ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹೋದರನ ಹೇಳಿಕೆ ಆಧರಿಸಿ ಜೈಲಿನಲ್ಲಿ ಡಿಕೆ ಶಿವಕುಮಾರ್ ವಿಚಾರಣೆ

|
Google Oneindia Kannada News

Recommended Video

ಡಿಕೆ ಸುರೇಶ್ ಅಣ್ಣನ ಬಗ್ಗೆ ಹೇಳಿದ್ದೇನು ಗೊತ್ತಾ..? | DK Shivakumar

ನವದೆಹಲಿ, ಅಕ್ಟೋಬರ್ 5: ಡಿಕೆ ಸುರೇಶ್ ಹೇಳಿಕೆ ಆಧರಿಸಿ ಇಂದು ಜಾರಿ ನಿರ್ದೇಶನಾಲಯವು ಡಿಕೆ ಶಿವಕುಮಾರ್ ಅವರ ವಿಚಾರಣೆ ನಡೆಸಲಿದೆ.

ಶುಕ್ರವಾರವಷ್ಟೇ ಡಿಕೆ ಸುರೇಶ್ ಹಾಗೂ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇ.ಡಿ. ಸುಮಾರು ನಾಲ್ಕೈದು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಇಂದು ಕೂಡ ಸುರೇಶ್ ಹೇಳಿಕೆ ಆಧರಿಸಿ ಡಿಕೆಶಿಯ ವಿಚಾರಣೆ ನಡೆಸಲಿದ್ದಾರೆ.

ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್​ ಅವರಿಗೆ ಸೇರಿದ ಫ್ಲಾಟ್​ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ಡಿಕೆಶಿ ಹಾಗೂ ಆಪ್ತರ ಮನೆಗಳಲ್ಲಿ ಐಟಿ ಅಧಿಕಾರಿಗಳು 8.59 ಕೋಟಿ ಹಣ ಜಪ್ತಿ ಮಾಡಿದ್ದರು. ಇಡಿ ಸಮನ್ಸ್ ರದ್ದು ಕೋರಿ ಸಚಿವ ಡಿಕೆಶಿ ಹಾಗೂ ಆಪ್ತರು ಅರ್ಜಿ ಸಲ್ಲಿಸಿದ್ದರು. ಹಣದ ಮೂಲದ ಬಗ್ಗೆ ವಿವರಣೆ ನೀಡುವಂತೆ ಡಿಕೆಶಿ ಮತ್ತು ಆಪ್ತರಿಗೆ ಇಡಿ ಸಮನ್ಸ್ ನೀಡಿತ್ತು.

ಡಿಕೆಶಿಗೆ ಮತ್ತೆ ಆಘಾತ: ನ್ಯಾಯಾಂಗ ಬಂಧನದ ಅವಧಿ ಅ.15 ರವರೆಗೆ ವಿಸ್ತರಣೆಡಿಕೆಶಿಗೆ ಮತ್ತೆ ಆಘಾತ: ನ್ಯಾಯಾಂಗ ಬಂಧನದ ಅವಧಿ ಅ.15 ರವರೆಗೆ ವಿಸ್ತರಣೆ

ಈ ಮಧ್ಯೆ ಡಿಕೆಶಿ ಫ್ಲಾಟ್​​ನಲ್ಲಿ ಸಿಕ್ಕಿದ ತನ್ನದೆಂದು ಒಪ್ಪಿಕೊಂಡ ಮತ್ತೋರ್ವ ಪ್ರಮುಖ ಆರೋಪಿ ಸುನೀಲ್​ ಶರ್ಮಾ ವಿಚಾರಣೆಯೂ ನಡೆದಿದೆ. ಇಡಿ ಅಧಿಕಾರಿಗಳು ಸುನೀಲ್​​ ಶರ್ಮಾ ಅವರಿಗೆ 8.59 ಕೋಟಿ ರೂ. ಹಣದ ಮೂಲ ಯಾವುದು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಶರತ್​​ ಶರ್ಮಾ, ತನ್ನ ಟ್ರಾವಲ್ಸ್​ ವ್ಯವಹಾರದಿಂದ ಗಳಿಸಿದ ಹಣ ಎಂದು ಸಮರ್ಥಿಸಿಕೊಂಡಿದ್ದಾರೆ.

