ಷೆಯಲ್ಲಿ ಸ್ಪಂದಿಸಿದ ಜನರ ಪೈಕಿ ಶೇ. 47 ಮಂದಿಗೆ ಡ್ರೈವರ್‌ಗಳು ರೇಡಿಂಗ್ ಕ್ಯಾನ್ಸಲ್ ಮಾಡುವುದೇ ಅತಿ ಹೆಚ್ಚು ಕಿರಿಕಿರಿಯ ವಿಚಾರವಂತೆ ಶೇ. 32ರಷ್ಟು ಜನರಿಗೆ ರೇಡಿಂಗ್ ಬೆಲೆ ಹೆಚ್ಚಳ ಹೆಚ್ಚು ಕಿರಿಕಿರಿಯಂತೆ. ಹೆಚ್ಚು ಅವಧಿಯ ವೇಟಿಂಗ್ ಶೇ. 9, ಸುರಕ್ಷತೆ ವಿಚಾರ ಶೇ. 5 ಹಾಗು ಕೋವಿಡ್ ನಿಯಮಾವಳಿ ಪಾಲನೆ ಮಾಡದಿರುವುದು ಶೇ. 3ರಷ್ಟು ಜನರಿಗೆ ಹೆಚ್ಚು ಮುಖ್ಯ ವಿಚಾರ ಎಂಬ ಮಾಹಿತಿ ತಿಳಿದುಬಂದಿದೆ.

ವಿಳಂಬವಾದ ಡಿಲೆವರಿ, ಜೊಮ್ಯಾಟೋ, ಸ್ವಿಗ್ಗಿ ವಿರುದ್ಧ ಟ್ವೀಟ್ಸ್ ವಿಳಂಬವಾದ ಡಿಲೆವರಿ, ಜೊಮ್ಯಾಟೋ, ಸ್ವಿಗ್ಗಿ ವಿರುದ್ಧ ಟ್ವೀಟ್ಸ್

ಈ ಸಮೀಕ್ಷೆಯಲ್ಲಿ 65 ಸಾವಿರ ಮಂದಿ ಪಾಲ್ಗೊಂಡಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ಸಂಸ್ಥೆ ಮಾಹಿತಿ ನೀಡಿದೆ.

ಡ್ರೈವರ್‌ಗಳು ರೇಡಿಂಗ್ ಕ್ಯಾನ್ಸಲ್ ಮಾಡಲು ಕಾರಣ?
ತಮಗೆ ಬೇಕಾದ ಮಾರ್ಗದ ರೇಡಿಂಗ್ ಸಿಗದಿದ್ದರೆ ಸಾಮಾನ್ಯವಾಗಿ ಡ್ರೈವರ್‌ಗಳು ಆ ರೇಡಿಂಗ್ ರದ್ದು ಮಾಡುತ್ತಾರೆ. ಅಥವಾ ಗ್ರಾಹಕರು ಕ್ಯಾಷ್ ಪೇಮೆಂಟ್ ಆಯ್ಕೆ ಆಯ್ದುಕೊಳ್ಳದೇ ಇದ್ದಾಗ ಅಥವಾ ಕ್ಯಾಷ್ ಪೇಮೆಂಟ್ಗೆ ಒಪ್ಪದಿದ್ದಾಗ ಡ್ರೈವರ್‌ಗಳು ರೇಡಿಂಗ್ ಕ್ಯಾನ್ಸಲ್ ಮಾಡುತ್ತಾರೆ. ಶೇ. 29ರಷ್ಟು ಕ್ಯಾಬ್ ಸೇವೆ ಗ್ರಾಹಕರಿಗೆ ಇದು ಬಹಳ ಕಿರಿಕಿರಿ ಉಂಟು ಮಾಡಿದೆಯಂತೆ.

