ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಮುಗಿಯದ ಅನರ್ಹ ಶಾಸಕರ ಬಿಕ್ಕಟ್ಟು, ಪ್ರಕರಣ ನಾಳೆಗೆ ಮುಂದೂಡಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ಅನರ್ಹ ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಹೂಡಿದ್ದ ಅರ್ಜಿಯ ವಿಚಾರಣೆ ಇಂದು ಮುಂದುವರೆದಿದ್ದು, ಬಹುಮುಖ್ಯ ಆದೇಶ ಇಂದು ಹೊರಬೀಳುವ ನಿರೀಕ್ಷೆ ಇದೆ.

ಹದಿನೇಳು ಅನರ್ಹ ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಅರ್ಜಿ ಹಾಕಿದ್ದರು. ಅನರ್ಹ ಶಾಸಕರ ಪರವಾಗಿ ವಕೀಲ ಮುಕುಲ್ ರೊಹ್ಟಗಿ ಅವರು ವಾದ ಮಂಡಿಸಿದ್ದಾರೆ.

ಸ್ಪೀಕರ್ ಅವರ ಅನರ್ಹತೆಯ ಆದೇಶವು ದುರುದ್ದೇಶದಿಂದ ಕೂಡಿದ್ದು, ಪಕ್ಷ ನಿಷ್ಠರಾಗಿ ಅವರು ಅನರ್ಹರನ್ನಾಗಿ ಮಾಡಿದ್ದಾರೆ. ಹಾಗಗಿ ಅನರ್ಹತೆಯನ್ನು ರದ್ದು ಮಾಡಬೇಕು ಎಂದು ಮುಕುಲ್ ರೊಹ್ಟಗಿ ವಾದ ಮಂಡಿಸಿದ್ದಾರೆ.

Disqualified MLAs hearing in Supreme Court Live Updates In Kannada

ಎರಡು ಗಂಟೆಗಳಷ್ಟು ಸುದೀರ್ಘವಾಗಿ ವಾದ ಮಂಡನೆ ಆಗುತ್ತಿದ್ದು, ಉಪಚುನಾವಣೆಯನ್ನು ಮುಂದೂಡಬೇಕು ಅಥವಾ ಚುನಾವಣೆಗೆ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಅವಕಾಶ ನೀಡಬೇಕು ಎಂದು ಮುಕುಲ್ ರೊಹ್ಟಗಿ ಸುಪ್ರೀಂಕೋರ್ಟ್‌ ತ್ರಿಸದಸ್ಯ ಪೀಠದ ಮುಂದೆ ವಾದವಿಟ್ಟಿದ್ದಾರೆ.

Newest FirstOldest First
3:46 PM, 25 Sep

ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರನ್ನು ಅನರ್ಹ ಮಾಡಿದ್ದನ್ನು ಈಗಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರ ವಕೀಲರು ಸಮರ್ಥಿಸಿಲ್ಲ. ಇದು ಇಂದಿನ ವಿಚಾರಣೆಯ ಪ್ರಮುಖ ಅಂಶಗಳಲ್ಲೊಂದು.
3:32 PM, 25 Sep

ನಾಳೆ ಲಿಖಿತ ವಾದವನ್ನು ಸಲ್ಲಿಸುವುದಾಗಿ ಕಾಂಗ್ರೆಸ್ ಪರ ವಕೀಲ ದೇವದತ್ತ ಕಾಮತ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮಾತ್ರವಲ್ಲದೆ, ಇದೇ ಪ್ರಕರಣದಲ್ಲಿ ಪ್ರತಿವಾದಿಗಳಾದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದ್ದು, ಅವರ ಪರ ವಕೀಲರು ನಾಳೆ ವಾದ ಮಂಡಿಸಲಿದ್ದಾರೆ.
3:15 PM, 25 Sep

