ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: ಜಿಎಸ್‌ಟಿ ಮರುಪಾವತಿ ಬಗ್ಗೆ ಈ ಸಂದೇಶ ನಂಬಬೇಡಿ

|
Google Oneindia Kannada News

ನವ ದೆಹಲಿ, ಮೇ 5: ಕೊರೊನಾ ವೈರಸ್‌ ಲಾಕ್‌ಡೌನ್ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಅದೇ ರೀತಿ ಜಿಎಸ್‌ಟಿ ಹಣವನ್ನು ಸರ್ಕಾರ ಮರುಪಾವತಿ ಮಾಡುವ ಬಗ್ಗೆ ಸಂದೇಶವೊಂದು ಕೆಲವು ದಿನಗಳಿಂದ ಹರಿದಾಡುತ್ತಿದೆ.

''ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಈ ವೇಳೆ ಕೇಂದ್ರ ಸರ್ಕಾರ ಜಿಎಸ್‌ಟಿ ಹಣವನ್ನ ಮರುಪಾವತಿ ಮಾಡಲಿದೆ'' ಎನ್ನುವ ಸಂದೇಶ ಇದಾಗಿದೆ. ಅದರ ಕೆಳಗೆ ಒಂದು ಆನ್‌ಲೈನ್ ಲಿಂಕ್ ನೀಡಿದ್ದು, ಆ ಲಿಂಕ್ ಕ್ಲಿಕ್ ಮಾಡಿದರೆ, ಜಿಎಸ್‌ಟಿ ಮರುಪಾವತಿ ಹಣ ಸಿಗಲಿದೆ ಎಂದು ತಿಳಿಸಲಾಗಿತ್ತು.

ಪಡಿತರ ಕಾರ್ಡ್ ಹೊಂದಿದವರಿಗೆ 50 ಸಾವಿರ ಘೋಷಣೆ ನಿಜಾನ?ಪಡಿತರ ಕಾರ್ಡ್ ಹೊಂದಿದವರಿಗೆ 50 ಸಾವಿರ ಘೋಷಣೆ ನಿಜಾನ?

ಆದರೆ, ಜಿಎಸ್‌ಟಿ ಹಣ ಮರುಪಾವತಿ ಬಗ್ಗೆ ಈ ಸಂದೇಶ ಸುಳ್ಳು ಸುದ್ದಿಯಾಗಿದೆ. ಈ ಲಿಂಕ್‌ ಫೇಕ್‌ ಆಗಿದ್ದು, ಅದನ್ನು ಯಾರೂ ಸಹ ಲಿಂಕ್ ಮಾಡದೆ ಇರಲು ಸರ್ಕಾರ ತಿಳಿಸಿದೆ. ಈ ಸಂದೇಶ ಬಗ್ಗೆ ಸೆಂಟ್ರಲ್ ಬೋರ್ಡ್ ಆಫ್ ಇನ್‌ಡೈರೆಕ್ಟ್ ಟ್ಯಾಕ್ಸ್ ಅಂಡ್ ಕಸ್ಟಮ್ಸ್ (ಸಿಬಿಐಸಿ) ಸ್ಪಷ್ಟನೆ ನೀಡಿದೆ.

ಸೆಂಟ್ರಲ್ ಬೋರ್ಡ್ ಆಫ್ ಇನ್‌ಡೈರೆಕ್ಟ್ ಟ್ಯಾಕ್ಸ್ ಅಂಡ್ ಕಸ್ಟಮ್ಸ್ ಈ ಸಂದೇಶ ಸುಳ್ಳು ಎಂದು ತಿಳಿಸಿದೆ. "ತೆರಿಗೆ ಪಾವತಿದಾರರು ಇಂತಹ ಸಂದೇಶಗಳ ಬಗ್ಗೆ ಹುಷಾರಾಗಿರು ಎಂದಿದೆ. ದಯವಿಟ್ಟು ಯಾವುದೇ ನಕಲಿ ಲಿಂಕ್‌ನಲ್ಲಿ ಕ್ಲಿಕ್ ಮಾಡಬೇಡಿ. ಇವು ಫೇಕ್ ಸಂದೇಶಗಳು ಮತ್ತು ಅವುಗಳನ್ನು ಸಿಬಿಐಸಿ ಅಥವಾ ಇನ್ಫೋಸಿಸ್ ಜಿಎಸ್‌ಟಿಎನ್ ಕಳುಹಿಸುವುದಿಲ್ಲ. ಜಿಎಸ್‌ಟಿಗೆ ಸಂಬಂಧಿಸಿದ ಆನ್‌ಲೈನ್ ಫೈಲಿಂಗ್‌ಗಳಿಗಾಗಿ get.gov ಗೆ ಭೇಟಿ ನೀಡಿ ಎಂದು ಸೂಚನೆ ನೀಡಿದೆ.

English summary
There is a message that claims that the government has started online processing GST refund. The Central Board of Indirect Taxes and Customs (CBIC) has rubbished this message.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X