ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಯಮ ಬೆಳೆಸಿಕೊಳ್ಳಿ: ಮೋದಿಗೆ ಮನಮೋಹನ್ ಸಿಂಗ್ ಕಿವಿಮಾತು

|
Google Oneindia Kannada News

ನವದೆಹಲಿ, ನವೆಂಬರ್ 27: ಬಿಜೆಪಿಯೇತರ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಯಮ ಕಾಯ್ದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಲಹೆ ನೀಡಿದ್ದಾರೆ.

ಅಸಂಬದ್ಧ ಪದಗಳ ಬಳಕೆಯನ್ನು ನಿಯಂತ್ರಿಸಿಕೊಳ್ಳುವುದು ದೇಶದ ಪ್ರಧಾನಿಯ ಕರ್ತವ್ಯ. ಅವರು ಎಲ್ಲರಿಗೂ ಉದಾಹರಣೆಯಾಗಿರಬೇಕು ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಸೋಮವಾರ ಮಾತನಾಡಿದ ಸಿಂಗ್, 'ಪ್ರಧಾನಿ ಕಚೇರಿಗೆ ತಕ್ಕುದಾಗಿ ತಮ್ಮ ಮಾತುಗಳ ಮೇಲೆ ಸಂಯಮ ಸಾಧಿಸಿಕೊಳ್ಳುವಂತೆ ಪ್ರಧಾನಿಗೆ ಸಲಹೆ ನೀಡುತ್ತೇನೆ' ಎಂದು ಹೇಳಿದರು.

ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿರಲಿಲ್ಲ: ಮೋದಿಗೆ ಸಿಂಗ್ ಟಾಂಗ್!ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿರಲಿಲ್ಲ: ಮೋದಿಗೆ ಸಿಂಗ್ ಟಾಂಗ್!

ನಾನು ಯಾವತ್ತಿಗೂ ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿರಲಿಲ್ಲ. ನಮ್ಮ ಸರ್ಕಾರ ಮತ್ತು ಪಕ್ಷದ ನಡುವೆ ಸಾಕಷ್ಟು ಸೌಹಾರ್ದತೆ ಇತ್ತು. ನಮ್ಮ ಸರ್ಕಾರದಲ್ಲಿ ಪಕ್ಷ ಬೇರೆ, ಸರ್ಕಾರ ಬೇರೆ ಎಂಬಂತೆ ಕೆಲಸ ಮಾಡಿಲ್ಲ. ಎಲ್ಲರೂ ಸರ್ಕಾರದ ಕೆಲಸವನ್ನು ಸಮರ್ಪಣಾ ಭಾವದಿಂದ ಮಾಡಿದರು. ನಮ್ಮ ಸರ್ಕಾರದ ಯಶಸ್ಸಿಗೂ ಅದೇ ಕಾರಣ. ನಮ್ಮ ಪಕ್ಷದಲ್ಲಿ ಯಾರಲ್ಲೂ ಭಿನ್ನಾಭಿಪ್ರಾಯಗಳು ಹುಟ್ಟಿರಲಿಲ್ಲ' ಎಂದು ಇತ್ತೀಚೆಗೆ ಮನಮೋಹನ್ ಸಿಂಗ್ ಹೇಳಿದ್ದರು.

ಪ್ರಧಾನಿಯ ಜವಾಬ್ದಾರಿ

ಪ್ರಧಾನಿಯ ಜವಾಬ್ದಾರಿ

ಪ್ರಧಾನಿಯು ತಾವು ಸೇರಿದ ಪಕ್ಷವು ಅಧಿಕಾರದಲ್ಲಿ ಇಲ್ಲದ, ಬೇರೆ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಿಗೆ ಹೋದಾಗ ಇಂದು ಸಾಮಾನ್ಯ ಅಭ್ಯಾಸವಾದಂತೆ ಆಗಿರುವ ಭಾಷೆಗಳನ್ನು ಬಳಸದೆ ಇರುವುದು ಹೊಣೆಗಾರಿಕೆಯಾಗಿರುತ್ತದೆ ಎಂದು ಸಿಂಗ್ ಹೇಳಿದ್ದಾರೆ.

ಇದಕ್ಕೆ ಅವರು ತಾವು ದೇಶದ ಪ್ರಧಾನಿಯಾಗಿದ್ದ ಸಂದರ್ಭವನ್ನು ಉದಾಹರಣೆಯಾಗಿ ನೀಡಿದ್ದಾರೆ. ಕೇಂದ್ರ ಸರ್ಕಾರವು ಎಂದಿಗೂ ಇತರೆ ರಾಜ್ಯಗಳ ವಿರುದ್ಧ ತಾರತಮ್ಯ ಧೋರಣೆ ಅನುಸರಿಸಿರಲಿಲ್ಲ ಎನ್ನುವುದನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮೋದಿ ತಿಳಿ ಹೇಳಬೇಕು ಎಂದಿದ್ದಾರೆ.