ದೆಹಲಿ ನಿವಾಸದಲ್ಲಿ ಪತ್ತೆಯಾದ ಅಕ್ರಮ ಹಣ ಪ್ರಕರಣ

ದೆಹಲಿ ನಿವಾಸದಲ್ಲಿ ಪತ್ತೆಯಾದ ಅಕ್ರಮ ಹಣ ಪ್ರಕರಣ

ದೆಹಲಿ ನಿವಾಸದಲ್ಲಿ ಪತ್ತೆಯಾದ ಅಕ್ರಮ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್​ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಶನಿವಾರ ಕೂಡ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಟರಾಜ್ ವಾದ: ಡಿಕೆಶಿ ವಿಚಾರಣೆ ಕುರಿತ ಕೆಲವು ಇಂಟರೆಸ್ಟಿಂಗ್ ಸಂಗತಿಗಳುನಟರಾಜ್ ವಾದ: ಡಿಕೆಶಿ ವಿಚಾರಣೆ ಕುರಿತ ಕೆಲವು ಇಂಟರೆಸ್ಟಿಂಗ್ ಸಂಗತಿಗಳು

ತಿಹಾರ್ ಜೈಲಿನಲ್ಲಿ ಶುಕ್ರವಾರವೂ ನಡೆದಿತ್ತು ವಿಚಾರಣೆ

ತಿಹಾರ್ ಜೈಲಿನಲ್ಲಿ ಶುಕ್ರವಾರವೂ ನಡೆದಿತ್ತು ವಿಚಾರಣೆ

ತಿಹಾರ್ ಜೈಲಿನಲ್ಲೇ ಡಿಕೆಶಿ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಶುಕ್ರವಾರ(ಅ.4) ಮಗಳು ಐಶ್ವರ್ಯ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಆಧರಿಸಿ ಡಿಕೆಶಿ ವಿಚಾರಣೆ ಮಾಡಲಾಗಿದೆ. ಇಂದು ಡಿ‌‌.ಕೆ. ಸುರೇಶ್ ನೀಡಿರುವ ಹೇಳಿಕೆಗಳನ್ನು ಆಧರಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಜೈಲಿನಲ್ಲಿ ವಿಚಾರಣೆ ನಡೆಸಲು ಕೋರ್ಟಿನಿಂದ ಅನುಮತಿ

ಜೈಲಿನಲ್ಲಿ ವಿಚಾರಣೆ ನಡೆಸಲು ಕೋರ್ಟಿನಿಂದ ಅನುಮತಿ

ಜೈಲಿನಲ್ಲಿ ವಿಚಾರಣೆ ನಡೆಸಲು ಅಧಿಕಾರಿಗಳು ಕೋರ್ಟ್ ಅನುಮತಿ ಪಡೆದಿದ್ದಾರೆ. ಅ. 1ರಂದು ಡಿಕೆಶಿ ನ್ಯಾಯಾಂಗ ಬಂಧನ ಅವಧಿ ಮುಗಿದ ವೇಳೆ ಮುಂದಿನ ನ್ಯಾಯಾಂಗ ಬಂಧನದ ಅವಧಿಯಲ್ಲಿ ಡಿಕೆಶಿಯನ್ನು ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅ. 4 ಮತ್ತು 5ರಂದು ವಿಚಾರಣೆ ನಡೆಸಲು ಅನುಮತಿ ನೀಡಿತ್ತು. ಕೋರ್ಟ್ ಸೂಚನೆಯಂತೆ ನಿನ್ನೆಯಿಂದ ಅಧಿಕಾರಿಗಳು ಜೈಲಿನಲ್ಲೇ ಡಿಕೆಶಿ ವಿಚಾರಣೆ ಮಾಡುತ್ತಿದ್ದಾರೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ವಿಚಾರಣೆ ನಡೆಯಲಿದೆ.

ಮತ್ತೊಬ್ಬ ಆರೋಪಿ ಸುಲಿನ್ ಶರ್ಮಾ

ಮತ್ತೊಬ್ಬ ಆರೋಪಿ ಸುಲಿನ್ ಶರ್ಮಾ

ಡಿಕೆಶಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಮತ್ತೊಬ್ಬ ಆರೋಪಿಯಾಗಿರುವ ಸುನೀಲ್ ಶರ್ಮಾ ಅವರನ್ನು ಇಡಿ ಅಧಿಕಾರಿಗಳ ಇಂದು ವಿಚಾರಣೆ ನಡೆಸಲಿದ್ದಾರೆ. ಶುಕ್ರವಾರ(ಅ.4) ಸುನೀಲ್ ಶರ್ಮಾ ಅವರ ವಿಚಾರಣೆ ನಡೆಸಲಾಗಿತ್ತು. ಇಂದು ಬೆಳಿಗ್ಗೆ 11 ಗಂಟೆಗೆ ಮತ್ತೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಲಾಗಿದೆ.

English summary
Based on DK Suresh's statement today, the Directorate of Enforcement will conduct an inquiry into DK Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X