ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಾಬಾ ಕಾ ಡಾಬಾ' ವೃದ್ಧ ದಂಪತಿ ಹೆಸರಲ್ಲಿ ಹಣ ದೋಚಿದರಾ ಯೂಟ್ಯೂಬರ್?

|
Google Oneindia Kannada News

ನವದೆಹಲಿ, ನವೆಂಬರ್.02: 'ಬಾಬಾ ಕಾ ಡಾಬಾ' ನಡೆಸುತ್ತಿದ್ದ ವೃದ್ಧ ದಂಪತಿಗೆ ನೆರವು ನೀಡುವ ನೆಪದಲ್ಲಿ ಹಣ ವಸೂಲಿ ಮಾಡಿರುವ ಯೂಟ್ಯೂಬರ್ ಗೌರವ್ ವಾಸನ್ ವಿರುದ್ಧ ಕಾಂತಪ್ರಸಾದ್ ಪೊಲೀಸರಿಗೆ ದೂರು ನೀಡಿದ್ದಾರೆ.

ದಕ್ಷಿಣ ದೆಹಲಿಯ ಮಾಳ್ವಿಯಾ ನಗರದಲ್ಲಿ ಕಾಂತಪ್ರಸಾದ್ 'ಬಾಬಾ ಕಾ ಡಾಬಾ' ಎಂಬ ಹೋಟೆಲ್ ಇಟ್ಟುಕೊಂಡಿದ್ದರು. ಕೊರೊನಾವೈರಸ್ ಆತಂಕದ ಹಿನ್ನೆಲೆ ಭಾರತ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ ವೃದ್ಧ ದಂಪತಿ ನಡೆಸುತ್ತಿದ್ದ ಹೋಟೆಲ್ ನಲ್ಲಿ ವ್ಯಾಪಾರವಿಲ್ಲದೇ ಸಂಕಷ್ಟಕ್ಕೆ ಸಿಲುಕುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆಂಗಳೂರಿನ ರೇವಣ ಸಿದ್ಧಪ್ಪ!ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆಂಗಳೂರಿನ ರೇವಣ ಸಿದ್ಧಪ್ಪ!

ಕಾಂತಪ್ರಸಾದ್ ಮತ್ತು ಅವರ ಪತ್ನಿ ಎದುರಿಸುತ್ತಿದ್ದ ಪರಿಸ್ಥಿತಿ ಬಗ್ಗೆ ವಿಡಿಯೋ ಚಿತ್ರೀಕರಿಸಿದ ಯೂಟ್ಯೂಬರ್ ಗೌರವ್ ವಾಸನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ವೃದ್ಧ ದಂಪತಿಗೆ ನೆರವು ನೀಡುವುದಾಗಿ ಹೇಳಿಕೊಂಡು ಸಾಕಷ್ಟು ಹಣವನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

Donation Misuse: ‘Baba ka Dhaba’ Owner Filed Complaint Against YouTuber Gaurav Wasan

ಮೋಸ, ವಂಚನೆ ಅಡಿ ಪ್ರಕರಣ ದಾಖಲು:

ಯೂಟ್ಯೂಬರ್ ಗೌರವ್ ವಾಸನ್ ವಿರುದ್ಧ ಮೋಸ, ಕಿಡಿಗೇಡಿತನ, ನಂಬಿಕೆ ದ್ರೋಹ, ಕ್ರಿಮಿನಲ್ ಪಿತೂರಿ, ಹಣವನ್ನು ದುರುಪಯೋಗ ಸೇರಿದಂತೆ ಐಪಿಸಿಯ ಇತರೆ ಸಂಬಂಧಿತ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. "ಗೌರವ್ ವಾಸನ್ ಉದ್ದೇಶಪೂರ್ವಕವಾಗಿ ದಾನಿಗಳಿಗೆ ತಮ್ಮ ಮತ್ತು ತಮ್ಮ ಸಂಬಂಧಿಕರ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ತಮಗೆ ನೆರವು ನೀಡುವುದಾಗಿ ನಂಬಿಸಿ ದಾನಿಗಳಿಂದ ಹಲವು ವಿಧಾನಗಳಲ್ಲಿ ಸಾಕಷ್ಟು ಹಣವನ್ನು ಪಡೆದುಕೊಂಡಿದ್ದಾರೆ. ಯೂಟ್ಯೂಬರ್ ಗೌರವ್ ವಾಸನ್ ಅವರ ಬ್ಯಾಂಕ್ ಖಾತೆಯ ವಹಿವಾಟಿನ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡಿಲ್ಲ" ಎಂದು ಕಾಂತಪ್ರಸಾದ್ ಆರೋಪಿಸಿದ್ದಾರೆ.

ನಿನ್ನೆಯಷ್ಟೇ ಮಾಳ್ವಿಯಾ ನಗರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಪಡೆದುಕೊಂಡಿದ್ದೇವೆ. ಆರೋಪಕ್ಕೆ ಸಂಬಂಧಿಸಿದಂತೆ ಇಷ್ಟರಲ್ಲೇ ತನಿಖೆ ಆರಂಭಿಸಲಾಗುತ್ತಿದ್ದು, ಈವರೆಗೂ ಎಫ್ಐಆರ್ ದಾಖಲಾಗಿಲ್ಲ ಎಂದು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.

ಆರೋಪ ತಳ್ಳಿ ಹಾಕಿದ ಗೌರವ್ ವಾಸನ್:

Recommended Video

DK Ravi ನಾನು ತುಂಬಾ ಚನ್ನಾಗಿದ್ವಿ! | Kusuma Exclusive Interview | Part 2 | Oneindia Kannada

ಬಾಬಾ ಕಾ ಡಾಬಾ ಹೋಟೆಲ್ ಮಾಲೀಕ ಕಾಂತಪ್ರಸಾದ್ ಮಾಡಿರುವ ಆರೋಪವನ್ನು ಯೂಟ್ಯೂಬರ್ ಗೌರವ್ ವಾಸನ್ ತಳ್ಳಿ ಹಾಕಿದ್ದಾರೆ. ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಿರುವ ಒಂದು ವಿಡಿಯೋದಲ್ಲಿ ಕಾಂತಪ್ರಸಾದ್ ಅವರಿಗೆ ನೀಡಿದ ಹಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರಿಗೆ ಬಂದಿದ್ದ 2.30 ಲಕ್ಷ ರೂಪಾಯಿ ನೆರವಿನ ಹಣವನ್ನು ಕಾಂತಪ್ರಸಾದ್ ಅವರಿಗೆ ತಲುಪಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

English summary
Donation Misuse: ‘Baba ka Dhaba’ Owner Kant Prasad Filed Complaint Against YouTuber Gaurav Wasan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X