ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದಾನಿ ಸಂಸ್ಥೆಗೂ ನಿಮ್ಗೂ ಏನ್ ಸಂಬಂಧ? ಐಶ್ವರ್ಯಾಗೆ 'ಇಡಿ' ಹಿಟ್

|
Google Oneindia Kannada News

Recommended Video

DK Shivakumar : ಅದಾನಿ ಸಂಸ್ಥೆಗೂ ನಿಮ್ಗೂ ಏನ್ ಸಂಬಂಧ? ಐಶ್ವರ್ಯಾಗೆ 'ಇಡಿ' ಪ್ರಶ್ನೆ | FILMIBEAT KANANDA

ನವದೆಹಲಿ, ಸೆ. 12: ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ, ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ವಿಚಾರಣೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದುವರೆಸಿದ್ದಾರೆ. ಈ ನಡುವೆ ಇಂದಿನಿಂದ ಡಿಕೆಶಿ ಪುತ್ರಿ ಐಶ್ವರ್ಯಾ ವಿಚಾರಣೆಯೂ ಆರಂಭಗೊಂಡಿದೆ. ಐಶ್ವರ್ಯಾ ಅವರು ವಿವಿಧ ಸಂಸ್ಥೆಗಳಿಗೆ ನೀಡಿರುವ ಸಾಲ, ಹೂಡಿಕೆ ವಿವರಗಳ ಬಗ್ಗೆ ಮುಖ್ಯವಾಗಿ ಇಡಿ ಅಧಿಕಾರಿಗಳು ಪ್ರಶ್ನಿಸುವ ಸಾಧ್ಯತೆ ಕಂಡು ಬಂದಿದೆ.

ಡಿಕೆಶಿ ಪತ್ನಿ ಉಷಾ ಹಾಗೂ ಪುತ್ರಿ ಐಶ್ವರ್ಯಾ ದೆಹಲಿಯಲ್ಲಿದ್ದು, ಇಂದು ಬೆಳಗ್ಗೆ ಲೋಕನಾಯಕ ಭವನದಲ್ಲಿರುವ 'ಇಡಿ' ಕಚೇರಿಗೆ ಭೇಟಿ ನೀಡಿದ್ದಾರೆ. ಇಡಿ ವಿಚಾರಣೆ ವೇಳೆ ಪ್ರಮುಖವಾಗಿ ಡಿಕೆಶಿ ಕುಟುಂಬದ ಆಸ್ತಿ ವಿವರ, ಐಶ್ವರ್ಯಾ ಹಾಗೂ ಉಷಾ ಹೆಸರಿನಲ್ಲಿರುವ ಆಸ್ತಿ ಹಾಗೂ ಸಾಲ ವಿವರಗಳನ್ನು ಅಧಿಕಾರಿಗಳು ಪಡೆಯಲಿದ್ದಾರೆ.

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಘೋಷಿತ ಆಸ್ತಿ ಎಷ್ಟು?ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಘೋಷಿತ ಆಸ್ತಿ ಎಷ್ಟು?

ಕನಕಪುರ ತಾಲೂಕಿನ ದೊಡ್ಡ ಅಲಹಳ್ಳಿ ಗ್ರಾಮದ ಕೆಂಪೇಗೌಡ, ಗೌರಮ್ಮ ದಂಪತಿಯ ಮಗ ಡಿಕೆ ಶಿವಕುಮಾರ್ ಉದ್ಯಮಿ, ಸಮಾಜ ಸೇವಕ, ಶಿಕ್ಷಣ ಸಂಸ್ಥೆಗಳ ಪಾಲಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಪುತ್ರಿ 23 ವರ್ಷ ಐಶ್ವರ್ಯಾ ಕೂಡಾ ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಹಣ ತೊಡಗಿಸಿದ್ದಾರೆ. ಇದರಿಂದ ಸಕತ್ ಆಗಿ ರಿಟರ್ನ್ಸ್ ಬಂದಿದ್ದು, ಐಶ್ವರ್ಯಾರನ್ನು ಕೋಟ್ಯಧಿಪತಿಯನ್ನಾಗಿಸಿದೆ. ಇದಲ್ಲದೆ, ಅಪ್ಪನ ಜೊತೆಯಲ್ಲಿ 2017ರಲ್ಲಿ ಸಿಂಗಪುರ ಪ್ರವಾಸಕ್ಕೆ ತೆರಳಿದ್ದ ಐಶ್ವರ್ಯಾ, ಅಲ್ಲಿನ ಕೆಲವು ಸಂಸ್ಥೆಗಳ ಜೊತೆ ಸಭೆ ನಡೆಸಿ, ವಿದೇಶದಲ್ಲೂ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿಯಿದೆ.

