ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನೌಷಧಿ: ಕರ್ನಾಟಕದಲ್ಲಿ ದಾಖಲೆ ಮಾರಾಟ; ಜನ ಸಾಮಾನ್ಯರಿಗೆ 8 ನೂರು ಕೋಟಿ ರೂ ಉಳಿತಾಯ

|
Google Oneindia Kannada News

ನವದೆಹಲಿ, ಮಾ. 02: ಪ್ರಧಾನಮಂತ್ರಿ ಜನೌಷಧಿ ಯೋಜನೆಯಿಂದ ಕಳೆದ ವರ್ಷ ಜನ ಸಾಮಾನ್ಯರಿಗೆ ಸುಮಾರು 3,500 ಕೋಟಿ ರೂ. ಉಳಿತಾಯ ವಾಗಿದ್ದು, ರಾಜ್ಯದ ಜನರಿಗೆ ಸುಮಾರು 8 ನೂರು ಕೋಟಿ ರೂ.ಗಳಷ್ಟು ಹಣ ಉಳಿತಾಯವಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರು ತಿಳಿಸಿದ್ದಾರೆ. ದೇಶಾದ್ಯಂತ ನಡೆಯುತ್ತಿರುವ 'ಜನೌಷಧಿ ಸಪ್ತಾಹದ' ಎರಡನೇ ದಿನ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಸಿಗಬೇಕು ಎಂಬ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಜನೌಷಧಿ ಯೋಜನೆ (ಪಿಎಂಬಿಜೆಪಿ)ಯನ್ನು ರೂಪಿಸಲಾಗಿದೆ. ಹೀಗಾಗಿ ವೈದ್ಯರು ಜನೌಷಧಿಯನ್ನೇ ಶಿಫಾರಸು ಮಾಡಿ ಔಷಧ ಚೀಟಿ ಬರೆದುಕೊಡಬೇಕು ಎಂದು ಇದೇ ಸಂದರ್ಭದಲ್ಲಿ ಸದಾನಂದಗೌಡ ಅವರು ಮನವಿ ಮಾಡಿದ್ದಾರೆ. ಹಾಗೆ ಮಾಡುವುದರಿಂದ ಜನಸಾಮಾನ್ಯರಿಗೆ ದೊಡ್ಡಪ್ರಮಾಣದಲ್ಲಿ ಹಣ ಉಳಿತಾಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

 ದೇಶದ 734 ಜಿಲ್ಲೆಗಳಲ್ಲಿ ಜನೌಷಧಿ ಲಭ್ಯ

ದೇಶದ 734 ಜಿಲ್ಲೆಗಳಲ್ಲಿ ಜನೌಷಧಿ ಲಭ್ಯ


ಕೇಂದ್ರ ರಾಸಾಯನಿಕ ಇಲಾಖೆ ಅಧಿನದ ಬಿಪಿಪಿಐ ಸಂಸ್ಥೆಯು ಪಿಎಂಬಿಜೆಪಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ದೇಶದ 734 ಜಿಲ್ಲೆಗಳಲ್ಲಿ ಈಗಾಗಲೇ 7500ಕ್ಕಿಂತ ಹೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಜನೌಷಧಿ ಮಳಿಗೆಗಳ ಮೂಲಕ ಸದ್ಯ 745 ಬಗೆಯ ಔಷಧಗಳು ಹಾಗೂ 117 ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ. ಸಾಮಾನ್ಯ ಔಷಧ ಅಂಗಡಿಗಳಲ್ಲಿ ಸಿಗುವ ಔಷಧಿಗೂ, ಜನೌಷಧಿ ಕೇಂದ್ರಗಳಲ್ಲಿ ಸಿಗುವ ಔಷಧಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಸಾಮಾನ್ಯ ಔಷಧಿ ಅಂಗಡಿಗಳಲ್ಲಿ ಕಂಪನಿಗಳ ಬ್ರಾಂಡ್‌ನಲ್ಲಿ ಔಷಧವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಡಿವಿಎಸ್ ವಿವರಿಸಿದ್ದಾರೆ.