Drivers Cancelling Rides Top Issue for Most Taxi App Users Says a Survey

ಸರ್ವೆಯಲ್ಲಿ ಪಾಲ್ಗೊಂಡವರು ಎಷ್ಟು?
ಲೋಕಲ್ ಸರ್ಕಲ್ಸ್ ಸಂಸ್ಥೆ ಒಂದು ವರ್ಷದಷ್ಟು ಸುದೀರ್ಘ ಅವಧಿಯಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ 65 ಸಾವಿರ ಮಂದಿ ಪಾಲ್ಗೊಂಡಿದ್ದಾರೆ. ಭಾರತದ 324 ಜಿಲ್ಲೆಗಳ ಜನರು ಇದರಲ್ಲಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ. 66 ಮಂದಿ ಪುರುಷರಾದರೆ ಶೇ. 34 ಮಂದಿ ಮಹಿಳೆಯರಾಗಿದ್ಧಾರೆ. ಮೊದಲ ಸ್ತರದ ಜಿಲ್ಲೆಗಳಿಂದ ಶೇ. 48, ಎರಡನೇ ಸ್ತರದ ಜಿಲ್ಲೆಗಳಿಂದ ಶೇ. 31, ಇತರೆಡೆಗಳಿಂದ ಶೇ. 21ರಷ್ಟು ಜನರು ಈ ಸರ್ವೆಯಲ್ಲಿ ಭಾಗವಹಿಸಿದ್ದಾರೆ.

Drivers Cancelling Rides Top Issue for Most Taxi App Users Says a Survey

ಕ್ಯಾಬ್ ಆಪ್‌ಗಳಿಂದ ಜನರಿಗೆ ಅತಿ ಹೆಚ್ಚು ಕಿರಿಕಿರಿ ಎನಿಸಿರುವ ರೇಡಿಂಗ್ ಕ್ಯಾನ್ಸಲೇಶನ್ ಹಾಗು ಬೆಲೆ ಹೆಚ್ಚಳ ಸಮಸ್ಯೆಗೆ ಕಡಿವಾಣ ಹಾಕಲು ಕೇಂದ್ರ ಸಾರಿಗೆ ಇಲಾಖೆ ಕೆಲವಾರು ನಿಯಮ ರೂಪಿಸಿದೆ. ಆದರೂ ಈ ಸಮಸ್ಯೆ ಪರಿಹಾರ ಸಿಕ್ಕಿಲ್ಲ ಎಂಬುದು ಲೋಕಲ್ ಸರ್ಕಲ್ಸ್ ಸಂಸ್ಥೆಯ ಸಮೀಕ್ಷೆಯಿಂದ ತಿಳಿದುಬರುತ್ತದೆ. ಶೇ. 71ರಷ್ಟು ಜನರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ.

ಕೇಂದ್ರದ ಸಾರಿಗೆ ಇಲಾಖೆ ರೂಪಿಸಿದ ಮಾರ್ಗಸೂಚಿ ಪ್ರಕಾರ ಕ್ಯಾಬ್ ಸೇವೆಯ ಆಪ್‌ಗಳು ನಗರ ಪ್ರದೇಶದಲ್ಲಿ ಒಂದೂವರೆ ಪಟ್ಟಿಗಿಂತ ಹೆಚ್ಚು ಬೆಲೆ ಹೆಚ್ಚಳ ಮಾಡುವಂತಿಲ್ಲ. ಹಾಗೆಯೇ, ಒಬ್ಬ ಚಾಲಕ ಸಕಾರಣ ಇಲ್ಲದೇ ರೇಡಿಂಗ್ ರದ್ದು ಮಾಡಿದರೆ ಆ ರೇಡ್‌ನ ಒತ್ತು ಮೊತ್ತದ ಶೇ. 10ರಷ್ಟು ಹಣವನ್ನ ದಂಡವಾಗಿ ವಿಧಿಸಲಾಗುತ್ತದೆ. ಆದರೆ, ಈ ಕಠಿಣ ನಿಯಮಗಳು ಸಮಸ್ಯೆಗೆ ಕಡಿವಾಣ ಹಾಕಲು ನೆರವಾಗಿಲ್ಲ ಎಂಬುದು ಸದ್ಯ ಗ್ರಾಹಕರ ಅನುಭವದಿಂದ ಗೊತ್ತಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Drivers cancelling rides is cab app users’ biggest headache, according to a nationwide survey by community platform LocalCircles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X