• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟೂಲ್ ಕಿಟ್ ಟ್ವೀಟ್ ಅಳಿಸಿ ಹಾಕಲು ಗ್ರೆಟಾಗೆ ಹೇಳಿದ್ದೇ ದಿಶಾ ರವಿ; ದೆಹಲಿ ಪೊಲೀಸರು

|
Google Oneindia Kannada News

ನವದೆಹಲಿ, ಫೆಬ್ರುವರಿ 16: ಗ್ರೆಟಾ ಥನ್‌ಬರ್ಗ್ ಟ್ವಿಟ್ಟರ್ ಟೂಲ್ ಕಿಟ್‌ಗೆ ಸಂಬಂಧಿಸಿದಂತೆ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನವಾಗಿದ್ದು, ಪೊಲೀಸರು ದಿಶಾ ರವಿ ವಿರುದ್ಧದ ಸಾಕ್ಷ್ಯಗಳನ್ನು ಕಲೆ ಹಾಕಿರುವುದಾಗಿ ತಿಳಿಸಿದ್ದಾರೆ. ದಿಶಾ ರವಿಯೊಂದಿಗೆ, ವಕೀಲೆ ನಿಖಿತಾ ಜೇಕಬ್ ಹಾಗೂ ಶಂತನು ಎಂಬುವರ ವಿರುದ್ಧವೂ ವಾರೆಂಟ್ ಹೊರಡಿಸಲಾಗಿದೆ. ಈ ಮೂವರು ಟೂಲ್ ಕಿಟ್ ರಚನೆಯಲ್ಲಿ ತೊಡಗಿಕೊಂಡಿರುವುದಾಗಿ ಪೊಲೀಸರು ಆರೋಪಿಸಿದ್ದಾರೆ.

ರೈತರಿಗೆ ಬೆಂಬಲ ವ್ಯಕ್ತಪಡಿಸಿ ಗ್ರೆಟಾ ಥನ್‌ಬರ್ಗ್ ಟ್ವಿಟ್ಟರ್ ನಲ್ಲಿ ಮೊದಲು ಟೂಲ್ ಕಿಟ್ ಹಂಚಿಕೊಂಡಿದ್ದು, ಅದನ್ನು ಡಿಲೀಟ್ ಮಾಡುವಂತೆ ದಿಶಾ ರವಿ ಮನವಿ ಮಾಡಿದ್ದರು ಎಂಬ ಅಂಶವನ್ನು ಪೊಲೀಸರು ತಿಳಿಸಿದ್ದಾರೆ. ತಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದಾದ ಭೀತಿಯಿಂದ ಟ್ವಿಟ್ಟರ್ ಪೋಸ್ಟ್ ಅಳಿಸಿ ಹಾಕಲು ಕೇಳಿಕೊಂಡಿದ್ದರು ಎಂದಿದ್ದಾರೆ. ಮುಂದೆ ಓದಿ...

 ಟೂಲ್‌ಕಿಟ್ ವಿವಾದ; ಪೊಲೀಸರಿಂದ ಸ್ಫೋಟಕ ಮಾಹಿತಿ ಬಹಿರಂಗ... ಟೂಲ್‌ಕಿಟ್ ವಿವಾದ; ಪೊಲೀಸರಿಂದ ಸ್ಫೋಟಕ ಮಾಹಿತಿ ಬಹಿರಂಗ...

 ಗ್ರೆಟಾ ಥನ್‌ಬರ್ಗ್ ಮೊದಲ ಪೋಸ್ಟ್‌ ಡಿಲೀಟ್

ಗ್ರೆಟಾ ಥನ್‌ಬರ್ಗ್ ಮೊದಲ ಪೋಸ್ಟ್‌ ಡಿಲೀಟ್

ದೆಹಲಿಯಲ್ಲಿನ ರೈತರ ಹೋರಾಟದ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ಸ್ವೀಡನ್ ಪರಿಸರ ಕಾರ್ಯಕರ್ತೆ, ಗ್ರೇಟಾ ಥನ್ ಬರ್ಗ್ ಟೂಲ್ ಕಿಟ್ ಟ್ವೀಟ್ ಮಾಡಿದ್ದರು. ಸ್ವಲ್ಪ ಸಮಯದಲ್ಲೇ ಆ ಟೂಲ್ ಕಿಟ್ ಅಳಿಸಿ ಮತ್ತೊಂದು ಪೋಸ್ಟ್‌ ಮಾಡಿದ್ದರು. ಆ ನಂತರ ಗ್ರೆಟಾ ಥನ್‌ ಬರ್ಗ್ ಮೊದಲ ಬಾರಿ ಹಂಚಿಕೊಂಡು ಡಿಲೀಟ್ ಮಾಡಿದ್ದ ಟೂಲ್ ಕಿಟ್ ಸ್ಕ್ರೀನ್ ಶಾಟ್‌ಗಳನ್ನು ಇಟ್ಟುಕೊಂಡು ಪೊಲೀಸರು ಫೆಬ್ರುವರಿ 4ರಂದು ಎಫ್ ಐ ಆರ್ ದಾಖಲಿಸಿದ್ದರು. ಡಿಲೀಟ್ ಆಗಿದ್ದ ಪೋಸ್ಟ್‌ ನಲ್ಲಿ ಖಲಿಸ್ತಾನಿ ನಂಟು ಇರುವ ಸಾಕ್ಷ್ಯವಿದ್ದು, ಸರ್ಕಾರದ ವಿರುದ್ಧ ಎತ್ತಿ ಕಟ್ಟಲು ಟೂಲ್ ಕಿಟ್ ರಚಿಸಲಾಗಿತ್ತು ಎಂದು ಪೊಲೀಸರು ದೂರಿದ್ದರು.

