ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.ಕೆ.ಶಿವಕುಮಾರ್ ಜಾಮೀನು ಪ್ರಯತ್ನ-2: ಸಿಗುವುದೇ ಯಶಸ್ಸು?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಕಸ್ಟಡಿ ಸಮಯ ಇಂದಿಗೆ ಅಂತ್ಯವಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಜೊತೆಗೆ ಅವರ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬರಲಿದೆ.

ಡಿ. ಕೆ. ಶಿವಕುಮಾರ್ ಜಾಮೀನಿಗೆ ಇಡಿ ಅಕ್ಷೇಪಣೆ; ಕೋರ್ಟ್‌ಗೆ ಹೇಳಿದ್ದೇನು?ಡಿ. ಕೆ. ಶಿವಕುಮಾರ್ ಜಾಮೀನಿಗೆ ಇಡಿ ಅಕ್ಷೇಪಣೆ; ಕೋರ್ಟ್‌ಗೆ ಹೇಳಿದ್ದೇನು?

ಸೆಪ್ಟೆಂಬರ್ 3 ರಿಂದ ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಕಸ್ಟಡಿ ಅವಧಿಯನ್ನು ನಾಲ್ಕು ದಿನಗಳ ವಿಸ್ತರಣೆ ಮಾಡಿ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 13 ರಂದು ಆದೇಶ ಹೊರಡಿಸಿತ್ತು.

ಎಚ್ಡಿಕೆ - ಡಿಕೆಶಿ ಈಗ ಕುಚುಕು ಕುಚುಕು: ಹಳೇ ದುಷ್ಮನಿ ರಿವೈಂಡ್ ಮಾಡಿದಾಗ..ಎಚ್ಡಿಕೆ - ಡಿಕೆಶಿ ಈಗ ಕುಚುಕು ಕುಚುಕು: ಹಳೇ ದುಷ್ಮನಿ ರಿವೈಂಡ್ ಮಾಡಿದಾಗ..

ಡಿ.ಕೆ.ಶಿವಕುಮಾರ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಗೆ ನಿನ್ನೆ ಇಡಿ ತಕರಾರು ಸಲ್ಲಿಸಿದ್ದು, ಜಾಮೀನು ಅರ್ಜಿಯೂ ಸಹ ಇಂದು ವಿಚಾರಣೆಗೆ ಬರಲಿದೆ.

DK Shivakumar Bail Application Inquery In Special Court

ಡಿ.ಕೆ.ಶಿವಕುಮಾರ್ ಅವರ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಹಾಗೂ ತಂಡ ಇಂದು ವಾದ ಮಂಡಿಸಲಿದೆ. ಡಿ.ಕೆ.ಶಿವಕುಮಾರ್ ಬಂಧನ ಆದಂದಿನಿಂದಲೂ ಇವರೇ ವಾದ ಮಾಡುತ್ತಿದ್ದಾರೆ. ಇಡಿ ಪರ ಕರ್ನಾಟಕ ಮೂಲಕ ನಟರಾಜ್ ವಾದಿಸುತ್ತಿದ್ದಾರೆ.

ಇ.ಡಿ ಕಸ್ಟಡಿ ಪೂರ್ತಿ ಆಸ್ಪತ್ರೆಯಲ್ಲೇ ಕಳೆದ ಡಿಕೆಶಿಯಿಂದ ಸಿಕ್ಕ ಉತ್ತರವೇನು?ಇ.ಡಿ ಕಸ್ಟಡಿ ಪೂರ್ತಿ ಆಸ್ಪತ್ರೆಯಲ್ಲೇ ಕಳೆದ ಡಿಕೆಶಿಯಿಂದ ಸಿಕ್ಕ ಉತ್ತರವೇನು?

ಸಂಜೆ 4 ಗಂಟೆ ವೇಳೆಗೆ ವಿಚಾರಣೆ ಪ್ರಾರಂಭವಾಗಲಿದ್ದು, ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಕೋರ್ಟ್ ಆವರಣ ತಲುಪಿದ್ದು, ಕೆಲವೇ ನಿಮಿಷಗಳಲ್ಲಿ ವಿಚಾರಣೆ ಆರಂಭವಾಗಲಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ಸಿಗುತ್ತದೆಯೋ ಅಥವಾ ಜೈಲು ಪಾಲಾಗುತ್ತಾರೆಯೋ ಕಾದು ನೋಡಬೇಕಿದೆ.

English summary
DK Shivakumar's ED custody is going to end today, so he present in front of the special court today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X