ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಹೈಕೋರ್ಟ್‌ನಲ್ಲಿ ಇಂದು ಡಿಕೆಶಿ ತಾಯಿ, ಪತ್ನಿ ಅರ್ಜಿ ವಿಚಾರಣೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 30: ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಅವರ ಅರ್ಜಿ ವಿಚಾರಣೆ ಇಂದು ದೆಹಲಿ ಹೈಕೋರ್ಟ್‌ನಲ್ಲಿ ನಡೆಯಲಿದೆ.

85 ವರ್ಷ ವಯಸ್ಸಿನ ಗೌರಮ್ಮ ವಿಚಾರಣೆಗಾಗಿ ದೆಹಲಿಗೆ ಬರಲು ಸಾಧ್ಯವಿಲ್ಲ. ಸಿಆರ್​ಪಿಎಫ್​ 160 ವಿಧಿ ಪ್ರಕಾರ ಪುರುಷರನ್ನು ಮಾತ್ರ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಸಬೇಕು. ಮಹಿಳೆಯರನ್ನು ಠಾಣೆಯಲ್ಲಿ ವಿಚಾರಣೆ ನಡೆಸುವ ಬಗ್ಗೆ ಕಾನೂನಿನಲ್ಲಿ ಹೇಳಿಲ್ಲ ಎಂದು ಈಗಾಗಲೇ ಒಂದು ಸುತ್ತು ಗೌರಮ್ಮ ಮತ್ತು ಉಷಾ ಪರ ವಕೀಲರು ವಾದ ಮಾಡಿದ್ದಾರೆ.

ಡಿಕೆಶಿ ಕೈಲಿ ಜೆಡಿಎಸ್ ಬಾವುಟ, ಕೆಂಡಾಮಂಡಲವಾದ ಸಿದ್ದರಾಮಯ್ಯಡಿಕೆಶಿ ಕೈಲಿ ಜೆಡಿಎಸ್ ಬಾವುಟ, ಕೆಂಡಾಮಂಡಲವಾದ ಸಿದ್ದರಾಮಯ್ಯ

ಬೆಂಗಳೂರಲ್ಲೇ ವಿಚಾರಣೆ ನಡೆಸುವ ಬಗ್ಗೆ ಇಂದು ಕೂಡ ವಾದ ಪ್ರತಿ-ವಾದ ಮುಂದುವರಿಯಲಿದ್ದು, ಬಳಿಕ ಮಧ್ಯಂತರ ತೀರ್ಪು ಬರುವ ಸಾಧ್ಯತೆಗಳಿವೆ. ಇಡಿ ವಿಚಾರಣೆಗೆ ಹೈಕೋರ್ಟ್ ಬ್ರೇಕ್ ಹಾಕುತ್ತಾ ಅಥವಾ ವಯಸ್ಸಿನ ಕಾರಣಗಳಿಂದ ಬೆಂಗಳೂರಿನಲ್ಲಿಯೇ ವಿಚಾರಣೆಗೆ ನಿರ್ದೇಶನ ಕೊಡುತ್ತಾ ಅನ್ನೋದನ್ನು ಕಾದು ನೋಡಬೇಕು.

ಅಕ್ರಮ ಹಣ ವರ್ಗಾವಣೆ ಜಾಲ ಕುಟುಂಬಕ್ಕೆ ವಿಸ್ತರಣೆ

ಅಕ್ರಮ ಹಣ ವರ್ಗಾವಣೆ ಜಾಲ ಕುಟುಂಬಕ್ಕೆ ವಿಸ್ತರಣೆ

ಡಿ.ಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಜಾಲ ಕುಟುಂಬಕ್ಕೆ ವಿಸ್ತರಣೆ ಆಗಿದೆ. ಈಗಾಗಲೇ ಸಹೋದರ ಡಿ.ಕೆ ಸುರೇಶ್ ಮತ್ತು ಪುತ್ರಿ ಐಶ್ವರ್ಯ ವಿಚಾರಣೆ ನಡೆಸಿರುವ ಇಡಿ ಅಧಿಕಾರಿಗಳು ಈಗ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಮತ್ತು ತಾಯಿ ಗೌರಮ್ಮಗೆ ಎರಡನೇ ಬಾರಿ ಸಮನ್ಸ್ ನೀಡಿದ್ದಾರೆ.

