• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೀವೂ ರಕ್ತದಾನ ಮಾಡಬೇಕಾ? ಹಾಗಾದರೆ ಇವುಗಳನ್ನು ನೆನಪಿಡಿ

|

ನವದೆಹಲಿ, ಜೂನ್ 14: ಪ್ರತೀ ಮನುಷ್ಯನ ದೇಹದಾದ್ಯಂತ ಸಂಚರಿಸಿ, ಆತನ ಜೀವವನ್ನು ಹಿಡಿದಿಟ್ಟಿರುವ ಆ ಕೆಂಪು ದ್ರವ ಕೇವಲ ಹಿಂಸೆಯ ಸಂಕೇತವಷ್ಟೇ ಅಲ್ಲ, ಅದು ಪ್ರಾಣ ಉಳಿಸುವ ಜೀವದ್ರವವೂ ಹೌದು. ರಕ್ತ ಕಂಡೊಡನೆ ಹಲವರಿಗೆ ತಲೆ ಸುತ್ತುತ್ತದೆ, ಕಣ್ಣು ಮಸುಕಾಗುತ್ತದೆ. ಆದರೆ ಅದೇ ರಕ್ತವೇ ನಮ್ಮೆಲ್ಲ ದೇಹದ ತುಂಬೆಲ್ಲಾ ತುಂಬಿಕೊಂಡು ನಮ್ಮನ್ನು ರಕ್ಷಿಸುತ್ತಿದೆ ಎಂಬುದು ನೆನಪಾದರೆ ರಕ್ತದ ಮಹತ್ವವೇನು ಎಂಬುದು ಅರ್ಥವಾಗುತ್ತದೆ.

ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಮತ್ತು ರಕ್ತದಾನ ಮಾಡಿ ಪರರ ಪ್ರಾಣ ಉಳಿಸಿದ ದಾನಿಗಳಿಗೆ ಕೃತಜ್ಞತೆ ಹೇಳುವ ಸಲುವಾಗಿ ಪ್ರತಿ ವರ್ಷ ಜೂನ್ 14 ನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಜನರು ರಕ್ತದಾನದ ಕುರಿತು ಅರಿವು ಮೂಡಿಸುವ ಮೂಲಕ ಮತ್ತು ರಕ್ತದಾನ ಮಾಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ 2004 ರಲ್ಲಿ ಆರಂಭವಾದ ಈ ಆಚರಣೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಪ್ರತಿ ವರ್ಷ ಆಚರಿಸಿಕೊಂಡದು ಬರುತ್ತಿವೆ.

'ರಕ್ತದಾನ ದಿನ' ವಿಶೇಷ: ಪ್ರತಿ ವರ್ಷ 60 ಸಾವಿರ ಲೀ. ರಕ್ತ ವ್ಯರ್ಥ!

Give Blood. Give Now. Give Often (ರಕ್ತದಾನ ಮಾಡಿ, ಈಗಲೇ ದಾನಮಾಡಿ, ಮತ್ತೆ ಮತ್ತೆ ದಾನಮಾಡುತ್ತಿರಿ) ಇದು, ಈ ಬಾರಿಯ ರಕ್ತದಾನ ದಿನದ ಘೋಷ ವಾಕ್ಯ. ರಕ್ತದಾನದ ಕುರಿತು ಇಂದಿಗೂ ಹಲವರಲ್ಲಿ ತಪ್ಪುಕಲ್ಪನೆಗಳಿವೆ.

ರಕ್ತದಾನ ಮಾಡಿದರೆ ದೇಹದ ತೂಕ ಕಡಿಮೆಯಾಗುತ್ತದೆ, ಅಥವಾ ಅಶಕ್ತತೆ ಕಾಡುತ್ತದೆ... ಇತ್ಯಾದಿ, ಇತ್ಯಾದಿ. ಆದರೆ ಇದ್ಯಾವುದೂ ಸತ್ಯವಲ್ಲ. ರಕ್ತ ನಮ್ಮ ದೇಹದ ಒಟ್ಟು ತೂಕದ ಶೇ.7 ಪ್ರತಿಶತ ಮಾತ್ರ ಇರುತ್ತದೆ. ಭಾರತದಲ್ಲಿ ಸದ್ಯಕ್ಕೆ ಶೇ. 9 ರಷ್ಟು ರಕ್ತದ ಕೊರತೆಯಿದೆ.