ಅನರ್ಹ ಶಾಸಕರ ಪರ ವಕೀಲರ ವಾದ ಮುಗಿದಿದ್ದು, ಕಾಂಗ್ರೆಸ್ ಪರ ವಕೀಲ ದೇವದತ್ತ ಕಾಮತ್ ಅವರು ತಮ್ಮ ವಾದವನ್ನು ನಾಳೆ ಸಲ್ಲಿಸುತ್ತೇವೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ. ಅತೃಪ್ತ ಶಾಸಕರ ಪ್ರಕರಣ ನಾಳೆಗೆ ಮುಂದೂಡುವ ಸಾಧ್ಯತೆ ಇದೆ.
3:13 PM, 25 Sep

ಅನರ್ಹ ಶಾಸಕ ಆರ್.ಶಂಕರ್ ಅವರ ಪರ ವಕೀಲರು ವಾದ ಮಂಡಿಸಿದರು. ಕೆಪೆಜೆಪಿ ಪಕ್ಷ ಪೂರ್ಣವಾಗಿ ಕಾಂಗ್ರೆಸ್ ಜೊತೆ ವಿಲಿನಗೊಳಿಸಲಾಗಿಲ್ಲ ಹಾಗಿದ್ದರೂ ನನ್ನನ್ನು ಕಾಂಗ್ರೆಸ್ ಶಾಸಕ ಎಂದು ಪರಿಗಣಿಸಿ ಅನರ್ಹಗೊಳಿಸಲಾಗಿದೆ- ಆರ್.ಶಂಕರ್ ಪರ ವಕೀಲ
3:03 PM, 25 Sep

ಶ್ರೀಮಂತ ಪಾಟೀಲ್ ಅವರು ರಾಜೀನಾಮೆ ನೀಡದೇ ಇದ್ದರೂ ಸಹ ಅವರನ್ನು ಅನರ್ಹಗೊಳಿಸಲಾಗಿದೆ. ಅವರು ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿದ್ದರೂ ಅದನ್ನೇ ನೆಪ ಮಾಡಿಕೊಂಡು ಅನರ್ಹ ಮಾಡಲಾಗಿದೆ- ಶ್ರೀಮಂತ್ ಪಾಟೀಲ್ ಪರ ವಕೀಲ ವಿವಿ ಗಿರಿ
3:02 PM, 25 Sep

ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಅನರ್ಹಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಪರ ವಕೀಲರು ವಾದ ಮಂಡನೆ ಆರಂಭಿಸಿದ್ದಾರೆ.
2:56 PM, 25 Sep

ರಾಜೀನಾಮೆ ಅಥವಾ ಅನರ್ಹತೆಯಿಂದ ಶಾಸಕ ಸ್ಥಾನ ತೆರವಾಗಿದೆ. ಈಗ ಉಪಚುನಾವಣೆ ಘೋಷಣೆ ಆಗಿದೆ. ಅನರ್ಹತೆಯ ಕಾರಣದಿಂದ ಶಾಸಕರು ಚುನಾವಣೆ ಸ್ಪರ್ಧೆಯಿಂದ ತಪ್ಪುವಂತಾಗಬಾರದು- ಮುಕುಲ್ ರೊಹ್ಟಗಿ
Advertisement
2:55 PM, 25 Sep

ರಾಜೀನಾಮೆ ನೀಡಿದ ನಂತರ ಶಾಸಕರ ಮೇಲೆ ಒತ್ತಡ ಹೇರಲಾಗಿತ್ತು. ಶಾಸಕರು ರಾಜೀನಾಮೆ ವಾಪಸ್ ಪಡೆಯುವಂತೆ ಒತ್ತಡ ಹೇರಲಾಗಿತ್ತು. ರಾಜೀನಾಮೆ ಹಿಂಪಡೆಯಲು ಶಾಸಕರು ಒಪ್ಪದೇ ಇದ್ದ ಕಾರಣಕ್ಕೆ ಅವರನ್ನು ಅನರ್ಹರನ್ನಾಗಿ ಮಾಡಲಾಗಿದೆ. ಇದರಲ್ಲಿ ದುರುದ್ದೇಶ ಸ್ಪಷ್ಟವಾಗಿ ಕಾಣುತ್ತಿದೆ- ಮುಕುಲ್ ರೊಹ್ಟಗಿ
2:54 PM, 25 Sep

