• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭ್ರಷ್ಟಾಚಾರ ತಡೆಯತ್ತ NDA ನಡೆ.. ಟ್ವಿಟ್ಟರ್ ನಲ್ಲಿ ಏಕಾಏಕಿ ಟ್ರೆಂಡಿಂಗ್!

|
   AgustaWestland Scam : ಕಾಂಗ್ರೆಸ್ ನ ಮಟ್ಟ ಹಾಕಲು ನರೇಂದ್ರ ಮೋದಿ ಸರ್ಕಾರ ರಣತಂತ್ರ

   ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಭಾರತಕ್ಕೆ ಗಡಿಪಾರು ಮಾಡಿರುವುದನ್ನು ಸ್ವಾಗತಿಸಿರುವ ಬಿಜೆಪಿ ನಾಯಕರು, ಇದು ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಸಮರ ಎಂದಿದ್ದಾರೆ. ಕೇವಲ ಇದಷ್ಟೇ ಅಲ್ಲದೆ, ಮೋದಿ ಸರ್ಕಾರ ಇದುವರೆಗೂ ಭ್ರಷ್ಟಾಚಾರ ನಿರ್ಮೂಲನೆಗೆ ಯಾವೆಲ್ಲ ಕ್ರಮ ಕೈಗೊಂಡಿದೆಯೋ ಅವೆಲ್ಲವನ್ನೂ ನೆನಪಿಸಿಕೊಂಡು ಬಿಜೆಪಿನಾಯಕರು ಟ್ವೀಟ್ ಮಾಡುತ್ತಿದ್ದಾರೆ.

   ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ ಪ್ರಮುಖ ಆರೋಪಿ, ಉದ್ಯಮಿ ರಾಜೀವ್ ಸಕ್ಸೇನಾ ಮತ್ತು ಕಾರ್ಪೊರೇಟ್ ವಿಮಾನಯಾನ ಲಾಬಿಗಾರ ದೀಪಕ್ ತಲ್ವಾರ್ ಅವರನ್ನು ಭಾರತಕ್ಕೆ ಗಡಿಪಾರು ಮಾಡಲಾಗಿದೆ. ವಿಚಾರಣೆಗಾಗಿ ಈಗಾಗಲೇ ಸಕ್ಸೇನಾ ವಿಚಾರಣೆಗಾಗಿ ಪಟಿಯಾಲಾ ಹೌಸ್ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ.

   ಯುಪಿಎಗೆ ಮತ್ತಷ್ಟು ಸಂಕಷ್ಟ: ಇನ್ನಿಬ್ಬರು 'ಅಗಸ್ಟಾ' ಆರೋಪಿಗಳ ಗಡಿಪಾರು

   ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಐಷಾರಾಮಿ ಹೆಲಿಕಾಪ್ಟರ್ ಖರೀದಿಯ 3,600 ಕೋಟಿ ರೂಪಾಯಿ ಹಗರಣದ ತನಿಖೆಗೆ ಎನ್ ಡಿಎ ಸರ್ಕಾರ ಮುಂದಾಗಿದೆ. ಲೋಕಸಭಾ ಚುನಾವಣೆಯ ಹೊತ್ತಲ್ಲಿ ಈ ಹಗರಣ ಮತ್ತೆ ಜೀವ ತಳೆದಿದ್ದು, ಯುಪಿಎ ಗೆ ನುಂಗಲಾರದ ತುತ್ತಾಗಿದೆ. ಆರೋಪಿಗಳ ಗಡಿಪಾರಿನ ಬಗ್ಗೆ ಟ್ವಿಟ್ಟರ್ ನಲ್ಲೂ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮೋದಿ ಸರ್ಕಾರ ಭ್ರಷ್ಟಾಚಾರ ವಿರುದ್ಧ ಮಾಡುತ್ತಿರುವ ಯುದ್ದವನ್ನು #DisruptionOfCorruption ಹ್ಯಾಶ್ ಟ್ಯಾಗ್ ಮೂಲಕ ಬಿಜೆಪಿ ನಾಯಕರು ಟ್ವೀಟ್ ಮಾಡುತ್ತಿದ್ದು, ಅದೀಗ ಟ್ರೆಂಡಿಂಗ್ ಆಗಿದೆ. ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಾದವೂ ಇದರೊಟ್ಟಿಗೆ ಸೇರಿ ಕಾಂಗ್ರೆಸ್ ಅನ್ನು ಹಳಿಯಲು ಬಿಜೆಪಿಗೆ ಹೊಸ ಹ್ಯಾಶ್ ಟ್ಯಾಗ್ ದೊರೆತಂತಾಗಿದೆ.

   ನಿಮ್ಮ ಸರ್ಕಾರದ ಭ್ರಷ್ಟರನ್ನು ಹಿಡಿದ ಚೌಕಿದಾರ!

   ರಾಹುಲ್ ಗಾಂಧಿ ಅವರೇ, ನಿಮ್ಮ ಸರ್ಕಾರದ ಭ್ರಷ್ಟರನ್ನು ಹಿಡಿದ 'ಚೌಕಿದಾರ'ನನ್ನು ಅಭಿನಂದಿಸುವುದಿಲ್ಲವೇ? ನೀವು #DisruptionOfCorruption ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡುತ್ತಿಲ್ಲವಲ್ಲ ಏಕೆ? ನಿಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಾಡಿ ಅಡಗಿಕೊಂಡಿರುವವರನ್ನು ಮೋದಿ ಸರ್ಕಾರ ವಾಪಸ್ ಕರೆದುಕೊಂದು ಬರುತ್ತಿದೆ. ಇದರಿಂದ ನಿಮಗೆ ಸಂತಸವಾಗುತ್ತಿಲ್ಲವೇ? ಅಷ್ಟಕ್ಕೂ, ಜೋಶ್ ಹೇಗಿದೆ ರಾಹುಲ್? ಎಂದು ಬಿಜೆಪಿ ಕರ್ನಾಟಕದಿಂದ ಟ್ವೀಟ್ ಮಾಡಲಾಗಿದೆ!

