ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ: ಮಹಿಳೆಯರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು, ಯಾಕೆ?

|
Google Oneindia Kannada News

ನವದೆಹಲಿ, ಜೂನ್ 21: ಇದೇ ಜುಲೈ 1 ರಿಂದ ಜಾರಿಗೆ ಬರಲಿರುವ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳೆದ್ದಿವೆ, ಹಲವೆಡೆ ವಿರೋಧವೂ ವ್ಯಕ್ತವಾಗಿದೆ, ಕೆಲವೆಡೆ ಬೆಂಬಲವೂ ಸಿಕ್ಕಿದೆ. ಒಂದು ರಾಷ್ಟ್ರ, ಒಂದು ತೆರಿಗೆ ಎಂಬ ಗುರಿಯೊಂದಿಗೆ ಜಾರಿಗೆ ಬರುತ್ತಿರುವ ಈ ಮಸೂದೆಯಿಂದಾಗಿ ಹಲವು ದಿನಬಳಕೆಯ ವಸ್ತುಗಳ ಬೆಲೆ ಏರುವ ಸಾಧ್ಯತೆ ಇದೆ, ಹಾಗೆಯೇ ಕೆಲವು ವಸ್ತುಗಳ ಬೆಲೆ ಕಡಿಮೆಯೂ ಆಗಬಹುದು.

ಜಿಎಸ್ ಟಿ ಪರಿಣಾಮ: ಚಿನ್ನದ ಮೇಲೆ ಶೇ. 3ರಷ್ಟು ತೆರಿಗೆಜಿಎಸ್ ಟಿ ಪರಿಣಾಮ: ಚಿನ್ನದ ಮೇಲೆ ಶೇ. 3ರಷ್ಟು ತೆರಿಗೆ

ಹೀಗಿರುವಾಗ ಈ ಮಸೂದೆ ಮಹಿಳೆಯರಿಗೆ ಎಷ್ಟರ ಮಟ್ಟಿಗೆ ಲಾಭದಾಯಕ ಎಂಬ ಕುರಿತು ಯೋಚಿಸಿದರೆ ಬೇಸರವಾಗಬಹುದು. ಏಕೆಂದರೆ ಪ್ರತಿಯೊಬ್ಬ ಮಹಿಳೆಗೂ ಅತ್ಯಗತ್ಯವಾದ ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲೆಯೇ ಶೇ.12 ರಷ್ಟು ತೆರಿಗೆ ಹಾಕುವ ಮೂಲಕ ಸರ್ಕಾರ ಮಹಿಳೆಯರಿಗೆ ಶಾಕ್ ನೀಡಿದೆ.

ಜಿಎಸ್ ಟಿ ಪರಿಣಾಮ: ಯಾವ್ಯಾವುದರ ಮೇಲೆ ಎಷ್ಟೆಷ್ಟು ತೆರಿಗೆ?ಜಿಎಸ್ ಟಿ ಪರಿಣಾಮ: ಯಾವ್ಯಾವುದರ ಮೇಲೆ ಎಷ್ಟೆಷ್ಟು ತೆರಿಗೆ?

ಮಹಿಳೆಯರಿಗೆ ಋತುಮತಿಯಾಗಿರುವ ಸಮಯದಲ್ಲಿ ಅತ್ಯಗತ್ಯವಾಗಿ ಬೇಕಾದ ಸ್ಯಾನಿಟರಿ ನ್ಯಾಪ್ಕಿನ್ ಮೇಲೆ ಈ ಪರಿ ತೆರಿಗೆ ಹೇರುವುದು ಸರಿಯೇ ಎಂಬ ಪ್ರಶ್ನೆ ಈಗ ಎಲ್ಲೆಡೆ ಚರ್ಚೆಗೆ ನಾಂದಿ ಹಾಡಿದೆ. ಕೆಲವು ರಾಜ್ಯಗಳಲ್ಲಿ ಈ ತೆರಿಗೆ 12 ರಿಂದ 14.5 ರವರೆಗೂ ಹೋಗಬಹುದು!