ಸರ್ಕಾರ ಉರುಳುತ್ತದೆಯೋ, ಬೀಳುತ್ತದೆಯೋ ಎನ್ನುವುದು ಸ್ಪೀಕರ್‌ ಅವರಿಗೆ ಸಂಬಂಧಪಡದ ವಿಷಯ, ಸ್ಪೀಕರ್ ಅವರು ಸರ್ಕಾರದ ಪರವಾಗಿ ಕೆಲಸ ಮಾಡಿರುವುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ- ಮುಕುಲ್ ರೊಹ್ಟಗಿ
2:51 PM, 25 Sep

ಸ್ಪೀಕರ್ ಕಚೇರಿ ಪರ ವಕೀಲ ತುಷಾರ್ ಮೆಹ್ತಾ ವಾದ ಮಂಡಿಸಿ, ಸದನದ ಒಳಗೆ ಶಾಸಕರ ನಡವಳಿಕೆಯ ಮೇಲೆ ನಿಗಾ ಇಡುವುದು ಸ್ಪೀಕರ್ ಕರ್ತವ್ಯ ಆದರೆ ಈ ಹಿಂದಿನ ಸ್ಪೀಕರ್ ಅವರು ಸದನದ ಹೊರಗೆ ಶಾಸಕರ ನಡುವಳಿಕೆ ನೋಡಿ ಅನರ್ಹಗೊಳಿಸಿದ್ದೇನೆ ಎಂದು ಹೇಳಿದ್ದಾರೆ. ಇದು ಒಪ್ಪುವಂತಿಲ್ಲ ಎಂದು ತುಷಾರ್ ಮೆಹ್ತಾ ಹೇಳಿದರು.
2:49 PM, 25 Sep

ಅನರ್ಹ ಶಾಸಕ ಸುಧಾಕರ್ ಪರ ವಾದ ಮಂಡಿಸಿದ ಸುಂದರಂ ಅವರು, ರಾಜೀನಾಮೆ ನೀಡುವುದು ಶಾಸಕನ ಹಕ್ಕುಗಳಲ್ಲಿ ಒಂದು. ಸುಧಾಕರ್ ಅವರು ರಾಜೀನಾಮೆ ನೀಡಿದ್ದಾರೆ ಆದರೆ ವಿಪ್ ಉಲ್ಲಂಘನೆ ಮಾಡಿಲ್ಲ. ಪಕ್ಷ ತ್ಯಜಿಸಿದರೆ ಅಥವಾ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಮಾತ್ರ ಪಕ್ಷಾಂತರ ತಡೆ ಕಾಯ್ದೆ ಅಡಿ ಬರುತ್ತದೆ- ಸುಧಾಕರ್ ಪರ ವಕೀಲ ಸುಂದರಂ
2:47 PM, 25 Sep

ಚುನಾಯಿತರನ್ನು ಅನರ್ಹಗೊಳಿಸಲು ಹಲವು ನಿಯಮಗಳಿವೆ ಆದರೆ ಈ ಪ್ರಕರಣದಲ್ಲಿ ಅನರ್ಹತೆಯೇ ನಿಯಮಬಾಹಿರವಾಗಿದೆ ಹಾಗಾಗಿ ಅನರ್ಹತೆಯನ್ನು ರದ್ದುಗೊಳಿಸಬೇಕು ಅಥವಾ ಚುನಾವಣೆಗೆ ಸ್ಪರ್ಧಿಸಲು ಆದರೂ ಅವಕಾಶ ಕೊಡಬೇಕು -ಮುಕುಲ್ ರೊಹ್ಟಗಿ
Advertisement
2:47 PM, 25 Sep

ಶಾಸಕರ ರಾಜೀನಾಮೆ ನೈಜತೆಯಿಂದ ಕೂಡಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ. ರಾಜೀನಾಮೆ ನೈಜತೆಯಿಂದ ಇಲ್ಲ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ- ವಕೀಲ ಮುಕುಲ್ ರೊಹ್ಟಗಿ

English summary
Disuqlified MLAs application hearing in Supreme court. Lawyer Mukul Rogtagi submiting long debat in favor of disqualified MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X