   ಅಗಸ್ಟಾ ಹಗರಣ: ಸೋನಿಯಾ ಬಯಕೆಯಂತೆ ಹೆಲಿಕಾಪ್ಟರ್ ಖರೀದಿ ಒಪ್ಪಂದ?

   ಜಿಎಸ್ಟಿ ಯಿಂದ ಪಾರದರ್ಶಕತೆ

   ಜಿಎಸ್ಟಿಯ ಪಾರದರ್ಶಕ ಆನ್ ಲೈನ್ ಪ್ರಕ್ರಿಯೆಯಿಂದ ಭ್ರಷ್ಟಾಚಾರವನ್ನು ತಡೆಯುವುದಕ್ಕೆ ಸಾಧ್ಯವಾಗಿದೆ. ಜಿಎಸ್ಟಿ ಜಾರಿಯಾದ ಒಂದು ವರ್ಷದಲ್ಲಿ 48 ಲಕ್ಷ ಉದ್ದಿಮೆಗಳು ತೆರಿಗೆದಾರರ ಪಟ್ಟಿ ಸೇರಿವೆ. 1947-2017 ರ ಅವಧಿಯಲ್ಲಿ ಕೇವಲ 66 ಲಕ್ಷ ಉದ್ದಿಮೆಗಳು ತೆರಿಗೆ ಈ ಪಟ್ಟಿಯಲ್ಲಿದ್ದವು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

   ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣ : ಭಾರತದ ವಶಕ್ಕೆ ಆರೋಪಿ ಮೈಕೆಲ್

   ಒಂದೂ ಭ್ರಷ್ಟಾಚಾರದ ಆರೋಪವಿಲ್ಲ!

   ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಮೇಲೆ ಇದುವರೆಗೂ ಒಂದೇ ಒಂದೂ ಭ್ರಷ್ಟಾಚಾರ ಆರೋಪಗಳಿಲ್ಲ. ಈಗಾಗಲೇ ದೇಶಭ್ರಷ್ಟ ಆರ್ಥಿಕ ಆರೋಪಿಗಳ ಮೇಲೆ ಕಾನೂನು ಕ್ರಮಗಳನ್ನು ಬಿಜೆಪಿ ತೆಗೆದುಕೊಂಡಿದೆ. ಈ ಪ್ರಕರಣಗಳನು ಜಾಗತಿಕ ವೇದಿಕೆಯಲ್ಲಿ ಬಗೆಹರಿಸುತ್ತಿದೆ. ಭ್ರಷ್ಟರನ್ನು ಶಿಕ್ಷಿಸುವುದರತ್ತಲೇ ಗಮನ ಹರಿಸುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

   ಪಾರದರ್ಶಕ ಆಡಳಿತ, ಹೊಸ ಭಾರತ

   ಹೊಸ ಭಾರತಕ್ಕಾಗಿ ಶುದ್ಧ ಮತ್ತು ಪಾರದರ್ಶಕ ಆಡಳಿತ ವ್ಯವಸ್ಥೆ! ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭ್ರಷ್ಟಾಚಾರದ ಎಲ್ಲಾ ಆಯಾಮಗಳನ್ನೂ ನಾಶ ಮಾಡುವ ಮೂಲಕ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಸಲು ಸಾಕಷ್ಟು ಯತ್ನ ಮಾಡುತ್ತಿದೆ ಎಂದು ಮಲ್ಲೇಶ್ವ ಶಾಸಕ ಡಾ.ಅಶ್ವತ್ಥ ನಾರಾಯಣ ಟ್ವೀಟ್ ಮಾಡಿದ್ದಾರೆ.

   ಇಂಥ ಕ್ರಾಂತಿಕಾರಿ ಹಾದಿಯ ಯಾವ ಸರ್ಕಾರವೂ ತುಳಿದಿಲ್ಲ!

   ಭ್ರಷ್ಟಾಚಾರವನ್ನು ತಡೆಯಲು ಅಪನಗದೀಕರಣದಂಥ ಕ್ರಾಂತಿಕಾರಿ ನಿರ್ಧಾರಗಳನ್ನು ಮೋದಿ ಸರ್ಕಾರವನ್ನು ಬಿಟ್ಟು ಬೇರಾವ ಸರ್ಕಾರವೂ ತೆಗೆದುಕೊಂಡಿಲ್ಲ. ಇದು ಕಪ್ಪು ಹಣ ಹೊರಬರುವುದಕ್ಕೆ, ಅನುಮಾನಾಸ್ಪದ ಠೇವಣಿಗಳ ಮೇಲೆ ನಿಗಾ ಇಡುವುದಕ್ಕೆ, ಲೆಕ್ಕಕ್ಕೆ ಸಕ್ಕದ ಆದಾಯಗಳು ಹೊರಬರುವುದಕ್ಕೆ ಸಹಾಯವಾಯಿತು ಎಂದು ಬಿಜೆಪಿ ಟ್ವೀಟ್ ಮಾಡಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   AgustaWestland scam: UAE has handed over accused lobbyist Deepak Talwar and Rajiv Saxena to India. BJP welcomes such all decisions-which are anti corruption-on twitter through #DisruptionOfCorruption hastag,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more