 ದೇಶಾದ್ಯಂತ ಸಾವಿರ ಆರೋಗ್ಯ ಶಿಬಿರಗಳು

ದೇಶಾದ್ಯಂತ ಸಾವಿರ ಆರೋಗ್ಯ ಶಿಬಿರಗಳು

ಆದರೆ ಜನೌಷಧಿ ಅಂಗಡಿಗಳಲ್ಲಿ ಮೂಲ ರಾಸಾಯನಿಕದ ಹೆಸರಿನಲ್ಲಿಯೇ ಔಷಧ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ಜನೌಷಧಿಯ ದರ ಶೇಕಡಾ 10 ರಿಂದ ಶೇಕಡಾ 90ರಷ್ಟು ಕಡಿಮೆಯಾಗಿದೆ. 'ಜನೌಷಧಿ ಸಪ್ತಾಹದ' ಅಂಗವಾಗಿ ದೇಶಾದ್ಯಂತ 1 ಸಾವಿರ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗಿದೆ. ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧ ವಿತರಣೆ ಸೇರಿದಂತೆ ಜನೌಷಧಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಒಂದು ವಾರಕಾಲ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕೊನೆಯದಿನ ಅಂದರೆ ಮಾರ್ಚ್ 7ರಂದು ಪ್ರಧಾನಿ ನರೇಂದ್ರ ಮೋದಿ ಅವರು ಜನೌಷಧಿ ಅಂಗಡಿ ಮಾಲಿಕರು ಹಾಗೂ ಫಲಾನುಭವಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಜೊತೆಗೆ ದೆಹಲಿಯಲ್ಲಿ ಅಂದು ಸಚಿವ ಸದಾನಂದ ಗೌಡ ಅವರು ಜನೌಷಧಿ ವಲಯದ ಸಾಧಕರಿಗೆ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.

 ದಾಖಲೆ ಪ್ರಮಾಣದಲ್ಲಿ ಜನೌಷಧಿ ಮಾರಾಟ

ದಾಖಲೆ ಪ್ರಮಾಣದಲ್ಲಿ ಜನೌಷಧಿ ಮಾರಾಟ

ಜನೌಷಧಿಯ ದರ ಕಡಿಮೆ ಎಂದಾಕ್ಷಣ ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ. ಔಷಧ ಗುಣಮಟ್ಟದ ಎಲ್ಲ ಮಾನದಂಡಗಳೂ ಜನೌಷಧಗಳಿಗೆ ಅನ್ವಯವಾಗುತ್ತದೆ. ಕಳೆದ 2019-20ನೇ ಸಾಲಿನಲ್ಲಿ 433.6 ಕೋಟಿ ರೂಪಾಯಿ ಜನೌಷಧ ಮಾರಾಟ ಮಾಡಲಾಗಿತ್ತು. ಇದರಿಂದ ಜನರಿಗೆ ಸುಮಾರು 2500 ಕೋಟಿ ರೂಪಾಯಿ ಉಳಿತಾಯವಾಗಿತ್ತು. ಪ್ರಸಕ್ತ ಸಾಲಿನಲ್ಲಿ ನಿನ್ನೆವರೆಗೆ ಸುಮಾರು 586.5 ಕೋಟಿ ರೂ ಮೌಲ್ಯದ (ಗರಿಷ್ಠ ಮೌಲ್ಯ) ಜನೌಷಧ ಮಾರಾಟವಾಗಿದೆ. ಇದರಿಂದ ಜನರಿಗೆ ಕನಿಷ್ಠವೆಂದರೂ 3500 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಸದಾನಂದ ಗೌಡ ಅವರು ಇದೇ ಸಂದರ್ಭದಲ್ಲಿ ವಿವರಿಸಿದ್ದಾರೆ.