ರಕ್ತದಾನದ ಕುರಿತು ಕೆಲವು ಅಗತ್ಯ ಮಾಹಿತಿ, ನಿಮಗಾಗಿ ಇಲ್ಲಿದೆ.

ಎಲ್ಲ ವಯಸ್ಸಿನಲ್ಲಿಯೂ ರಕ್ತದಾನ ಮಾಡಬಹುದೆ?

ಎಲ್ಲ ವಯಸ್ಸಿನಲ್ಲಿಯೂ ರಕ್ತದಾನ ಮಾಡಬಹುದೆ?

ರಕ್ತದಾನ ಮಾಡುವುದಕ್ಕೂ ನಿರ್ದಿಷ್ಟ ವಯಸ್ಸಿದೆ. 18 ರಿಂದ 60 ವರ್ಷ ವಯಸ್ಸಿನ, 50 ಕೆಜಿಗಿಂತ ಹೆಚ್ಚು ತೂಕ ಹೊಂದಿದವರು ರಕ್ತದಾನ ಮಾಡುವುದಕ್ಕೆ ಅರ್ಹರು. ನಿಮ್ಮ ದೇಹದ ಉಷ್ಣತೆ 37.5 ಡಿಗ್ರಿ ಸೆಲ್ಷಿಯಸ್ ದಾಟುವಂತಿಲ್ಲ.

ಯಾರು ರಕ್ತದಾನಕ್ಕೆ ಅರ್ಹರಲ್ಲ?

ಯಾರು ರಕ್ತದಾನಕ್ಕೆ ಅರ್ಹರಲ್ಲ?

ಸೋಂಕು ರೋಗ ಹೊಂದಿರುವವರು, ಎಚ್ ಐವಿ, ಕ್ಯಾನ್ಸರ್, ಅಸ್ತಮಾ, ಕ್ಷಯ, ರೇಬೀಸ್, ಮಧುಮೇಹದಂಥ ಕಾಯಿಲೆಗಳಿಂದ ಬಲಲುತ್ತಿರುವವರು ರಕ್ತದಾನ ಮಾಡುವಂತಿಲ್ಲ. ಏಕೆಂದರೆ ರಕ್ತ ರೋಗವಾಹಕವಾಗುವ ಸಾಧ್ಯತೆಗಳು ಹೆಚ್ಚು.

ಹಳೆ ನೋಟು ರದ್ದಿನಿಂದಾಗಿ ಅಪಘಾತ ಸಂತ್ರಸ್ತ ಸಾವು

ಹಿಮೋಗ್ಲೊಬಿನ್ ಎಷ್ಟಿರಬೇಕು?

ಹಿಮೋಗ್ಲೊಬಿನ್ ಎಷ್ಟಿರಬೇಕು?

ಒಬ್ಬ ವ್ಯಕ್ತಿಯ ರಕ್ತದಲ್ಲಿ ಹಿಮೋಗ್ಲೊಬಿನ್ ಪ್ರಮಾಣ 12.5 ಗ್ರಾಮ್/ಡೆಸಿಲೀಟರ್ ಇದ್ದರೆ ಮಾತ್ರ ಆತ ಆರೋಗ್ಯವಂತ ಎಂದು ಪರಿಗಣಿಸಿ, ರಕ್ತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

100ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ಹೆಗ್ಗಳಿಕೆ ಇವರದು

ನಾಡಿಮಿಡಿತ

ನಾಡಿಮಿಡಿತ

ವ್ಯಕ್ತಿಯ ನಾಡಿಮಿಡಿತ ನಿಮಿಷಕ್ಕೆ 50-100 ಇರಬೇಕು. 50 ಕ್ಕಿಂತ ಕಡಿಮೆ ಅಥವಾ 100 ಕ್ಕಿಂತ ಹೆಚ್ಚಾದರೆ ಆ ವ್ಯಕ್ತಿ ರಕ್ತದಾನ ಮಾಡುವುದಕ್ಕೆ ಸಾಧ್ಯವಿಲ್ಲ.

