• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಚ್ ಎಎಲ್ ಬಗ್ಗೆ ಸರಕಾರದ ಮೇಲಿನ ಸಂಶಯವು ದಾರಿ ತಪ್ಪಿಸುವಂಥದ್ದು, ಸಂಸತ್ ನಲ್ಲಿ ರಕ್ಷಣಾ ಸಚಿವೆ

|

ನವದೆಹಲಿ, ಜನವರಿ 7: "ನನಗೆ ಎಚ್ ಎಎಲ್ ನಿಂದಲೇ ಸ್ಪಷ್ಟನೆ ಬಂದಿದೆ. 2014ರಿಂದ 2018ರ ತನಕ 26,570 ಕೋಟಿ ರುಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 73,000 ಕೋಟಿ ರುಪಾಯಿ ಮೊತ್ತದ ಒಪ್ಪಂದಗಳು ವಿವಿಧ ಹಂತಗಳಲ್ಲಿವೆ" ಎಂದು ಸೋಮವಾರ ಸಂಸತ್ ನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

'ಎಚ್ ಎಎಲ್ ಗೆ 1 ಲಕ್ಷ ಕೋಟಿಯ ಆರ್ಡರ್ ಕೊಟ್ಟಿದ್ದಕ್ಕೆ ದಾಖಲೆ ತೋರಿಸಿ, ಇಲ್ಲ ರಾಜೀನಾಮೆ ನೀಡಿ'

ಇದು ನನ್ನ ಹೇಳಿಕೆಯಲ್ಲಿನ ಸತ್ಯವನ್ನು ಖಾತ್ರಿ ಪಡಿಸುತ್ತದೆ. ಎಚ್ ಎಎಲ್ ಜತೆಗಿನ ಒಪ್ಪಂದದ ಬಗ್ಗೆ ನನ್ನ ಹೇಳಿಕೆ ಸುತ್ತ ಎದ್ದ ಅನುಮಾನಗಳು ಸರಿಯಾದುದಲ್ಲ ಹಾಗೂ ದಾರಿ ತಪ್ಪಿಸುವಂಥದ್ದು ಎಂದು ಅವರು ಹೇಳಿದ್ದಾರೆ.

ಆದರೆ, ಈ ಹೇಳಿಕೆಯಿಂದ ವಿರೋಧ ಪಕ್ಷಗಳನ್ನು ಸುಮ್ಮನೆ ಇರಿಸಲು ಸಾಧ್ಯವಾಗಲಿಲ್ಲ. ಸರಕಾರದಿಂದ ಆರ್ಡರ್ ಗಳು ದೊರಕಿದ್ದರೆ ಎಚ್ ಎಎಲ್ ಗೆ ತನ್ನ ಸಿಬ್ಬಂದಿಯ ವೇತನ ನೀಡಲು ಸಹ ಯಾಕೆ ಕಷ್ಟವಾಗುತ್ತಿದೆ ಎಂದು ವಿವರಣೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯ ಮಾಡಿದರು.

ರಕ್ಷಣಾ ಪರಿಕರಗಳನ್ನು ಉತ್ಪಾದಿಸುವ ಎಚ್ ಎಎಲ್ ಹಣಕಾಸಿನ ಕೊರತೆಯನ್ನು ಎದುರಿಸುತ್ತಿದೆ ಎನ್ನುವುದನ್ನು ಖಚಿತಪಡಿಸುವಂಥ ಹೇಳಿಕೆಯೊಂದರ ಪತ್ರವನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಓದಿದರು.

'ಸಾಕ್ಷ್ಯ ಇಲ್ಲಿದೆ ನೋಡಿ ರಾಹುಲ್, ಈಗ ದೇಶದ ಜನರ ಕ್ಷಮೆ ಕೇಳ್ತೀರಾ?'

ರಕ್ಷಣಾ ಸಚಿವೆ ಹೇಳಿಕೆ ನೀಡಿದ ನಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಎಚ್ ಎಎಲ್ ಬಳಿ ಸಿಬ್ಬಂದಿಗೆ ವೇತನ ಪಾವತಿಸುವಷ್ಟು ನಗದು ಇಲ್ಲ ಎಂಬುದು ಅಚ್ಚರಿಯಲ್ಲವೆ. ಅನಿಲ್ ಅಂಬಾನಿ ಬಳಿ ರಫೇಲ್ ಇದೆ. ಅವರಿಗೆ ಈಗ ತಮ್ಮ ಒಪ್ಪಂದ ಪೂರೈಸಲು ಎಚ್ ಎಎಲ್ ಸಂಸ್ಥೆಯ ಪ್ರತಿಭಾವಂತರು ಬೇಕಾಗಿದ್ದಾರೆ. ವೇತನ ಇಲ್ಲದಿದ್ದರೆ ಎಚ್ ಎಎಲ್ ನ ಉತ್ತಮ ಎಂಜಿನಿಯರ್ ಗಳು, ವಿಜ್ಞಾನಿಗಳು ಬಲವಂತಾಗಿ 'ಎಎ' ಕಂಪನಿಗೆ ಸೇರಬೇಕಾಗುತ್ತದೆ ಎಂದಿದ್ದಾರೆ.

English summary
After sparring on twitter with Rahul Gandhi, Union Minister Nirmala Sitharaman today reiterated in parliament that her statement on orders worth Rs. 1 lakh crore for state-run defence manufacturer Hindustan Aeronautics Limited was not false.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X