ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮನ್ನು ಯುವರ್ ಆನರ್ ಎನ್ನಬೇಡಿ, ಕಾನೂನು ವಿದ್ಯಾರ್ಥಿಗೆ ಸುಪ್ರೀಂ ಪಾಠ

|
Google Oneindia Kannada News

ನವದೆಹಲಿ,ಫೆಬ್ರವರಿ 23: ನಮ್ಮನ್ನು 'ಯುವರ್ ಆನರ್' ಎಂದು ಸಂಬೋಧಿಸಬೇಡಿ ಎಂದು ಕಾನೂನು ವಿದ್ಯಾರ್ಥಿಗೆ ಸುಪ್ರೀಂಕೋರ್ಟ್ ಪಾಠ ಮಾಡಿದೆ.

ಅಮೆರಿಕಾ ಸುಪ್ರೀಂ ಕೋರ್ಟ್ ಮತ್ತು ಮ್ಯಾಜಿಸ್ಟೀರಿಯಲ್ ನ್ಯಾಯಾಲಯದಲ್ಲಿ ನ್ಯಾಯಾಲಯವನ್ನು 'ಯುವರ್ ಆನರ್'ಎಂದು ಸಂಬೋಧಿಸಬಹುದು ಆದರೆ ಭಾರತೀಯ ಸುಪ್ರೀಂ ಕೋರ್ಟ್ ನಲ್ಲಿ ಅಲ್ಲಎಂದು ನ್ಯಾಯಪೀಠ ಅವರಿಗೆ ತಿಳಿಸಿದೆ.

ಮಹದಾಯಿ ವಿವಾದ; ಗೋವಾದಿಂದಾಗಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಮಹದಾಯಿ ವಿವಾದ; ಗೋವಾದಿಂದಾಗಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ

ನಂತರ ನ್ಯಾಯಪೀಠವು ಅವರ ಪ್ರಕರಣವೇನು ಎಂದು ಕೇಳಲು ವೈಯಕ್ತಿಕವಾಗಿ ಹಾಜರಾದ ವಿದ್ಯಾರ್ಥಿ, ಕ್ರಿಮಿನಲ್ ನ್ಯಾಯವ್ಯಾಪ್ತಿಯಲ್ಲಿ ನ್ಯಾಯಾಂಗದ ಮೂಲಸೌಕರ್ಯವನ್ನು ಬಲಪಡಿಸಬೇಕೆಂದು ತಾವು ಬಯಸುವುದಾಗಿ ಹೇಳಿದ್ದಾರೆ.

 Don’t Call Us Your Honour It’s Not US Supreme Court, SC Tells Law Student

ನ್ಯಾಯಪೀಠದ ಮೂಲಸೌಕರ್ಯವನ್ನು ಹಂತ ಹಂತವಾಗಿ ಅಧೀನಕ್ಕೆ ತರುವವರೆಗೆ ನ್ಯಾಯಾಂಗದ ಮೂಲಸೌಕರ್ಯಗಳನ್ನು ಬಲಪಡಿಸಲು ನಿರ್ದೇಶನಗ ಜಾರಿಯಲ್ಲಿದೆ, ಈ ವಿಚಾರದಲ್ಲಿ ಇದಾಗಲೇ ಒಂದು ಅರ್ಜಿ ಬಾಕಿ ಇದೆ ಎಂದು ನ್ಯಾಯಪೀಠ ಅವರಿಗೆ ತಿಳಿಸಿದೆ. ವಿಚಾರಣೆ ನಾಲ್ಕು ವಾರಗಳ ಕಾಲ ಮುಂದೂಡಿ ನ್ಯಾಯಾಲಯ ಆದೇಶಿಸಿದೆ.

ನೀವು ನಮ್ಮನ್ನು ಯುವರ್ ಆನರ್ ಎಂದು ಕರೆದಾಗ ನೀವು ಅಮೆರಿಕಾದ ಸುಪ್ರೀಂ ಕೋರ್ಟ್ ಅನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೀರಿ ಎಂದು ತೋರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಸ್ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರ ನ್ಯಾಯಪೀಠ ಕಾನೂನು ವಿದ್ಯಾರ್ಥಿಗೆ ತಿಳಿಸಿದೆ.

ಅದಾಗ ಕಾನೂನು ವಿದ್ಯಾರ್ಥಿ ತಕ್ಷಣ ನ್ಯಾಯಪೀಠಕ್ಕೆ ಕ್ಷಮೆಯಾಚಿಸಿದರು ಮತ್ತು ನ್ಯಾಯಾಲಯವನ್ನು ಯುವರ್ ಲಾರ್ಡ್‌ಶಿಪ್ ಎಂದು ಸಂಬೋಧಿಸುವುದಾಗಿ ಹೇಳಿದರು. ಇದಕ್ಕೆ ಸಿಜೆಐ ಬೊಬ್ಡೆ ಏನೇ ಇರಲಿ, ಆದರೆ ಸೂಕ್ತವಲ್ಲದ ಪದಗಳನ್ನು ಬಳಸಬೇಡಿ ಎಂದು ಹೇಳಿದ್ದಾರೆ.

English summary
The Supreme Court Tuesday cautioned a law student not to address the judges as Your honour as it was not the US Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X