ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಡಿಕೆಶಿಗೆ ತಪ್ಪದ ಸಂಕಷ್ಟ: ಸೆಪ್ಟೆಂಬರ್ 17 ರವರೆಗೆ ಇಡಿ ವಶಕ್ಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 13: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಮತ್ತೆ ನಿರಾಶೆ ಅನುಭವಿಸುವಂತಾಗಿದೆ.
ಕಳೆದ 10 ದಿನಗಳಿಂದ ಇ.ಡಿ. ವಶದಲ್ಲಿದ್ದ ಡಿಕೆ ಶಿವಕುಮಾರ್ ಅವರ ಸಂಕಷ್ಟ ಮತ್ತೆ ಮುಂದುವರಿದಿದೆ. ಶುಕ್ರವಾರ ಮಧ್ಯಾಹ್ನ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನವದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಜಾಮೀನು ಅರ್ಜಿಯನ್ನು ಸೋಮವಾರಕ್ಕೆ ಕಾಯ್ದಿರಿಸಿತು. ಜತೆಗೆ ಅವರನ್ನು ಸೆಪ್ಟೆಂಬರ್ 17ರ ವರೆಗೆ ದಿನಗಳವರೆಗೆ ಇ.ಡಿ ವಶಕ್ಕೆ ಒಪ್ಪಿಸಿತು.

ಮೊದಲಿಗೆ ಡಿ.ಕೆ.ಶಿವಕುಮಾರ್ ಅವರಿಗೆ ಸೂಕ್ತ ವೈದ್ಯಕೀಯ ಸವಲತ್ತು ನೀಡಿ ಆ ನಂತರ ಅವರನ್ನು ಪ್ರಶ್ನೆ ಮಾಡಿ ಎಂದು ಇಡಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ಸೆ. 3ರಂದು ಬಂಧನಕ್ಕೆ ಒಳಗಾದ ಡಿಕೆ ಶಿವಕುಮಾರ್ ಅವರು ಅಂದಿನಿಂದಲೂ ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ. ಅವರನ್ನು ಇ.ಡಿಯ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿತ್ತು. ಶುಕ್ರವಾರ ಅವರ ಇ.ಡಿ ವಶದ ಅವಧಿ ಮುಕ್ತಾಯಗೊಂಡಿತ್ತು. ದೆಹಲಿಯ ನಿವಾಸದಲ್ಲಿ ಸಿಕ್ಕ ಅಕ್ರಮ ಹಣದ ಕುರಿತು ಅವರನ್ನು ಸತತ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ ಮತ್ತಷ್ಟು ದಿನಗಳ ಕಾಲ ವಿಚಾರಣೆಗೆ ಅವಕಾಶ ನೀಡುವಂತೆ ಇ.ಡಿ ಕೋರಿತ್ತು.

ಅದಾನಿ ಸಂಸ್ಥೆಗೂ ನಿಮ್ಗೂ ಏನ್ ಸಂಬಂಧ? ಐಶ್ವರ್ಯಾಗೆ 'ಇಡಿ' ಹಿಟ್ಅದಾನಿ ಸಂಸ್ಥೆಗೂ ನಿಮ್ಗೂ ಏನ್ ಸಂಬಂಧ? ಐಶ್ವರ್ಯಾಗೆ 'ಇಡಿ' ಹಿಟ್

ಡಿಕೆ ಶಿವಕುಮಾರ್ ಅವರು ಇ.ಡಿಯ ಸಮಯವನ್ನು ಹಾಳು ಮಾಡಿದ್ದಾರೆ. ತಮ್ಮ ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡಿಲ್ಲ. ಅವರು ತಮ್ಮ ಕಸ್ಟಡಿಯಲ್ಲಿದ್ದ ಅವಧಿಯಲ್ಲಿ ನೀಡಿರುವ ಹೇಳಿಕೆಗಳನ್ನು ದಾಖಲಿಸಿದ್ದೇವೆ. ಅವರ 317 ಬ್ಯಾಂಕ್ ಖಾತೆಗಳಲ್ಲಿರುವ ಸುಮಾರು 200 ಕೋಟಿ ರೂ. ಹಣದ ಮೂಲ ಪತ್ತೆಯಾಗಬೇಕಿದೆ. ಅವರು ಬಹಳ ದೊಡ್ಡ ಮೊತ್ತದ ಠೇವಣಿ ಇರಿಸಿದ್ದಾರೆ. ಅಕ್ರಮ ಹಣವನ್ನು ವಿವಿಧ ಖಾತೆಗಳಲ್ಲಿ ಇರಿಸಿದ್ದಾರೆ. ಅದರ ವಿವರಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಇ.ಡಿ. ವಾದ ಮಂಡಿಸಿತು.

