ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಚುನಾವಣೆ: ದೆಹಲಿಗೆ ಆಗಮಿಸಿದ ದ್ರೌಪದಿ ಮುರ್ಮು, ಶುಕ್ರವಾರ ನಾಮಪತ್ರ

|
Google Oneindia Kannada News

ನವದೆಹಲಿ, ಜೂನ್ 23: ರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ನಾಮನಿರ್ದೇಶಿತ ದ್ರೌಪದಿ ಮುರ್ಮು ಅವರು ಗುರುವಾರ ಭುವನೇಶ್ವರದಿಂದ ದೆಹಲಿ ತಲುಪಿದ್ದಾರೆ, ಶುಕ್ರವಾರ ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸಲಿದ್ದು, ಒಂದು ದಿನ ಮೊದಲು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದಲ್ಲಿ ದ್ರೌಪದಿ ಮುರ್ಮು ನಾಮಪತ್ರವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ದ್ರೌಪದಿ ಮುರ್ಮು ಬೆಂಬಲಿಸಿದ ಒಡಿಶಾ ಸಿಎಂ ನವೀನ್ ಪಟ್ನಾಯಕ್ದ್ರೌಪದಿ ಮುರ್ಮು ಬೆಂಬಲಿಸಿದ ಒಡಿಶಾ ಸಿಎಂ ನವೀನ್ ಪಟ್ನಾಯಕ್

ಮೋದಿ, ನಡ್ಡಾ ಮತ್ತು ಹಿರಿಯ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರ ಸಲಹೆಗಾರರಲ್ಲಿ ಸೇರಿದ್ದಾರೆ. ಅವರ ನಾಮನಿರ್ದೇಶನವನ್ನು ಬೆಂಬಲಿಸಿದ ಬಿಜೆಡಿಯ ಸಸ್ಮಿತ್ ಪಾತ್ರ ಕೂಡ ಜೋಶಿ ಅವರ ಮನೆಯಲ್ಲಿ ಪತ್ರಗಳಿಗೆ ಸಹಿ ಹಾಕಲು ಸೇರಿದ್ದರು.

ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಪ್ರಲ್ಹಾದ್ ಜೋಶಿ ಅವರ ನಿವಾಸ ಗುರುವಾರ ರಾಜಕೀಯದ ಕೇಂದ್ರಬಿಂದುವಾಗಿತ್ತು. ಹಲವು ರಾಜ್ಯಗಳಿಂದ ಬಿಜೆಪಿ ನಾಯಕರು ಪ್ರತಿಪಾದಕರು ಮತ್ತು ಸೂಚಕರು ಸಹಿ ಹಾಕಲು ಆಗಮಿಸಿದ್ದರು.

 Draupadi Murmu: ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ಮುರ್ಮುಗೆ ಝಡ್‌+ ಭದ್ರತೆ Draupadi Murmu: ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ಮುರ್ಮುಗೆ ಝಡ್‌+ ಭದ್ರತೆ

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಗೋವಾ ಸಿಎಂ ಪ್ರಮೋದ್ ಸಾವಂತ್, ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಸೂಚಕರಾಗಿ ಸಹಿ ಹಾಕಲು ಜೋಶಿ ನಿವಾಸಕ್ಕೆ ತೆರೆಳಿದ್ದು, ಇನ್ನೂ ಹಲವರು ಸಹಿ ಹಾಕುವ ನಿರೀಕ್ಷೆ ಇದೆ. ಪಕ್ಷದ ಪ್ರಮುಖರ ಸಮ್ಮುಖದಲ್ಲಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

ದ್ರೌಪದಿ ಮುರ್ಮು-ಪ್ರಧಾನಿ ಮೋದಿ ಭೇಟಿ

ದ್ರೌಪದಿ ಮುರ್ಮು-ಪ್ರಧಾನಿ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ನಾಮಪತ್ರ ಸಲ್ಲಿಸುವ ಮೊದಲು ಭೇಟಿಯಾದರು. ರಾಷ್ಟ್ರಪತಿ ಚುನಾವಣೆಗೆ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಭಾರತದಾದ್ಯಂತ ಸಮಾಜದ ಎಲ್ಲಾ ವರ್ಗಗಳಿಂದ ಮೆಚ್ಚುಗೆ ಪಡೆದಿದೆ ಎಂದು ಮೋದಿ ಹೇಳಿದರು.

