ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ನೀತಿ ಬಗ್ಗೆ ವಾಟ್ಸಾಪ್ ಒತ್ತಡ ಹೇರುವಂತಿಲ್ಲ: ಹೈಕೋರ್ಟ್

|
Google Oneindia Kannada News

ನವದೆಹಲಿ, ಜನವರಿ 18: ವಾಟ್ಸಾಪ್‍ ಖಾಸಗಿತನ ನೀತಿ ಮತ್ತು ಸೇವೆಗಳ ನಿಬಂಧನೆಗಳ ಹೊಸ ಅಪ್ಡೇಟ್ ಕುರಿತಂತೆ ದೆಹಲಿ ಹೈಕೋರ್ಟ್ ತನ್ನ ಆದೇಶವನ್ನು ಸೋಮವಾರ ನೀಡಿದೆ.

''ಹೊಸ ಅಪ್ಡೇಟ್ ನಿಮ್ಮ ಮಿತ್ರರು ಅಥವಾ ಕುಟುಂಬದ ಸಂದೇಶಗಳ ಖಾಸಗಿತನಕ್ಕೆ ಯಾವುದೇ ರೀತಿಯಲ್ಲಿ ಬಾಧಕವಲ್ಲ'' ಎಂದು ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಾಪ್ ಸ್ಪಷ್ಟನೆ ನೀಡಿತ್ತು. ಆದರೆ, ಖಾಸಗಿತನ ಅಥವಾ ಗೌಪ್ಯತೆ ನೀತಿಯನ್ನು ವಾಟ್ಸಾಪ್ ಸಂಸ್ಥೆ ಉಲ್ಲಂಘಿಸಿದೆ ಎಂದು ಸಂಸ್ಥೆ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ವಾಟ್ಸಾಪ್ ತನ್ನ ವಾಟ್ಸಾಪ್ ಸ್ಟೇಟಸ್ ಮೂಲಕ ಹೇಳಿದ್ದೇನು? ವಾಟ್ಸಾಪ್ ತನ್ನ ವಾಟ್ಸಾಪ್ ಸ್ಟೇಟಸ್ ಮೂಲಕ ಹೇಳಿದ್ದೇನು?

ವಾಟ್ಸಾಪ್ ಹೊಸ ಅಪ್ಡೇಟ್ ಖಾಸಗಿ ನೀತಿಯನ್ನು ಪ್ರಶ್ನಿಸಿ ವಕೀಲ ಚೈತನ್ಯ ರೊಹಿಲ್ಲಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಇದು ಬಳಕೆದಾರರ ಆಯ್ಕೆಗೆ ಬಿಟ್ಟ ವಿಷಯ, ಹೊಸ ಅಪ್ಡೇಟ್ ಸ್ವಯಂಪ್ರೇರಿತರಾಗಿ ಬಳಸಬಹುದು ಅಥವಾ ಬಿಡಬಹುದು, ಈ ಬಗ್ಗೆ ವಾಟ್ಸಾಪ್ ಒತ್ತಡ ಹೇರುವಂತಿಲ್ಲ, ಅಗತ್ಯ ಬಿದ್ದರೆ, ಖಾಸಗಿತನಕ್ಕೆ ಧಕ್ಕೆ ಎಂದು ತಿಳಿದು ಬಂದರೆ ಬಳಕೆದಾರರು ಈ ವೇದಿಕೆಯನ್ನೇ ತೊರೆಯಬಹುದು ಎಂದು ಹೇಳಿದೆ. ಮುಂದಿನ ವಿಚಾರಣೆಯನ್ನು ಜನವರಿ 25ಕ್ಕೆ ಮುಂದೂಡಲಾಗಿದೆ.

Dont join WhatsApp if not accepting new policy: HC

ವ್ಯಕ್ತಿಯ ಆನ್‌ಲೈನ್‌ ಚಟುವಟಿಕೆಯಲ್ಲಿ ಸಂಪೂರ್ಣ ಪ್ರೊಫೈಲ್‌ 360 ಡಿಗ್ರಿ ಅನ್ನು ಬಹಿರಂಗಗೊಳಿಸಲಿರುವ ವಾಟ್ಸಾಪ್ ಇದಕ್ಕಾಗಿ ರೂಪಿಸಿಕೊಂಡಿರುವ ನೀತಿ ಬಗ್ಗೆ ಸರಿಯಾದ ಸ್ಪಷ್ಟನೆ ನೀಡಬೇಕಿದೆ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಆದರೆ, ಮೂಲ ಸಂಸ್ಥೆ ಫೇಸ್ಬುಕ್ ಜೊತೆಗೆ ಮಾತ್ರ ಮಾಹಿತಿ ಹಂಚಿಕೊಳ್ಳಲಾಗುತ್ತಿದ್ದು, ಹಂಚಿಕೊಳ್ಳುವ ಮುನ್ನ ಬಳಕೆದಾರರು ಇಚ್ಛಿಸಿದರೆ ಮಾತ್ರ ಇದು ಸಾಧ್ಯ ಎಂದು ವಾಟ್ಸಾಪ್ ಸಮಜಾಯಿಷಿ ನೀಡಿದೆ.

English summary
The Delhi High Court on Monday said accepting the new privacy policy of social messaging app WhatsApp was a "voluntary" thing and one can choose not to use or join that platform if one did not agree with its terms and conditions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X