 ಪೋಸ್ಟ್‌ ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದ ದಿಶಾ

ಪೋಸ್ಟ್‌ ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದ ದಿಶಾ

ಗ್ರೆಟಾ ಥನ್‌ಬರ್ಗ್ ಟೂಲ್ ಕಿಟ್ ಟ್ವೀಟ್ ಮಾಡುತ್ತಿದ್ದಂತೆ, ದಿಶಾ ಗ್ರೆಟಾಗೆ ಅದನ್ನು ಡಿಲೀಟ್ ಮಾಡುವಂತೆ ಮನವಿ ಮಾಡಿದ್ದರು. ತಮ್ಮ ಹೆಸರು ಅದರಲ್ಲಿರುವುದರಿಂದ ಕಾನೂನು ಕ್ರಮ ತೆಗೆದುಕೊಳ್ಳಬಹುದಾದ ಭೀತಿಯಿಂದ ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದರು ಹಾಗೂ ಸಂಪಾದನೆ ಮಾಡಿದ ಮತ್ತೊಂದು ಟೂಲ್ ಕಿಟ್ ಅನ್ನು ಅವರಿಗೆ ಕಳುಹಿಸಿದ್ದರು ಎಂದು ಸೋಮವಾರ ಪೊಲೀಸರು ತನಿಖೆ ವರದಿ ನೀಡಿದ್ದಾರೆ.

 ಗ್ರೆಟಾ- ದಿಶಾ ವಾಟ್ಸಪ್ ಚಾಟ್ ಮಾಹಿತಿ

ಗ್ರೆಟಾ- ದಿಶಾ ವಾಟ್ಸಪ್ ಚಾಟ್ ಮಾಹಿತಿ

"ಟೂಲ್ ಕಿಟ್ ಅನ್ನು ಸದ್ಯಕ್ಕೆ ಹಂಚಿಕೊಳ್ಳುವುದೇ ಬೇಡ. ಸ್ವಲ್ಪ ಸಮಯ ಏನೂ ಮಾತನಾಡದೇ ಇರುವುದು ಒಳ್ಳೆಯದು. ನಾನು ವಕೀಲರ ಜೊತೆ ಮಾತಾಡುತ್ತೇನೆ. ಈ ದಾಖಲೆಗಳಲ್ಲಿ ನಮ್ಮ ಹೆಸರು ಇರುವುದರಿಂದ ನಮ್ಮ ಮೇಲೆ ಕ್ರಮ ಕೈಗೊಳ್ಳಬಹುದು" ಎಂದು ವಾಟ್ಸ್‌ಪ್ ಮೂಲಕ ಸಂದೇಶ ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಟೂಲ್ ಕಿಟ್ ದಾಖಲೆಯನ್ನು ಟೆಲಿಗ್ರಾಂ ಮೂಲಕ ಕಳುಹಿಸಿದ್ದರು ಎಂದು ತಿಳಿಸಿದ್ದಾರೆ.

 ಐಎಸ್‌ಐನೊಂದಿಗೆ ನಂಟಿನ ಶಂಕೆ

ಐಎಸ್‌ಐನೊಂದಿಗೆ ನಂಟಿನ ಶಂಕೆ

ಗ್ರೆಟಾ ಥನ್‌ಬರ್ಗ್ ಮೊದಲು ಹಂಚಿಕೊಂಡಿದ್ದ ಟ್ವೀಟ್‌ ನಲ್ಲಿ ಪೀಟರ್ ಫ್ರೆಡ್ರಿಕ್ ಹೆಸರು ಇದ್ದು, ಈತ ಖಲಿಸ್ತಾನಿ ನಂಟು ಹೊಂದಿರುವವನು. ಪಾಕಿಸ್ತಾನದ ಐಎಸ್‌ಐ ಸಂಘಟನೆಯೊಂದಿಗೆ ಸಂಪರ್ಕ ಇರುವ ಈತನ ಮೇಲೆ 2006ರಿಂದಲೂ ಭದ್ರತಾ ಸಂಸ್ಥೆಗಳು ನಿಗಾ ಇಟ್ಟಿವೆ. ಟೂಲ್ ಕಿಟ್ ನಲ್ಲಿ ಫ್ರೆಡ್ರಿಕ್ ಹೆಸರು ಇರುವುದು ಹಲವು ಶಂಕೆಗಳನ್ನು ಹುಟ್ಟುಹಾಕಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

English summary
Delhi Police claimed that Ms Thunberg allegedly deleted the tweet following Disha's request and later, shared an edited version of the document,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X