 ‘ಸುವಿಧಾ’ ಸ್ಯಾನಿಟರಿ ಪ್ಯಾಡ್ ಮಾರಾಟ

‘ಸುವಿಧಾ’ ಸ್ಯಾನಿಟರಿ ಪ್ಯಾಡ್ ಮಾರಾಟ

ಜನೌಷಧಿ ಅಂಗಡಿಗಳ ಮೂಲಕ ಮಹಿಳೆಯರ ಅನುಕೂಲಕ್ಕಾಗಿ ಕೇವಲ ಒಂದು ರೂಪಾಯಿಗೆ 'ಸುವಿಧಾ' ಹೆಸರಿನ ಸ್ಯಾನಿಟರಿ ಪ್ಯಾಡ್ ಮಾರಾಟ ಮಾಡಲಾಗುತ್ತಿದೆ (ಬ್ರಾಂಡೆಡ್ ಸ್ಯಾನಿಟರಿ ಪ್ಯಾಡ್ ಬೆಲೆ 4ರಿಂದ 5 ರೂಪಾಯಿ). ಈ ವರ್ಷ 10.76 ಕೋಟಿ ಸುವಿಧಾ ಸ್ಯಾನಿಟರಿ ಪ್ಯಾಡ್‌ಗಳನ್ನು ಮಾರಾಟ ಮಾಡಲಾಗಿದೆ. ಕರ್ನಾಟಕದಲ್ಲಿ 92.8 ಲಕ್ಷ ಸುವಿಧಾ ಪ್ಯಾಡ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಡಿವಿಎಸ್ ವಿವರಿಸಿದರು.

 ರಾಜ್ಯದಲ್ಲಿ ಸದ್ಯ 865 ಜನೌಷಧಿ ಕೇಂದ್ರಗಳಿವೆ

ರಾಜ್ಯದಲ್ಲಿ ಸದ್ಯ 865 ಜನೌಷಧಿ ಕೇಂದ್ರಗಳಿವೆ

ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿಹೆಚ್ಚು ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರಾಜ್ಯದಲ್ಲಿ ಸದ್ಯ 865 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜನೌಷಧಿ ಮಾರಾಟ ಕೂಡಾ ಹೊಸ ದಾಖಲೆ ಬರೆದಿದೆ. ಕರ್ನಾಟಕದಲ್ಲಿ 2020-21 ಸಾಲಿಗಾಗಿ (ಈ ತಿಂಗಳು ಮಾರ್ಚ್ ಗೆ ಕೊನೆಗೊಳ್ಳುವ) 125 ಕೋಟಿ ರೂಪಾಯಿ ಮಾರಾಟದ ಗುರಿಯನ್ನು ನೀಡಲಾಗಿತ್ತು. ಆದರೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಅಂದರೆ ಫೆಬ್ರುವರಿ ಕೊನೆತನಕ 131 ಕೋಟಿ ರೂಪಾಯಿ ಜನೌಷಧಿ ಮಾರಾಟವಾಗಿದೆ.

ಅದರಿಂದ ರಾಜ್ಯದ ಜನರಿಗೆ ಸುಮಾರು 8 ನೂರು ಕೋಟಿ ರೂಪಾಯಿ ಉಳಿತಾಯವಾಗಿದೆ. ರಾಜ್ಯದಲ್ಲಿ 2018-19ರಲ್ಲಿ 68.3 ಕೋಟಿ ರೂ ಹಾಗೂ 2019-20ರಲ್ಲಿ 94.2 ಕೋಟಿ ರೂ ಮೌಲ್ಯದ ಜನೌಷಧಿ ಮಾರಾಟವಾಗಿತ್ತು. ಕೋವಿಡ್ ಸಂದರ್ಭದಲ್ಲಿ ಕೂಡಾ ದಾಖಲೆ ವಹಿವಾಟು ನಡೆಸಿದ ಜನೌಷಧಿ ಮಾರಾಟಗಾರರು ಹಾಗೂ ಬಿಪಿಪಿಐ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ಸದಾನಂದಗೌಡ ಅವರು ಹೇಳಿದ್ದಾರೆ.

English summary
The Prime Minister's Janasudhi scheme last year cost the general public about Rs 3,500 crore. The Minister of State for Chemicals and Fertilizers DV Sadananda Gowda said that the savings have saved the people of the state about Rs 8 billion. He has responded on the second day of the 'Jan Aushadhi Sapthaha' which is taking place across the country. Read More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X