ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಬದಲು ಹಳ್ಳಿಗಳಿಗೆ ಹೋಗಿ: ಕಾರ್ಯಕರ್ತೆಯರಿಗೆ ತಸ್ಲೀಮಾ ಸಲಹೆ

|
Google Oneindia Kannada News

ನವದೆಹಲಿ, ನವೆಂಬರ್ 16: ಶಬರಿಮಲೆ ದೇವಸ್ಥಾನದೊಳಗೆ ಪ್ರವೇಶಿಸಲು ಹಠ ಮಾಡುತ್ತಿರುವ ಮಹಿಳಾ ಕಾರ್ಯಕರ್ತರನ್ನು ಬಾಂಗ್ಲಾದೇಶದ ಲೇಖಕಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ತಸ್ಲೀಮಾ ನಸ್ರೀನ್ ಪ್ರಶ್ನಿಸಿದ್ದಾರೆ.

ಅದೇನು ವಿಮಾನ ನಿಲ್ದಾಣನೋ, ದೇವಾಲಯವೋ: ಮುಗಿಲು ಮುಟ್ಟಿದ ಅಯ್ಯಪ್ಪನ ಭಜನೆ ಅದೇನು ವಿಮಾನ ನಿಲ್ದಾಣನೋ, ದೇವಾಲಯವೋ: ಮುಗಿಲು ಮುಟ್ಟಿದ ಅಯ್ಯಪ್ಪನ ಭಜನೆ

ಮಹಿಳಾ ಕಾರ್ಯಕರ್ತರು ಅದರ ಬದಲು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದ್ದಾರೆ.

ಅಯ್ಯಪ್ಪನ ನೋಡದೆ ಹಿಂದಿರುಗುವುದಿಲ್ಲ : ತೃಪ್ತಿ ದೇಸಾಯಿ ಚಾಲೆಂಜ್ಅಯ್ಯಪ್ಪನ ನೋಡದೆ ಹಿಂದಿರುಗುವುದಿಲ್ಲ : ತೃಪ್ತಿ ದೇಸಾಯಿ ಚಾಲೆಂಜ್

'ಶಬರಿಮಲೆಗೆ ಪ್ರವೇಶಿಸಲು ಮಹಿಳಾ ಕಾರ್ಯಕರ್ತೆಯರು ಯಾಕೆ ಅಷ್ಟೊಂದು ಉತ್ಸುಕರಾಗಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ.

do not understand women activists are eager to enter Sabarimala taslima nasreen

ಅದರ ಬದಲು ಅವರು ಮಹಿಳೆಯರು ಕೌಟುಂಬಿಕ ಹಿಂಸೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಆರೋಗ್ಯ-ಸಮಸ್ಯೆ ಮತ್ತು ಉದ್ಯೋಗ ಪಡೆಯುವ ಸ್ವಾತಂತ್ರ್ಯ ಇಲ್ಲದಿರುವುದು ಅಥವಾ ಸಮಾನ ವೇತನ ಸಿಗದಿರುವುದು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಹಳ್ಳಿಗಳಿಗೆ ಪ್ರವೇಶಿಸಲಿ' ಎಂದು ಸಲಹೆ ನೀಡಿದ್ದಾರೆ.

ಶಬರಿಮಲೆ: ಮಹಿಳೆಯರಿಗೆ ಪ್ರತ್ಯೇಕ ದಿನದ ವ್ಯವಸ್ಥೆ ಮಾಡಲು ಕೇರಳ ಚಿಂತನೆಶಬರಿಮಲೆ: ಮಹಿಳೆಯರಿಗೆ ಪ್ರತ್ಯೇಕ ದಿನದ ವ್ಯವಸ್ಥೆ ಮಾಡಲು ಕೇರಳ ಚಿಂತನೆ

ಶಬರಿಮಲೆ ದೇವಸ್ಥಾನದೊಳಗೆ ಪ್ರವೇಶ ಮಾಡುವುದಾಗಿ ಮಹಿಳಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಸೇರಿದಂತೆ ಅನೇಕರು ಪಟ್ಟು ಹಿಡಿದಿರುವುದರಿಂದ ಕೇರಳದಲ್ಲಿ ಉದ್ವಿಗ್ನತೆ ಭುಗಿಲೆದ್ದ ಹಿನ್ನೆಲೆಯಲ್ಲಿ ತಸ್ಲೀಮಾ ನಸ್ರೀನ್ ಟ್ವಿಟ್ಟರ್‌ನಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ.

ಶಬರಿಮಲೆಯಲ್ಲಿ ಶುಕ್ರವಾರ ದೇವಸ್ಥಾನದ ಬಾಗಿಲು ತೆರೆದಿದ್ದು, ಇನ್ನು ಎರಡು ತಿಂಗಳವರೆಗೂ ಭಕ್ತರ ಪ್ರವೇಶಕ್ಕೆ ಮುಕ್ತವಾಗಿರಲಿದೆ. ಆದರೆ, ಸುಪ್ರೀಂಕೋರ್ಟ್ ಆದೇಶದಂತೆ ಅಲ್ಲಿ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ನೀಡುವ ವಿಚಾರದಲ್ಲಿ ಭಾರಿ ವಿವಾದ ಸೃಷ್ಟಿಯಾಗಿದೆ.

English summary
I do not understand why women activists are so eager to enter Sabarimala, Bangladeshi writer Taslima Nasreen questioned on Sabarimala row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X