ಅದಾನಿ ಸಂಸ್ಥೆಯಲ್ಲಿ ಹೂಡಿಕೆ

ಅದಾನಿ ಸಂಸ್ಥೆಯಲ್ಲಿ ಹೂಡಿಕೆ

ಐಶ್ವರ್ಯ ಅಕೌಂಟಿನಿಂದ ಕೆಫೆ ಕಾಫಿ ಡೇಗೆ ಮತ್ತು ಕೆಫೆ ಕಾಫಿ ಡೇಯಿಂದ ಐಶ್ವರ್ಯ ಅಕೌಂಟಿಗೆ 20 ಕೋಟಿ ರೂಪಾಯಿ ವರ್ಗಾವಣೆಯಾಗಿದೆ.

ಇದಲ್ಲದೆ ಕೋಲಾರದಲ್ಲಿರುವ ಅದಾನಿ ಗ್ರೀನ್ ಎನರ್ಜಿ ಪ್ರೈ ಲಿಮಿಟೆಡ್ ನಲ್ಲಿ ಐಶ್ವರ್ಯಾ ಕೋಟ್ಯಂತರ ರುಪಾಯಿ ಹೂಡಿಕೆ ಮಾಡಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಎರಡು ಕಂಪನಿಗಳ ಜೊತೆ ಐಶ್ವರ್ಯಾ ನಡೆಸಿರುವ ಆರ್ಥಿಕ ವ್ಯವಹಾರವನ್ನು ಪ್ರಶ್ನಿಸಿ, ಅಗತ್ಯ ದಾಖಲೆ ನೀಡುವಂತೆ ಸೂಚಿಸಲಿದ್ದಾರೆ. ಇಡಿ ಅಧಿಕಾರಿಗಳ ಒಂದು ತಂಡ ಕೋಲಾರದ ಸೌರಶಕ್ತಿ ಘಟಕಕ್ಕೆ ಭೇಟಿ ನೀಡಲು ಮುಂದಾಗಿದೆ.

ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ ಬಗ್ಗೆ ಪ್ರಶ್ನೆ

ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ ಬಗ್ಗೆ ಪ್ರಶ್ನೆ

ಬೆಂಗಳೂರಿನ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ ಟ್ರಸ್ಟಿಯಾಗಿರುವ ಐಶ್ವರ್ಯಾ ಸೋಲ್ ಆಂಡ್ ಸೇಲ್ಸ್​ನಲ್ಲಿ 78 ಕೋಟಿ ರೂ ಹೂಡಿಕೆ ಕಂಪನಿಯ ಶೇ50ರಷ್ಟು ಷೇರು ಖರೀದಿ ಮಾಡಿರುವ ಬಗ್ಗೆ ಇಡಿ ಅಧಿಕಾರಿಗಳು ಪ್ರಶ್ನಿಸಲು ಮುಂದಾಗಿದ್ದಾರೆ. ಈ ಹಿಂದೆ ಐಟಿ ದಾಳಿ ನಡೆದಾಗ ಸಂಗ್ರಹವಾದ ದಾಖಲೆಯಲ್ಲೂ ಈ ಬಗ್ಗೆ ಉಲ್ಲೇಖವಿದೆ. 2013ರಲ್ಲಿ 1.2 ಕೋಟಿ ರು ಆಸ್ತಿ ಹೊಂದಿದ್ದ ಐಶ್ವರ್ಯಾ 2018ರಲ್ಲಿ 112 ಪ್ಲಸ್ ಕೋಟಿ ರು ಗಳಿಸಿದ್ದು ಹೇಗೆ? ಎಂಬ ಕುತೂಹಲಕ್ಕೆ ಉತ್ತರ ಸಿಗುವ ಸಾಧ್ಯತೆಯಿದೆ.