ಬೆಂಗಳೂರಲ್ಲೇ ವಿಚಾರಣೆ ಮಾಡಿ ಎಂದು ಅರ್ಜಿ

ಬೆಂಗಳೂರಲ್ಲೇ ವಿಚಾರಣೆ ಮಾಡಿ ಎಂದು ಅರ್ಜಿ

ಇಡಿ ಸಮನ್ಸ್ ರದ್ದು‌ ಮಾಡಿ ಅಥವಾ ಬೆಂಗಳೂರಿನಲ್ಲಿ ವಿಚಾರಣೆ ಮಾಡಿ ಡಿಕೆಶಿ ತಾಯಿ ಮತ್ತು ಹೆಂಡತಿ ಅರ್ಜಿ ಸಲ್ಲಿಸಿದ್ದಾರೆ.ಗೌರಮ್ಮ ಅವರಿಗೆ 85 ವರ್ಷ ಆಗಿದ್ದು ದೆಹಲಿಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಡಿಕೆಶಿ ಪತ್ನಿ ಉಷಾರನ್ನು ಒಳಗೊಂಡು ಗೌರಮ್ಮರನ್ನು ಬೆಂಗಳೂರಿನಲ್ಲಿ ವಿಚಾರಣೆಗೆ ಒಳಪಡಿಸಲು ಇಡಿಗೆ ಸೂಚಿಸುವಂತೆ ಹೈಕೋರ್ಟಿಗೆ ಮನವಿ ಮಾಡಿದರು.

ಅಕ್ಟೋಬರ್ 17ಕ್ಕೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಲಾಗಿತ್ತು

ಅಕ್ಟೋಬರ್ 17ಕ್ಕೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಲಾಗಿತ್ತು

ಈ ಹಿಂದೆ ಅಕ್ಟೋಬರ್ 17 ಕ್ಕೆ ವಿಚಾರಣೆ ಬರುವಂತೆ ಡಿಕೆ ತಾಯಿ ಮತ್ತು ಮಡದಿಗೆ ಇಡಿಯಿಂದ ಸಮನ್ಸ್ ನೀಡಲಾಗಿತ್ತು. ಆದರೆ ಸಮನ್ಸ್ ರದ್ದು ಮಾಡಬೇಕು, ಬೆಂಗಳೂರಿನಲ್ಲಿ ವಿಚಾರಣೆ ನಡೆಸಬೇಕು ಅಂತ ಕೋರಿ ಡಿಕೆಶಿ ಪತ್ನಿ ಮತ್ತು ತಾಯಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಇಂದಿಗೆ ವಿಚಾರಣೆ ನಿಗದಿ ಮಾಡಿತ್ತು. ಅಲ್ಲದೆ 7 ದಿನಗಳ ಕಾಲ ಸಮನ್ಸ್ ನೀಡದಂತೆ ಇಡಿಗೆ ಸೂಚನೆ ನೀಡಿತ್ತು.

ಏಳು ದಿನ ಕಳೆದಿದೆ, ಇಂದೇ ನಡೆಯಲಿದೆ ವಿಚಾರಣೆ

ಏಳು ದಿನ ಕಳೆದಿದೆ, ಇಂದೇ ನಡೆಯಲಿದೆ ವಿಚಾರಣೆ

ಈಗಾಗಲೇ 7 ದಿನ ಕಳೆದಿರುವ ಹಿನ್ನೆಲೆಯಲ್ಲಿ ಇಂದು ವಿಚಾರಣೆ ಬನ್ನಿ ಅಂತ ಡಿಕೆ ತಾಯಿ ಮತ್ತು ಮಡದಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಈ ನಡುವೆ ಸಮನ್ಸ್ ರದ್ದು ಕೋರಿ ಸಲ್ಲಿಸಿದ್ದ ಗೌರಮ್ಮ ಮತ್ತು ಉಷಾ ಸಲ್ಲಿಸಿದ್ದ ಅರ್ಜಿ ಕೂಡ ಇಂದೇ ವಿಚಾರಣೆಗೆ ಬರಲಿದೆ.

English summary
Former Minister DK Shivakumar Mother Gowramma and wige Usha petition hearing today at Delhi highcourt Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X