ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ನಾಯಕರ ವಿರುದ್ಧವೇ ಸಿಟ್ಟಿಗೆದ್ರಾ ಅನರ್ಹ ಶಾಸಕರು?

|
Google Oneindia Kannada News

Recommended Video

ಬಿಜೆಪಿ ವಿರುದ್ಧವೇ ಸಿಟ್ಟಿಗೆದ್ರಾ ಅನರ್ಹ ಶಾಸಕರು?

ನವದೆಹಲಿ, ಆಗಸ್ಟ್ 22: ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ದೆಹಲಿಯತ್ತ ಪ್ರಯಾಣ ಬೆಳೆಸಿದ್ದ ಅನರ್ಹ ಶಾಸಕರು ಬಿಜೆಪಿ ವಿರುದ್ಧವೇ ಸಿಟ್ಟಿಗೆದ್ದಂತೆ ಅವರ ನಡೆ ಅನಿಸುತ್ತಿದೆ. ನಾಳೆ ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಖುದ್ದು ಬಂದರೆ ಮಾತ್ರ ಮಾತನಾಡಲು ಅನರ್ಹ ಶಾಸಕರು ತೀರ್ಮಾನಿಸಿದ್ದಾರೆ.

ಯಾವುದೇ ಕಾರಣಕ್ಕೂ ಸಚಿವ ಡಾ.‌ ಅಶ್ವಥ್ ನಾರಾಯಣ ಮತ್ತು ಬಿ.ವೈ. ವಿಜಯೇಂದ್ರ ಜೊತೆ ಮಾತುಕತೆ ಇಲ್ಲ ಎಂದಿದ್ದಾರೆ.ಇಂದು ದೆಹಲಿಯಲ್ಲಿ ಸಭೆ ಸೇರಿ ಚರ್ಚಿಸಿ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅನರ್ಹ ಶಾಸಕರ ಜೊತೆ ಇರುವ ಜೆಡಿಎಸ್ ಎಂಎಲ್‌ಸಿ ಪುಟ್ಟಣ್ಣ ಹೇಳಿದ್ದೇನು?ಅನರ್ಹ ಶಾಸಕರ ಜೊತೆ ಇರುವ ಜೆಡಿಎಸ್ ಎಂಎಲ್‌ಸಿ ಪುಟ್ಟಣ್ಣ ಹೇಳಿದ್ದೇನು?

ರಾಜೀನಾಮೆ ನೀಡುವ ವೇಳೆ ನಮ್ಮ ಜೊತೆ ಮಾತುಕತೆ ನಡೆಸಿದವರೇ ಬೇರೆ, ಈಗ ನಾವೇ ಮಾಡಿಸಿದ್ದು ಎಂದು ಓಡಾಡುತ್ತಿರುವವರೇ ಬೇರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಸಿಎಂ ಯಡಿಯೂರಪ್ಪ ಜೊತೆ ಖಂಡ ತುಂಡವಾಗಿ ಮಾತನಾಡಲು ಅನರ್ಹ ಶಾಸಕರು ನಿರ್ಧರಿಸಿದ್ದಾರೆ.ಸರ್ಕಾರ ರಚನೆಯಾದ ಬಳಿಕ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗ್ತಿದೆ, ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗ್ತಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Disqualified MLAs Shows Anger Over BJP Leaders

ಈ ಕುರಿತು ಜೆಡಿಎಸ್ ಎಂಎಲ್ಸಿ ಸಿ ಪುಟ್ಟಣ್ಣಯ್ಯ ಮಾತನಾಡಿದ್ದು, ಅನರ್ಹ ಶಾಸಕರಿಗೆ ಸಾಕಷ್ಟು ಗೊಂದಲಗಳಿವೆ ಅದನ್ನು ಬಗೆಹರಿಸಲೇಬೇಕು. ಯಾಕೆಂದರೆ ಚುನಾವಣೆಯಲ್ಲಿ ಗೆದ್ದಿರುವವರನ್ನು ಬಿಟ್ಟು ಸೋತಿರುವವರಿಗೆ ಸಚಿವ ಸ್ಥಾನವನ್ನು ನೀಡಿದ್ದಾರೆ. ಸರ್ಕಾರ ರಚನೆಗಿಂತ ಮೊದಲು ಹೇಳಿದ್ದೇ ಬೇರೆ ಈಗ ಆಗುತ್ತಿರುವುದೇ ಬೇರೆ ಎಂದು ಬೇಸರ ವ್ಯಕ್ತಪಡಿಸಿದರು.

ಅನರ್ಹ ಶಾಸಕರ ವಿಚಾರದಲ್ಲಿ ಯಡಿಯೂರಪ್ಪ ಕೈಬಿಟ್ಟ ಹೈಕಮಾಂಡ್? ಅನರ್ಹ ಶಾಸಕರ ವಿಚಾರದಲ್ಲಿ ಯಡಿಯೂರಪ್ಪ ಕೈಬಿಟ್ಟ ಹೈಕಮಾಂಡ್?

ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇದೆ, ಬಿಜೆಪಿ ಜೊತೆಗೆಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನೂ ಕೂಡ ಕರೆದುಕೊಂಡು ಕರೆದುಕೊಂಡು ಹೋಗಬೇಕು ಎನ್ನುವುದು ನಮ್ಮ ಮನವಿ. ಮಹೇಶ್ ಕುಮಟಳ್ಳಿ ಎದುರು ಸೋತವರಿಗೆ ಸಚಿವ ಸ್ಥಾನ ನೀಡಿದರೆ ಅವರಿಗೆ ಬೇಸರವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

English summary
As the cabinet expanded, Disqualified lawmakers who traveled to Delhi felt their outrage against the BJP. Unqualified MLAs are scheduled to speak only if CM Yeddyurappa first appears in Delhi August 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X