ತೆರಿಗೆ ಹೊರೆ

ತೆರಿಗೆ ಹೊರೆ

ಜಿಎಸ್ ಟಿ ಮಸೂದೆಗೊಳಪಡುವ ಎಲ್ಲಾ ವಸ್ತು ಅಥವಾ ಸೇವೆಯ ಮೇಲಿನ ತೆರಿಗೆಯನ್ನು ನಾಲ್ಕು ವಿಭಾಗ(ಸ್ಲಾಟ್)ಗಳನ್ನಾಗಿ ಮಾಡಲಾಗಿದೆ. ಅದರ ಪ್ರಕಾರ ದಿನಬಳಕೆಯ ಅತ್ಯವಶ್ಯಕ ವಸ್ತುಗಳ ಮೇಲೆ ಅಂದರೆ ಸಕ್ಕರೆ, ಚಾ ಪುಡಿ, ಅಡುಗೆ ಎಣ್ಣೆ, ಹಾಲಿನ ಪುಡಿ ಇತ್ಯಾದಿಗಳಿಗೆ ಶೇ.5 ರಷ್ಟು ತೆರಿಗೆ ವಿಧಿಸಲಾಗಿದೆ. ಹಾಗೆಯೇ ಸಾಮಾನ್ಯ ವಸ್ತುಗಳಿಗೆ ಅಂದರೆ ಬೆಣ್ಣೆ, ತುಪ್ಪ, ಬಾದಾಮಿ, ಹಣ್ಣಿನ ಜ್ಯೂಸ್ ಇತ್ಯಾದಿಗಳಿಗೆ ಶೇ.12 ರಿಂದ ಶೇ.18 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಉಳಿದಂತೆ ಐಷಾರಾಮಿ ವಸ್ತುಗಳ ಮೇಲೆ ಶೇ.28 ರಷ್ಟು ತೆರಿಗೆ ಹೊರೆ ಬೀಳಲಿದೆ.

ಶೇ.12 ತೆರಿಗೆ ಸರಿಯೇ?

ಶೇ.12 ತೆರಿಗೆ ಸರಿಯೇ?

ಆದರೆ ಹೆಣ್ಣು ಮಕ್ಕಳಿಗೆ ಅತ್ಯಗತ್ಯವಾದ ಸ್ಯಾನಿಟರಿ ನ್ಯಾಪ್ಕಿನ್ ಅನ್ನು ತೆರಿಗೆ ಮುಕ್ತ ಗೊಳಿಸುವ ಅಥವಾ ಅವುಗಳಿಗೆ ಕಡಿಮೆ ತೆರಿಗೆ ಹೇರುವ ಬದಲು ಶೇ.12 ರಷ್ಟು ತೆರಿಗೆ ಹೇರಿರುವ ಸರ್ಕಾರದ ಕ್ರಮ ತರವೇ ಎಂಬುದು ಹಲವರ ಪ್ರಶ್ನೆ. ಹಾಗಾದರೆ ಸ್ಯಾನಿಟರಿ ನ್ಯಾಪ್ಕಿನ್ ಅತ್ಯವಶ್ಯಕಗಳ ಪಟ್ಟಿ ಸೇರುವುದಿಲ್ಲ ಎಂದೇ ಇದರರ್ಥ?

ಬಳೆ-ಸಿಂಧೂರಕ್ಕಿಲ್ಲ ತೆರಿಗೆ!

ಬಳೆ-ಸಿಂಧೂರಕ್ಕಿಲ್ಲ ತೆರಿಗೆ!

ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಗಳಿಗಿಂತ ಬಳೆ- ಸಿಂಧೂರಗಳೇ ಅತ್ಯವಶ್ಯಕ ಎಂದುಕೊಂಡಿರುವ ಸರ್ಕಾರ ಬಳೆ-ಸಿಂಧೂರಗಳನ್ನು ತೆರಿಗೆ ಮುಕ್ತಗೊಳಿಸಿದ್ದು, ಸ್ಯಾನಿಟರಿ ನ್ಯಾಪ್ಕಿನ್ ಗಳಿಗೆ ಮಾತ್ರ ತೆರಗಿಗೆ ಹೇರಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ಸೌಂದರ್ಯ ವರ್ಧಕಗಳಿಗೂ ತೆರಿಗೆ ಬಿಸಿ

ಸೌಂದರ್ಯ ವರ್ಧಕಗಳಿಗೂ ತೆರಿಗೆ ಬಿಸಿ

ಹಲವು ಮಹಿಳೆಯರಿಗೆ ಅತ್ಯವಶ್ಯಕವೆನ್ನಿಸಿರುವ ಸೌಂದರ್ಯ ವರ್ಧಕಗಳ ಮೇಲೆ ಅಂದರೆ ಲಿಪ್ ಸ್ಟಿಕ್ ಗಳು, ಹೇರ್ ಡೈ ಮುಂತಾದವುಗಳ ಮೇಲೆ ಶೇ.28 ರಷ್ಟು ತೆರಿಗೆ ವಿಧಿಸಲಾಗುತ್ತಿದೆ!

