ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NEET: ಸಂಸತ್ ಆವರಣದಲ್ಲಿ ಡಿಎಂಕೆ ಸಂಸದರ ಪ್ರತಿಭಟನೆ

|
Google Oneindia Kannada News

ನವದೆಹಲಿ, ಸೆ. 14: ವೈದ್ಯಕೀಯ ವೃತ್ತಿಪರ ಕೋರ್ಸ್ ಪ್ರವೇಶಕ್ಕಾಗಿ ನಡೆಸಲಾಗುವ National Eligibility-cum-Entrance Test(NEET)ವಿರುದ್ಧ ನಿಂತಿದ್ದ ತಮಿಳುನಾಡು ಸಿಡಿದೆದ್ದಿದೆ. ದೇಶದಲ್ಲಿ 15 ಲಕ್ಷಕ್ಕೂ ಅಧಿಕ ಮಂದಿ ಆಕಾಂಕ್ಷಿಗಳು ಪರೀಕ್ಷೆ ಬರೆಯುವ ವೇಳೆಗೆ ತಮಿಳುನಾಡಿನಲ್ಲಿ ಸರಣಿ ಆತ್ಮಹತ್ಯೆ ಕಾಡತೊಡಗಿದೆ.

ಹೀಗಾಗಿ, ನೀಟ್ ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇದೇ ವೇಳೆ ಸಂಸತ್ತಿನಲ್ಲಿ ಇಂದು ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಸಂಸದರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

 ತಮಿಳುನಾಡು: ಮೆಡಿಕಲ್ ಕೋರ್ಸ್ ಆಕಾಂಕ್ಷಿಗಳ ಆತ್ಮಹತ್ಯೆ ತಮಿಳುನಾಡು: ಮೆಡಿಕಲ್ ಕೋರ್ಸ್ ಆಕಾಂಕ್ಷಿಗಳ ಆತ್ಮಹತ್ಯೆ

ಡಿಎಂಕೆ ಸಂಸದರಾದ ಟಿಆರ್ ಬಾಲು, ತಿರುಚ್ಚಿ ಶಿವ, ಕನಿಮೊಳಿ ಅವರು ಪ್ರತಿಭಟನೆ ನಡೆಸಿದರು. ನಂತರ ಮಾತನಾಡಿದ ಸಂಸದ ಶಿವ, ''ಬಡವರು, ಗ್ರಾಮೀಣ ಭಾಗದವರಿಗೆ ನೀಟ್ ಮಾರಕವಾಗಿ ಪರಿಣಮಿಸಿದೆ. ಶಾಲೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದವರು ನೀಟ್ ಪರೀಕ್ಷೆಯಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ಖಾಸಗಿ ಕೋಚಿಂಗ್ ಸಿಗದ ಕಾರಣ, ಪರೀಕ್ಷೆಯಲ್ಲಿ ಫೇಲ್ ಆಗುವ ಭೀತಿಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ'' ಎಂದು ಹೇಳಿದರು.

Dmk Mps Protest Against Neet At Parliament Premises

2017ರಲ್ಲಿ ಅರಿಯಲೂರಿನ ಮೆಡಿಕಲ್ ಕೋರ್ಸ್ ಆಕಾಂಕ್ಷಿ ಅನಿತಾ ಆತ್ಮಹತ್ಯೆ ಪ್ರಕರಣದ ನಂತರ ತಮಿಳುನಾಡಿನಲ್ಲಿ ನೀಟ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕೊವಿಡ್ 19 ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದಂತೆ ಕೋರ್ಟ್ ಮೆಟ್ಟಿಲೇರಿದರೂ ಫಲ ಸಿಗಲಿಲ್ಲ. ಡಿಎಂಕೆ ಅಲ್ಲದೆ ಎಐಎಡಿಎಂಕೆ ಕೂಡಾ ಕೇಂದ್ರ ಸರ್ಕಾರದ ವಿರುದ್ಧ ದನಿಯೆತ್ತಿತ್ತು.

ಕೊರೊನಾ ವೈರಸ್ ಸೋಂಕು ನಿಯಂತ್ರಣ: ಆರೋಗ್ಯ ಸಚಿವಕೊರೊನಾ ವೈರಸ್ ಸೋಂಕು ನಿಯಂತ್ರಣ: ಆರೋಗ್ಯ ಸಚಿವ

Recommended Video

India Nepal : ನೇಪಾಳ ಹೊಸ ವರಸೆ ಶುರು | Oneindia Kannada

ಧರ್ಮಪುರಿಯ ಇಲಕ್ಕಿಯಂಪಟ್ಟಿ ಎಂಬ ಊರಿನ 20 ವರ್ಷದ ಯುವಕ ಎಂ ಆದಿತ್ಯ, ನಾಮಕ್ಕಲ್ ಜಿಲ್ಲೆ ತಿರುಚೆಂಗೊಡೆಯ 21ವರ್ಷದ ಮೋತಿಲಾಲ್ ಹಾಗೂ ಮದುರೈನ ಯುವತಿ ಜ್ಯೋತಿಶ್ರೀ ಎಲ್ಲರೂ ಪರೀಕ್ಷೆ ಭಯ ಹಾಗೂ ವೈಫಲ್ಯಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

English summary
Ahead of the commencement of the monsoon session of parliament today(Sept 14). Dravida Munnetra Kazhagam (DMK) MPs staged protest against NEET in Parliament premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X