ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಪು ಕೋಟೆಗೆ ಕಾವಲಿದ್ದ ಆ್ಯಂಟಿ ಡ್ರೋನ್ ಸಿಸ್ಟಮ್: ಪ್ರಮುಖ ಸಂಗತಿಗಳು

|
Google Oneindia Kannada News

ನವದೆಹಲಿ, ಆಗಸ್ಟ್‌ 15: ಇಂದು 74 ನೇ ಸ್ವಾತಂತ್ರ್ಯ ದಿನಾಚರಣೆಯಂದು ಶನಿವಾರ ಕೆಂಪು ಕೋಟೆಯ ಬಳಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಡ್ರೋನ್ ವಿರೋಧಿ ವ್ಯವಸ್ಥೆಯನ್ನು(ಆ್ಯಂಟಿ ಡ್ರೋನ್ ಸಿಸ್ಟಮ್) ಅಳವಡಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೂ ಮುನ್ನ ಹದ್ದಿನ ಕಣ್ಣನ್ನ ಇಡಲಾಗಿತ್ತು.

ತಂತ್ರಜ್ಞಾನ ಅಭಿವೃದ್ಧಿಯ ಜೊತೆಗೆ ವಿನಾಶಕಾರಿ ಬಳಕೆಗೂ ಡ್ರೋನ್ ಸಾಕ್ಷಿಯಾಗಿರುವ ಉದಾಹರಣೆಗಳಿವೆ. ಹೀಗಾಗಿ ವಿವಿಐಪಿಗಳು ಇರುವ ಜಾಗದಲ್ಲಿ, ಪ್ರಮುಖ ರಾಷ್ಟ್ರೀಯ ದಿನಾಚರಣೆಗಳಲ್ಲಿ ಈ ಡ್ರೋನ್‌ ವಿರೋಧಿ ವ್ಯವಸ್ಥೆಯನ್ನು ಅಳವಡಿಸಲಾಗಿರುತ್ತದೆ.

DRDO Anti Drone System: Five Facts Here

ಆ್ಯಂಟಿ ಡ್ರೋನ್ ಸಿಸ್ಟಮ್‌ನ ಪ್ರಮುಖ ಮಾಹಿತಿಗಳು ಇಲ್ಲಿವೆ:

-ಡಿಆರ್‌ಡಿಒ-ಅಭಿವೃದ್ಧಿಪಡಿಸಿದ ವ್ಯವಸ್ಥೆಯು ಮೈಕ್ರೊ ಡ್ರೋನ್‌ಗಳನ್ನು 3 ಕಿಲೋಮೀಟರ್‌ಗಳವರೆಗೆ ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ ಮತ್ತು ಲೇಸರ್ ಶಸ್ತ್ರಾಸ್ತ್ರದ ಅನುಗುಣವಾಗಿ 1-2.5 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಗುರಿಯನ್ನು ಲೇಸರ್ ಮೂಲಕ ಹೊಡೆದುರುಳಿಸಬಲ್ಲದು

-ಡಿಆರ್‌ಡಿಒನ ಈ ವ್ಯವಸ್ಥೆಯು ಒಂದೇ ಕ್ಷಣದಲ್ಲಿ ಡ್ರೋನ್‌ಗಳನ್ನು ಪತ್ತೆ ಹಚ್ಚಬಲ್ಲದು ಮತ್ತು ಗುರುತಿಸಿ ಕೊನೆಗೊಳಿಸುವ ಸಾಮರ್ಥ್ಯ ಹೊಂದಿದೆ. ದುಷ್ಕರ್ಮಿಗಳು ಅಥವಾ ಉಗ್ರರು ಸ್ಫೋಟಕಗಳನ್ನು ಒಯ್ಯುವ ಮೂಲಕ ಡ್ರೋನ್ ಮೂಲಕ ದಾಳಿ ಮಾಡುವ ಬೆದರಿಕೆಯನ್ನು ಕೊನೆಗೊಳಿಸುತ್ತದೆ.

-ದೇಶದ ಪಶ್ಚಿಮ ಮತ್ತು ಉತ್ತರ ವಲಯಗಳಲ್ಲಿ ಹೆಚ್ಚಿದ ಡ್ರೋನ್ ಆಧಾರಿತ ಚಟುವಟಿಕೆಗೆ ಇದು ಪರಿಣಾಮಕಾರಿ ಪ್ರತಿರೂಪವಾಗಿದೆ. ಕೌಂಟರ್ ಡ್ರೋನ್ ವ್ಯವಸ್ಥೆಯು ಗಾಳಿಯಲ್ಲಿ ಡ್ರೋನ್‌ಗಳನ್ನು ಪತ್ತೆಹಚ್ಚುವ ಮತ್ತು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

-ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ಗೆ ಭದ್ರತಾ ರಕ್ಷಣೆ ನೀಡಲು ಡಿಆರ್‌ಡಿಒ ಕೌಂಟರ್ ಡ್ರೋನ್ ವ್ಯವಸ್ಥೆಯನ್ನು ಮೊದಲು ನಿಯೋಜಿಸಲಾಗಿತ್ತು, ಇದರಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

-ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ಗೆ ಭದ್ರತಾ ರಕ್ಷಣೆ ನೀಡಲು ಡಿಆರ್‌ಡಿಒ ಕೌಂಟರ್ ಡ್ರೋನ್ ವ್ಯವಸ್ಥೆಯನ್ನು ಮೊದಲು ನಿಯೋಜಿಸಲಾಗಿತ್ತು, ಇದರಲ್ಲಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

-ಮೋದಿ-ಟ್ರಂಪ್ ರೋಡ್ ಶೋಗಾಗಿ ಈ ವ್ಯವಸ್ಥೆಯನ್ನು ಅಹಮದಾಬಾದ್‌ನಲ್ಲಿ ನಿಯೋಜಿಸಲಾಗಿತ್ತು, ಅಲ್ಲಿ ಡ್ರೋನ್‌ಗಳಿಂದ ಯಾವುದೇ ವೈಮಾನಿಕ ಬೆದರಿಕೆಯನ್ನು ತಡೆಯುವ ಕಾರ್ಯವನ್ನು ಇದು ನಿಭಾಯಿಸಿತ್ತು.

English summary
An anti-drone system developed by the Defence Research and Development Organisation (DRDO) was deployed near the Red Fort on Saturday on the occasion of the 74th Independence Day. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X