ಸ್ವಚ್ಛತೆಗೆ ಈ ಪರಿ ಬೆಲೆ ತೆರಬೇಕಾ?

ಸ್ವಚ್ಛತೆಗೆ ಈ ಪರಿ ಬೆಲೆ ತೆರಬೇಕಾ?

ಸೌಂದರ್ಯ ವರ್ಧಕಗಳ ಮೇಲಾಗಲಿ, ಇನ್ನುಳಿದ ದಿನಬಳಕೆಯ ವಸ್ತುಗಳ ಮೇಲಾಗಲೀ ಸರ್ಕಾರ ತೆರಿಗೆ ವಿಧಿಸುವ ಕುರಿತು ಮಹಿಳೆಯರ ವಿರೋಧವೇನಿಲ್ಲ. ಆದರೆ ಅತ್ಯಗತ್ಯ ವಸ್ತುವಾದ ಸ್ಯಾನಿಟರಿ ನ್ಯಾಪ್ಕಿನ್ ಮೇಲೆ ಈ ಪರಿ ತೆರಿಗೆ ವಿಧಿಸೋದು ಸರೀನಾ ಎಂಬುದು ಮಹಿಳೆಯರ ಪ್ರಶ್ನೆ. ಇಂದು ಮಹಿಳೆಯರು ಹಲವು ರೀತಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿರುವುದಕ್ಕೆ ಕಾರಣ ಋತುಮತಿಯಾಗಿರುವ ಸಮಯದಲ್ಲಿ ಸರಿಯಾಗಿ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು ಎಂಬುದು ಸಾಬೀತಾಗಿದೆ. ಹೀಗಿರುವಾಗ ಸ್ವಚ್ಛತೆಗೆ ಅತ್ಯಂತ ಅಗತ್ಯ ವಸ್ತುವಾದ ಸ್ಯಾನಿಟರಿ ಪ್ಯಾಡ್ ಮೇಲೆ ತೆರಿಗೆ ಹೇರುವುದರಿಂದ ಬಡ ಮಹಿಳೆಯರು ಇವುಗಳನ್ನು ಕೊಳ್ಳುವುದಕ್ಕೆ ಹಿಂದೆ, ಮುಂದೆ ನೋಡುವುದಿಲ್ಲವೇ? ಸರ್ಕಾರ ಇವುಗಳನ್ನು ತೆರಿಗೆ ಮುಕ್ತಗೊಳಿಸಬೇಕು ಎಂಬುದು ಮಹಿಳೆಯರ ಒಕ್ಕೊರಲ ಧ್ವನಿ

ಪೂಜೆ ದುಬಾರಿಯಲ್ಲ!

ಪೂಜೆ ದುಬಾರಿಯಲ್ಲ!

ಒಂದು ಸಂತಸದ ವಿಷಯವೆಂದರೆ, ಪೂಜಾ ಸಾಮಗ್ರಿಯಾಗಿ ಬಳಸುವ ರುದ್ರಾಕ್ಷಿ, ಪಾದುಕೆ, ಪಂಚಾಮೃತ, ತುಳಸಿ ಮಾಲೆ, ಪವಿತ್ರ ದಾರ ಹಾಗೂ ವಿಭೂತಿಯಂತಹ ಪೂಜಾ ಸಾಮಗ್ರಿಗಳು ಜಿಎಸ್ ಟಿ ವ್ಯವಸ್ಥೆಯಿಂದ ಹೊರಗುಳಿಯಲಿವೆ. ಶ್ರೀಗಂಧದ ತಿಲಕ, ಬ್ರಾಂಡ್ ಇಲ್ಲದ ಜೇನುತುಪ್ಪ, ದೀಪದ ಬತ್ತಿಗೆ ರಿಯಾಯಿತಿ ದೊರೆಯಲಿದೆ.

English summary
The central government of India's decision to impose 12% tax under GST (Goods and Service) bill on sanitary napkins which are essential for the women during menstruation becomes subject to debate now. All women opposing the decision. The new tax system will be applicable from July 1st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X