ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಆರ್ ಡಿಓ ವಜ್ರ ಮಹೋತ್ಸವ ಅಂಗವಾಗಿ ಪ್ರಬಂಧ ಸ್ಪರ್ಧೆ

|
Google Oneindia Kannada News

ನವದೆಹಲಿ, ನವೆಂಬರ್ 17 : ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಓ) 2018 ಕ್ಕೆ 60 ವರ್ಷಗಳನ್ನು ಪೂರೈಸುತ್ತಿದ್ದು ವಜ್ರ ಮಹೋತ್ಸವದ ಅಂಗವಾಗಿ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.

ಇದು ರಾಷ್ಟ್ರೀಯ ಮಟ್ಟದ ಪ್ರಬಂಧ ಸ್ಪರ್ಧೆಯಾಗಿದ್ದು "ಡಿಆರ್ ಡಿಓದ ಸಾಧನೆಗಳು ಮತ್ತು ಮುಂದಿನ ನಿಲುವುಗಳು' ಕುರಿತ ವಿಷಯದ ಮೇಲೆ ಪ್ರಬಂಧವನ್ನು ರಚಿಸಬೇಕಾಗಿದೆ.

ಡಿಆರ್ ಡಿಓ ಜಾಗತಿಕ ಮಟ್ಟದ ಯುದ್ಧೋಪಕರಣಗಳನ್ನು ತಯಾರಿಸುವಂತ ಸಂಸ್ಥೆಯಾಗಿದೆ. ಇದು ಬಾಹ್ಯಾಕಾಶ ತಂತ್ರಜ್ಞಾನ, ಎಂಜಿನಿಯರಿಂಗ್ ಸಿಸ್ಟಂ, ಉಕ್ಕು ತಯಾರಿಕೆ ಇನ್ನಿತರೆ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದೆ.

ಭದ್ರತಾ ಸಾಮಗ್ರಿಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಜತೆಗೆ ಡಿಆರ್ ಡಿಓದ ಸಾಧನೆಗಳೇನು?, ೬೦ವರ್ಷಗಳಿಂದ ಸಂಸ್ಥೆ ಬೆಳೆದು ಬಂದ ರೀತಿ ಬಗ್ಗೆ ಮಾಹಿತಿ ಒದಗಿಸುವುದು ಪ್ರಬಂಧ ಸ್ಪರ್ಧೆಯ ಉದ್ದೇಶವಾಗಿದೆ.

DRDO essay compitition to mark Diamond jublee celebration

ಒಟ್ಟು 60 ಪ್ರಬಂಧಗಳನ್ನು ಪರಿಗಣಿಸಲಾಗುತ್ತದೆ. ಪ್ರತಿ ಪ್ರಬಂಧಕ್ಕೂ 2ಸಾವಿರ ರೂ ನಗದು ಬಹುಮಾನವಿರುತ್ತದೆ. ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ಪ್ರಬಂಧ ರಚಿಸಬಹುದು.

ಆಯ್ಕೆಯಾದ ಪ್ರಬಂಧಗಳನ್ನು ಡಿಆರ್ ಡಿಓ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ. ಡಿಆರ್ ಡಿಓ ದಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶವಿರುವುದಿಲ್ಲ.

ಪ್ರಬಂಧವನ್ನು ಕಳುಹಿಸಲು ಯಾವುದೇ ಶುಲ್ಕವಿರುವುದಿಲ್ಲ. ಎರಡು ವಿಭಾಗಗಳಲ್ಲಿ ಪ್ರಬಂಧವನ್ನು ಆಹ್ವಾನಿಸಲಾಗಿದೆ. 9 ರಿಂದ 12 ನೇ ತರಗತಿಯವರೆಗೆ ಒಂದು ವಿಭಾಗ ಅದರಲ್ಲಿ #Category1, ಪದವಿ ಹಾಗೂ ಸ್ನಾತಕೋತ್ತರ ಪದವಿ ನಂತರದವರಿಗೆ ಎರಡನೇ #Category2 ವಿಭಾಗವಾಗಿ ಮಾಡಲಾಗಿದೆ.

ಡಿಸೆಂಬರ್ 5 ರೊಳಗಾಗಿ ಪ್ರಬಂಧವನ್ನು ಕಳುಹಿಸಬೇಕು. ಡಿಆರ್ ಡಿಓ ವೆಬ್ಸೈಟಿನ ಮೂಲಕ ಪ್ರಬಂಧವನ್ನು ಕಳುಹಿಸಬೇಕು.

English summary
To celebrate the 60th years of DRDO formation, conducting National Level Essay Compitition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X