"ಅವರಲ್ಲಿ, ತಳಮಟ್ಟದ ಸಮಸ್ಯೆಗಳ ತಿಳುವಳಿಕೆ ಮತ್ತು ಭಾರತದ ಅಭಿವೃದ್ಧಿಯ ದೃಷ್ಟಿಕೋನವು ಅತ್ಯುತ್ತಮವಾಗಿದೆ" ಎಂದು ಪ್ರಧಾನಿ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಮುರ್ಮು ಅವರ ಉಮೇದುವಾರಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಘೋಷಿಸಿದ ಬೆನ್ನಲ್ಲೇ ಮೋದಿ ಟ್ವೀಟ್ ಮಾಡಿದ್ದರು ಮತ್ತು ಜಾರ್ಖಂಡ್ ಮಾಜಿ ರಾಜ್ಯಪಾಲರು ಸಮಾಜ ಮತ್ತು ದೀನದಲಿತರ ಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟು "ಶ್ರೇಷ್ಠ ರಾಷ್ಟ್ರಪತಿ" ಆಗಲಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಮುಖಂಡರಿಂದ ಸ್ವಾಗತ

ಬಿಜೆಪಿ ಮುಖಂಡರಿಂದ ಸ್ವಾಗತ

ರಾಜ್ಯಾಧ್ಯಕ್ಷ ಆದೇಶ್ ಗುಪ್ತಾ, ಬಿಜೆಪಿ ಸಂಸದ ಮನೋಜ್ ತಿವಾರಿ ಮತ್ತು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಬಿಧುರಿ ಸೇರಿದಂತೆ ಹಲವು ದೆಹಲಿ ಬಿಜೆಪಿ ನಾಯಕರು ಮುರ್ಮು ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ನಂತರ ದ್ರೌಪದಿ ಮುರ್ಮು ಒಡಿಶಾ ಭವನದಲ್ಲಿ ತಂಗಿದ್ದರು.

ಎಲ್ಲರ ಬೆಂಬಲ ಕೋರುತ್ತೇನೆ ಎಂದ ಮುರ್ಮು

ಎಲ್ಲರ ಬೆಂಬಲ ಕೋರುತ್ತೇನೆ ಎಂದ ಮುರ್ಮು

ರಾಷ್ಟ್ರ ರಾಜಧಾನಿಗೆ ಹೊರಡುವ ಮೊದಲು ಮಾತನಾಡಿದ ಮುರ್ಮು, " ಎಲ್ಲರಿಗೂ ಧನ್ಯವಾದ, ರಾಷ್ಟ್ರಪತಿ ಚುನಾವಣೆಗೆ ಎಲ್ಲರಿಂದ ಸಹಕಾರ ಕೋರುತ್ತೇನೆ. ನಾನು ಎಲ್ಲಾ ಮತದಾರರನ್ನು (ಶಾಸಕರನ್ನು) ಭೇಟಿ ಮಾಡುತ್ತೇನೆ ಮತ್ತು ಜುಲೈ 18 ರ ಮೊದಲು ಅವರ ಬೆಂಬಲವನ್ನು ಕೇಳುತ್ತೇನೆ" ಎಂದು ಹೇಳಿದ್ದಾರೆ.

ರಾಷ್ಟ್ರಪತಿಯಾಗಿ ಚುನಾವಣೆಯಲ್ಲಿ ಆಯ್ಕೆಯಾದರೆ, ದ್ರೌಪದಿ ಮುರ್ಮು ಅವರು ಭಾರತದ ಮೊದಲ ಬುಡಕಟ್ಟು ಅಧ್ಯಕ್ಷೆ ಮತ್ತು ರಾಷ್ಟ್ರಪತಿಯಾದ ಎರಡನೇ ಮಹಿಳೆ ಎನಿಸಿಕೊಳ್ಳಲಿದ್ದಾರೆ.

ಜುಲೈ 18ಕ್ಕೆ ಚುನಾವಣೆ 21ರಂದು ಮತ ಎಣಿಕೆ

ಜುಲೈ 18ಕ್ಕೆ ಚುನಾವಣೆ 21ರಂದು ಮತ ಎಣಿಕೆ

16ನೇ ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆಗೆ ಜೂನ್ 30 ಮತ್ತು ಉಮೇದುವಾರಿಕೆ ಹಿಂಪಡೆಯಲು ಜುಲೈ 2 ಕೊನೆಯ ದಿನಾಂಕವಾಗಿದೆ. ಭಾರತದ 14 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುತ್ತಿರುವ ರಾಮನಾಥ್ ಕೋವಿಂದ್ ಜುಲೈ 25, 2017 ರಂದು ಅಧಿಕಾರ ವಹಿಸಿಕೊಂಡಿದ್ದು, ಅವರ ಅವಧಿಯು ಜುಲೈ 24, 2022 ರಂದು ಕೊನೆಗೊಳ್ಳುತ್ತದೆ.

English summary
NDA's presidential nominee Draupadi Murmu, who arrived in New Delhi from Bhubaneswar on Thursday, will file her nomination for the Election of President on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X