ರಫೇಲ್ ಡೀಲ್ ಹಿಂದೆ ಏನೋ ಐಬಿದೆ : ಡಾ. ಎಂಎಂ ಸಿಂಗ್ ಕಿಡಿನುಡಿರಫೇಲ್ ಡೀಲ್ ಹಿಂದೆ ಏನೋ ಐಬಿದೆ : ಡಾ. ಎಂಎಂ ಸಿಂಗ್ ಕಿಡಿನುಡಿ

ಕಟ್ಟುಪಾಡುಗಳಿಗೆ ಬದ್ಧರಾಗಿರಿ

ಕಟ್ಟುಪಾಡುಗಳಿಗೆ ಬದ್ಧರಾಗಿರಿ

'ನಾನು ಏನು ಹೇಳಲು ಬಯಸುತ್ತೇನೆ ಎಂದರೆ, ದೇಶದ ಪ್ರಧಾನಿಯು ಒಂದು ಉದಾಹರಣೆಯನ್ನು ಸೃಷ್ಟಿಸಬೇಕು. ಅವರು ನಮ್ಮ ದೇಶದ ಎಲ್ಲ ನಾಗರಿಕರಿಗೂ ಪ್ರಧಾನಿ. ಅವರ ನಡತೆ ಹೆಚ್ಚು ಯೋಗ್ಯವಾಗಿರಬೇಕು ಮತ್ತು ಪ್ರಧಾನಿಯಾಗಿ ಅವರು ತಮ್ಮ ಕಟ್ಟುಪಾಡುಗಳಿಗೆ ಬದ್ಧರಾಗಿರಬೇಕು' ಎಂದು ಸಲಹೆ ನೀಡಿದ್ದಾರೆ.

ಅಪನಗದೀಕರಣದಂಥ ಯಡವಟ್ಟು ಮತ್ತೆ ಮಾಡಬೇಡಿ ಎಂದರು ಮನ್ ಮೋಹನ್ ಸಿಂಗ್ಅಪನಗದೀಕರಣದಂಥ ಯಡವಟ್ಟು ಮತ್ತೆ ಮಾಡಬೇಡಿ ಎಂದರು ಮನ್ ಮೋಹನ್ ಸಿಂಗ್

ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ

ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ

ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ತೀವ್ರ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ನ ಪ್ರಮುಖ ಮುಖಂಡರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ಅವರು ನೆಹರೂ-ಗಾಂಧಿ ಕುಟುಂಬವನ್ನೂ ಟೀಕಿಸಿದ್ದರು. ಛತ್ತೀಸ್ ಗಢದ ಅಭಿವೃದ್ಧಿಗೆ ಕುಡಿಯುವ ನೀರಿನ ಮಾರ್ಗವನ್ನು ಮಾಡುವ ಮೂಲಕ ಸಹಾಯ ಮಾಡಿದ್ದರೇ ಎಂಬುದನ್ನು ತಮ್ಮ ಅಜ್ಜ-ಅಜ್ಜಿಗೆ ಕೇಳುವಂತೆ ಮೋದಿ ಅವರು ರಾಹುಲ್ ಗಾಂಧಿಗೆ ಪ್ರಶ್ನಿಸಿದ್ದರು.

ಆರ್ ಬಿಐ ವಿವಾದ: ಬಿಜೆಪಿಗೆ ವರದಾನವಾದ ಮನಮೋಹನ್ ಸಿಂಗ್ ಹೇಳಿಕೆಆರ್ ಬಿಐ ವಿವಾದ: ಬಿಜೆಪಿಗೆ ವರದಾನವಾದ ಮನಮೋಹನ್ ಸಿಂಗ್ ಹೇಳಿಕೆ

ಕಾಂಗ್ರೆಸ್ ಟೀಕಿಸಿದ್ದ ಮೋದಿ

ಕಾಂಗ್ರೆಸ್ ಟೀಕಿಸಿದ್ದ ಮೋದಿ

ಯುಪಿಎ ಸರ್ಕಾರ ಆಡಳಿತ ನಡೆಸುತ್ತಿದ್ದಾಗ ಪದೇಪದೇ ದಾಳಿ ನಡೆಯುತ್ತಿತ್ತು. ಅದೀಗ ನಿಯಂತ್ರಣಕ್ಕೆ ಬಂದಿದೆ. ಕಾಶ್ಮೀರದಿಂದ ಹೊರಗೆ ಕಾಲಿಡುವುದಕ್ಕೆ ಉಗ್ರಗಾಮಿಗಳಿಗೆ ಸಾಧ್ಯವಾಗುತ್ತಿಲ್ಲ. ಭಯೋತ್ಪಾದಕರು ಹಾಗೂ ಮಾವೋವಾದಿಗಳಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡುತ್ತಿದ್ದೇವೆ ಎಂದು ಮೋದಿ ಸೋಮವಾರ ಹೇಳಿದ್ದರು.

ರಾಹುಲ್ ಗಾಂಧಿ ಹೆಸರನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದ ಮೋದಿ, 'ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರಿಗೆ' ಜನ ಸಾಮಾನ್ಯರ ಹೋರಾಟದ ಬಗ್ಗೆ ಗೊತ್ತಿರುವುದಿಲ್ಲ. ಜನರನ್ನು ಕೊಲ್ಲುವ ಮಾವೋವಾದಿಗಳನ್ನು ಕಾಂಗ್ರೆಸ್ ನಾಯಕರು ಕ್ರಾಂತಿಕಾರಿಗಳು ಎಂದು ಕರೆದು, ಸರ್ಟಿಫಿಕೇಟ್ ನೀಡುತ್ತಾರೆ' ಎಂದು ಟೀಕಿಸಿದ್ದರು.

English summary
Former Prime Minister Narendra Modi has advised Prime Minister Narendra Modi that he should exercise restraint when he goes to states which are not ruled by parties other than BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X