ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಏಪ್ರಿಲ್ 20: ಕೋವಿಡ್ -19 ಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ಹಾಗೂ ಸ್ಯಾನಿಟೈಸರ್ ಉಪಕರಣಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಮನ್ನಾ ಮಾಡಬೇಕೆಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೋವಿಡ್‌ 19 ನಿಂದ ದೇಶದಲ್ಲಿ ಇಷ್ಟೆಲ್ಲಾ ತೊಂದರೆ ಆಗುತ್ತಿದ್ದರೂ ಇನ್ನೂ ಕೇಂದ್ರ ಸರ್ಕಾರ, ಸ್ಯಾನಿಟೈಸರ್, ಸಾಬೂನು ಮತ್ತು ಮಾಸ್ಕ್‌ಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವಸೂಲಿ ಮಾಡುತ್ತಿರುವುದು ಸರ್ಕಾರದ ದೊಡ್ಡ ತಪ್ಪು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಶಿಕ್ಷಣ ಸಚಿವರಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸುವ ಕಾರ್ಯಕ್ರಮಶಿಕ್ಷಣ ಸಚಿವರಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸುವ ಕಾರ್ಯಕ್ರಮ

"COVID-19 ರ ಈ ಕಷ್ಟದ ಸಮಯದಲ್ಲಿ, ಈ ಸಾಂಕ್ರಾಮಿಕ ರೋಗದ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಸಣ್ಣ, ದೊಡ್ಡ ಸಲಕರಣೆಗಳ ಮೇಲೆ ಜಿಎಸ್ಟಿ ವಿಧಿಸಬಾರದು ಎಂದು ನಾವು ನಿರಂತರವಾಗಿ ಒತ್ತಾಯಿಸುತ್ತಿದ್ದೇವೆ" ಎಂದು ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿ, ಸರ್ಕಾರ ಕೋವಿಡ್ 19 ಗೆ ಸಂಬಂಧಿಸಿದ 18 ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸುತ್ತಿರುವ ವಸ್ತುಗಳ ಪಟ್ಟಿಯನ್ನು ಅವರು ಟ್ವೀಟ್ ಮಾಡಿದ್ದಾರೆ.

Dont Take GST For Covid19 Equipments: Congress Leader Rahul Gandhi Urges To Central Government

ಪಟ್ಟಿಯ ಪ್ರಕಾರ, ಸ್ಯಾನಿಟೈಸರ್, ಲಿಕ್ವಿಡ್ ಹ್ಯಾಂಡ್ ವಾಶ್ ಮತ್ತು ಪೀಠೋಪಕರಣಗಳಾದ ಆಸ್ಪತ್ರೆ ಹಾಸಿಗೆಗಳು ಮತ್ತು ಪರೀಕ್ಷಾ ಕೋಷ್ಟಕಗಳು, ಶೇ 12 ರಷ್ಟು ಬ್ಲಡ್ ಟೆಸ್ಟ್‌ ಕಿಟ್‌ಗಳು, ವೆಂಟಿಲೇಟರ್, ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಶೇ 5 ರಷ್ಟು ಮುಖವಾಡಗಳು, ರೋಗನಿರ್ಣಯ ಕಿಟ್‌ಗಳು ಹಾಗೂ ಲಸಿಕೆಗಳು ಸೇರಿದಂತೆ ಕೆಲವು ಜೀವ ಉಳಿಸುವ ಔಷಧಿಗಳ ಪಟ್ಟಿಯನ್ನು ರಾಹುಲ್ ಗಾಂಧಿ ನೀಡಿದ್ದಾರೆ.

English summary
Dont Take GST For Covid19 Equipments: Congress Leader Rahul Gandhi Urges To Central Government. he twitted on monday with 18 Equipments list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X