ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಮಾನಾಸ್ಪದ ಡ್ರೋನ್ ಉರುಳಿಸಬಲ್ಲದು DRDO "D4 ಡ್ರೋನ್ ಸಿಸ್ಟಂ"

|
Google Oneindia Kannada News

ನವದೆಹಲಿ, ಜುಲೈ 02: ಭಾರತೀಯ ವಾಯುಸೇನೆ ನಿಯಂತ್ರಣದ ಜಮ್ಮು ವಿಮಾನ ನಿಲ್ದಾಣದಲ್ಲಿ ಡ್ರೋನ್ ಮೂಲಕ ಸ್ಫೋಟ ನಡೆಸಿದ ಬೆನ್ನಲ್ಲೇ ಜಮ್ಮು ಸೇನಾ ಪ್ರದೇಶಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ.

ಶುಕ್ರವಾರ ಕೂಡ ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯ ಬಳಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡ ಡ್ರೋನ್ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ. ಡ್ರೋನ್‌ಗಳು ಗಡಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ದೇಶದ ಭದ್ರತೆಗೆ ಸಂಬಂಧಿಸಿದಂತೆ ಪ್ರಶ್ನೆ ಹುಟ್ಟುಹಾಕಿದೆ. ಆದರೆ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ DRDO ಅಭಿವೃದ್ಧಿಪಡಿಸಿರುವ ಡ್ರೋನ್ ವಿರೋಧಿ ತಂತ್ರಜ್ಞಾನ ಸೇನೆಗೆ ಇಂಥ ಸಮಯದಲ್ಲಿ ಉಪಯೋಗಕ್ಕೆ ಬರಲಿದೆ ಎಂದು ಡಿಆರ್‌ಡಿಒ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ವ್ಯವಸ್ಥೆಯ ನಿರ್ದೇಶಕಿ ಡಾ. ಜಿಲ್ಲೆಲಾಮುಡಿ ಮಂಜುಳಾ ಭರವಸೆ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಮೇಲೆ ಭಾರತೀಯ ಸೇನೆಯಿಂದ ಗುಂಡಿನ ದಾಳಿಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಮೇಲೆ ಭಾರತೀಯ ಸೇನೆಯಿಂದ ಗುಂಡಿನ ದಾಳಿ

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನ ಅನುಮಾನಾಸ್ಪದ ಡ್ರೋನ್‌ಗಳನ್ನು ಹೊಡೆದುರುಳಿಸಲಿದೆ. ಡಿ 4 ಡ್ರೋನ್ ಸಿಸ್ಟಂ ಇದಾಗಿದ್ದು, ಡ್ರೋನ್‌ಗಳನ್ನು ಪತ್ತೆ ಮಾಡಿ ನಾಶಮಾಡಬಲ್ಲದು ಎಂದು ವಿವರಿಸಿದ್ದಾರೆ.

DRDOs Anti Drone Technology Can Prevent Drone Attacs

4 ಕಿ.ಮೀ ಅಂತರದಲ್ಲಿ ಯಾವುದೇ ಡ್ರೋನ್ ಬಂದರೂ ಡಿ4 ಪತ್ತೆ ಹಚ್ಚುತ್ತದೆ. ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಅದನ್ನು ಹೊಡೆದುರುಳಿಸಬಹುದು. ಇದರಲ್ಲಿ ಸೆನ್ಸಾರ್‌ಗಳಿದ್ದು ಪ್ರತಿದಾಳಿ ನಡೆಸಲು ಸಹಾಯಕವಾಗಿದೆ. ದಾಳಿ ನಡೆಸಲು ಮುಂದಾಗಿರುವ ಡ್ರೋನ್‌ಗಳ ಹಾರ್ಡ್‌ವೇರ್ ನಾಶ ಮಾಡುವ ಮೂಲಕ ಕಮಾಂಡ್‌ಗಳನ್ನು, ನಿಯಂತ್ರಣ ಸಂಪರ್ಕಗಳನ್ನು ಕಡಿದುಕೊಳ್ಳುವಂತೆ ಮಾಡುವಲ್ಲಿ ಡಿ 4 ಡ್ರೋನ್ ಸಮರ್ಥವಾಗಿದೆ ಎಂದು ಹೇಳಿದ್ದಾರೆ.

ಈ ಸಾಧನದಿಂದ ದಾಳಿ ತಪ್ಪಿಸಲು ಸಾಧ್ಯವಿದೆ. ಈ ಬಾರಿ ಗಣರಾಜ್ಯೋತ್ಸವ ದಿನದಂದು ದೆಹಲಿಯ ರಾಜಪಥದಲ್ಲಿ ಇದನ್ನು ಬಳಸಲಾಗಿತ್ತು. ಇದೀಗ ದೇಶದ ಭದ್ರತಾ ದೃಷ್ಟಿಯಿಂದ ಜಮ್ಮುವಿನಲ್ಲಿ ಇದನ್ನು ಬಳಸಬಹುದಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ವಾಯುಸೇನೆ ನಿಯಂತ್ರಣದ ಜಮ್ಮು ವಿಮಾನ ನಿಲ್ದಾಣದಲ್ಲಿ ಡ್ರೋನ್ ಮೂಲಕ ದಾಳಿ ನಂತರ ಮತ್ತೆ ಮತ್ತೆ ಡ್ರೋನ್‌ಗಳು ಕಾಣಿಸಿಕೊಳ್ಳುತ್ತಿವೆ. ಇಂದು ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯ ಬಳಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡ ಡ್ರೋನ್ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ.

English summary
DRDO's counter drone technology can help army detect and destroy drones which are threat to security of country says DRDO director general (ECS) Dr. Jillelumudi Manjula,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X