DK Shivakumar Arrest Bail Plea Order Reserved ED Custody Continue

800 ಕೋಟಿ ರೂ. ಮೌಲ್ಯದ ವ್ಯವಹಾರವನ್ನು ಅವರು ನಡೆಸಿದ್ದಾರೆ. 22 ವರ್ಷದ ಮಗಳ ಹೆಸರಿನಲ್ಲಿ 108 ಕೋಟಿ ರೂ. ವ್ಯವಹಾರ ನಡೆದಿದೆ. ಇದು ದೇಶದ ಆರ್ಥಿಕೆಗೆ ಕಳವಳಕಾರಿಯಾಗಿದೆ. ಡಿಕೆ ಶಿವಕುಮಾರ್ ಅವರು ಸಾಕ್ಷ್ಯಗಳನ್ನು ನಾಶಪಡಿಸುವಷ್ಟು ಪ್ರಭಾವಶಾಲಿಯಾಗಿದ್ದಾರೆ. ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸಂಬಂಧವಿಲ್ಲದ ಉತ್ತರಗಳನ್ನು ನೀಡಿದ್ದಾರೆ. ಅವರಿಗೆ ಮಾತ್ರವೇ ವ್ಯವಹಾರಗಳ ಮಾಹಿತಿ ತಿಳಿದಿದೆ. ಅದರ ಬಗ್ಗೆ ಬಾಯಿ ಬಿಡುತ್ತಿಲ್ಲ. ತಾನು ಸಂಗ್ರಹಿಸಿರುವ ದಾಖಲೆಗಳಿಗೆ ಪೂರಕ ಮಾಹಿತಿಯನ್ನು ಅವರು ನೀಡಬೇಕು. ಹೀಗಾಗಿ ಇನ್ನೂ ಐದು ದಿನ ಅವರ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಇಡಿ ಪರ ವಕೀಲರ ಎಎಸ್‌ಜಿ ಕೆಎಂ ನಟರಾಜ್ ವಾದಿಸಿದರು.

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?

ಮುಂದಿನ ಐದು ದಿನಗಳಲ್ಲಿ ಅವರು ಉತ್ತರ ನೀಡುತ್ತಾರೆ ಎಂದು ನಿಮಗೆ ಅನಿಸುತ್ತದೆಯೇ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಅದಕ್ಕೆ ಇ.ಡಿ ಪರ ವಕೀಲರು ಕೆಲವು ದಾಖಲೆಗಳನ್ನು ಅವರ ಮುಂದಿರಿಸಿ ಪ್ರಶ್ನಿಸಬೇಕಿದೆ ಎಂದು ತಿಳಿಸಿದರು.

ಡಿಕೆ ಶಿವಕುಮಾರ್ ಅವರು ಅನಾರೋಗ್ಯದ ಕಾರಣ ಗುರುವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ತಮಗೆ ಅನಾರೋಗ್ಯ ಇರುವುದರಿಂದ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಡಿಕೆ ಶಿವಕುಮಾರ್ ಅವರ ಆರೋಗ್ಯ ಹದಗೆಟ್ಟಿದೆ. ನಿನ್ನೆ 200/140 ಬಿಪಿ ಇತ್ತು. ನ್ಯಾಯಾಲಯ ಏನ ಆದೇಶ ನೀಡಿದರೂ ಅವರು ಆಸ್ಪತ್ರೆಗೆ ಹೋಗಲೇಬೇಕಾದ ಸ್ಥಿತಿ ಇದೆ ಎಂದು ಅವರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಕೋರ್ಟ್‌ಗೆ ತಿಳಿಸಿದರು.

ಇದೇ ವೇಳೆ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯೂ ವಿಚಾರಣೆಗೆ ಬಂದಿತ್ತು. ಅದರ ಕುರಿತು ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಲಾಯಿತು. ಡಿಕೆಶಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗೆ ಇ.ಡಿ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಹೀಗಾಗಿ ಆಕ್ಷೇಪ ವ್ಯಕ್ತಪಡಿಸಲು ಸೋಮವಾರದವರೆಗೂ ಸಮಯ ನೀಡಿ ಆದೇಶ ಕಾಯ್ದಿರಿಸಲಾಯಿತು.

English summary
Rose Avenue Court has reserved the order on bail plea of DK Shivakumar and extended his ED custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X