ರಕ್ತದಾನಿಗಳ ದಿನ, ಗೂಗಲ್ ಡೂಡ್ಲ್ , ಟ್ವಿಟ್ಟರ್ ಸಂದೇಶಗಳು

ಮತ್ತೆ ರಕ್ತದಾನ ಮಾಡೋದಕ್ಕೆ 56 ದಿನ ಕಾಯಬೇಕು!

ಮತ್ತೆ ರಕ್ತದಾನ ಮಾಡೋದಕ್ಕೆ 56 ದಿನ ಕಾಯಬೇಕು!

ರಕ್ತದಾನ ಮಾಡುವವರು ಒಮ್ಮೆ ರಕ್ತದಾನ ಮಾಡಿದ ಮೇಲೆ ಕನಿಷ್ಠ 56 ದಿನ ಕಾಯಲೇಬೇಕು! ಸಂಕೀರ್ಣ ಶಸ್ತ್ರಚಿಕಿತ್ಸೆಗೊಳಗಾದವರಾಗಿದ್ದರೆ ಆರು ತಿಂಗಳ ಕಾಲ ರಕ್ತದಾನ ಮಾಡುವಂತಿಲ್ಲ.

ಮದ್ಯಪಾನ ಮಾಡಿರಬಾರದು

ಮದ್ಯಪಾನ ಮಾಡಿರಬಾರದು

ರಕ್ತದಾನ ಮಾಡುವವರು ರಕ್ತದಾನಕ್ಕೆ ಮುಂಚೆ ಮದ್ಯಪಾನ ಮಾಡಿರಬಾರದು, ಹಾಗೆಯೇ ರಕ್ತದಾನ ಮಾಡುವ ಮುಂಚಿನ ದಿನ ಯಾವುದೇ ಮಾತ್ರೆಯನ್ನೂ ಸೇವಿಸುವಂತಿಲ್ಲ.

ಅವಿರತ ಟ್ರಸ್ಟ್ ನಿಂದ ರಕ್ತದಾನಕ್ಕಾಗಿ ಆಂಡ್ರಾಯ್ಡ್ ಅಪ್ಲಿಕೇಷನ್

ರಕ್ತದಾನದ ನಂತರ ಏನುಮಾಡಬೇಕು?

ರಕ್ತದಾನದ ನಂತರ ಏನುಮಾಡಬೇಕು?

ರಕ್ತದಾನ ಮಾಡಿದ 20 ನಿಮಿಷಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು. ತಕ್ಷಣ ವಾಹನ ಚಾಲನೆ ಮಾಡುವಂತಿಲ್ಲ. ಹಣ್ಣು ಮತ್ತು ಸಕ್ಕರೆ ಅಂಶ ಹೆಚ್ಚಿರುವ ಹಣ್ಣಿನ ಜ್ಯೂಸ್ ಸೇವಿಸಬೇಕು. ಇದರಿಂದ ರಕ್ತದಲ್ಲಿ ಕಡಿಮೆಯಾದ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಪ್ರೊಟೀನ್ ಹೆಚ್ಚಿರುವ ಆಹಾರ ಸೇವಿಸಬೇಕು. ರಕ್ತದಾನ ಮಾಡಿದ ನಂತರದ 8 ಗಂಟೆಯವರೆಗೆ ಮದ್ಯಪಾನ ಮಾಡುವಂತಿಲ್ಲ. ಹಾಗೆಯೇ ದೇಹಕ್ಕೆ ದಣಿವಾಗುವಂಥ ವ್ಯಾಯಾಮ ಮಾಡುವಂತಿಲ್ಲ.

English summary
Every year on 14 June, countries around the world celebrate World Blood Donor Day (WBDD). The event, established in 2004, serves to raise awareness of the need for safe blood and blood products, and to thank blood donors for their voluntary, life-saving gifts of blood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X