ಸ್ಥಿರಾಸ್ತಿ ಬಗ್ಗೆ ಕೂಡಾ ಪ್ರಶ್ನೆ

ಸ್ಥಿರಾಸ್ತಿ ಬಗ್ಗೆ ಕೂಡಾ ಪ್ರಶ್ನೆ

ಡಿಕೆ ಶಿವಕುಮಾರ್ 191 ಕೋಟಿ ರು ಸ್ತಿರಾಸ್ತಿ ಮೌಲ್ಯ ಹೊಂದಿದ್ದು ಇದರಲ್ಲಿ ಪತ್ನಿ ಹಾಗೂ ಮಗಳು ಐಶ್ವರ್ಯಾ ಹೆಸರಿನಲ್ಲಿ ಕೆಲವೊಂದು ಜಂಟಿ ಅಧೀನ ಹೊಂದಿದ್ದಾರೆ. ಜೊತೆಗೆ ಪಿತ್ರಾರ್ಜಿತ ಆಸ್ತಿಯಲ್ಲೂ ಐಶ್ವರ್ಯಾಗೆ ಪಾಲು ಸಿಗಲಿದೆ. ಹೀಗಾಗಿ, ಡಿಕೆಶಿ ಅವರ ಆಸ್ತಿ ವಿವರಗಳ ಜೊತೆ ತಾಳೆ ಹಾಕಿ ಐಶ್ವರ್ಯಾ ಅವರ ಹೆಸರಿನಲ್ಲಿರುವ ವಾಣಿಜ್ಯ ಕಟ್ಟಡ, ಮನೆ, ಫ್ಲಾಟ್, ತೋಟ ಎಲ್ಲದರ ವಿವರ ಪಡೆಯಲಿದ್ದಾರೆ.

ಅಜ್ಜಿ ಕೊಟ್ಟ ಗಿಫ್ಟ್ ಮುಳುವಾಗಲಿದೆಯೇ?

ಅಜ್ಜಿ ಕೊಟ್ಟ ಗಿಫ್ಟ್ ಮುಳುವಾಗಲಿದೆಯೇ?

* ಕನಕಪುರ ಹಾಗೂ ಬೆಂಗಳೂರಿನಲ್ಲಿ ಅಜ್ಜಿಯ ಹೆಸರಿನಲ್ಲಿದ್ದ 3 ಎಕರೆ ಜಾಗ ಐಶ್ವರ್ಯಾಗೆ ಗಿಫ್ಟ್ ಆಗಿ ಸಿಕ್ಕಿದ್ದು ಇದಕ್ಕೆ ಗಿಫ್ಟ್ ಡೀಡ್ ಇದೆ.

ಐಶ್ವರ್ಯಾ ಅವರ ಅಜ್ಜಿ ಗೌರಮ್ಮ 2001ಲ್ಲಿ ಐಶ್ವರ್ಯಾಗೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ತಮ್ಮ ಹೆಸರಿನ 3 ಎಕರೆ ಜಮೀನನ್ನು ಗಿಫ್ಟ್​ ಡೀಡ್ ಮಾಡಿಕೊಟ್ಟಿದ್ದರು 2002ರಲ್ಲಿ ಹೊಸಕೆರೆಹಳ್ಳಿಯಲ್ಲಿ 3 ಎಕರೆ ಜಮೀನಿಗೆ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದರು. ಇದಲ್ಲದೆ 2018ರಲ್ಲಿ ತಮ್ಮ ಅಕೌಂಟ್​ನಿಂದ ಐಶ್ವರ್ಯ ಖಾತೆಗೆ 3 ಕೋಟಿ ರೂಪಾಯಿ ಹಾಕಿದ್ದರು

English summary
Karnataka senior Congress leader D K Shivakumar's daughter Aishwarya arrives in Enforcement Directorate (ED) office to appear before the sleuths for questioning on Thursday in Delhi. sleuths to visit Adani Green Energy Pvt Ltd
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X