ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನೆ ಹಿಂತೆಗೆತ,ಭಾರತ,ಚೀನಾ ಎರಡಕ್ಕೂ ಗೆಲುವಿನ ಸಂದರ್ಭ: ನರವಾಣೆ

|
Google Oneindia Kannada News

ನವದೆಹಲಿ,ಫೆಬ್ರವರಿ 24: ಪ್ಯಾಂಗಾಂಗ್ ತ್ಸೊ ಸರೋವರದಿಂದ ಭಾರತ ಹಾಗೂ ಚೀನಾ ಸೇನೆ ಹಿಂತೆಗೆದ ಎರಡೂ ದೇಶಗಳಿಗೂ ಇದು ಗೆಲುವಿನ ಸಂದರ್ಭ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಹೇಳಿದ್ದಾರೆ.

ಗಡಿ ಸಂಘರ್ಷದ ಆರಂಭದಿಂದಲೇ, ಎಲ್ಲ ಕಡೆಯೂ ಭಾರತ ಒಟ್ಟಾಗಿ ಕೆಲಸ ಮಾಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ತಮ್ಮ ಚೀನಾದ ಸಹವರ್ತಿಗಳೊಂದಿಗೆ ಮಾತನಾಡಿದ್ದಾರೆ ಎಂದು ಹೇಳಿದರು.

ಭಾರತದಲ್ಲಿ ಹೂಡಿಕೆಗೆ ಚೀನಾದ ಯಾವ ಕಂಪೆನಿಗೂ ಅನುಮತಿ ನೀಡಿಲ್ಲಭಾರತದಲ್ಲಿ ಹೂಡಿಕೆಗೆ ಚೀನಾದ ಯಾವ ಕಂಪೆನಿಗೂ ಅನುಮತಿ ನೀಡಿಲ್ಲ

ಲಡಾಖ್ ಸಂಘರ್ಷ ವೇಳೆಯಲ್ಲಿ ಪಾಕಿಸ್ತಾನ ಮತ್ತು ಚೀನಾ ನಡುವೆ ಬಹಿರಂಗ ಒಪ್ಪಂದದ ಯಾವುದೇ ಲಕ್ಷಣಗಳಿಲ್ಲ ಆದರೆ, ಭಾರತವು ದೀರ್ಘಾವಧಿಯ ಕಾರ್ಯತಂತ್ರವನ್ನು ರೂಪಿಸುತ್ತದೆ ಎಂದ ಅವರು, ಆಂತರಿಕ ಭದ್ರತೆಯನ್ನು ಉಲ್ಲೇಖಿಸಿದರು.

Disengagement Win-Win Situation For Both India, China: Army chief Gen M M Naravane

ಕಳೆದ ವಾರ, ಉಭಯ ದೇಶಗಳ ಸೇನೆಗಳು ಅತ್ಯಂತ ಹೆಚ್ಚಿನ ಎತ್ತರದ ಪ್ರದೇಶದಲ್ಲಿರುವ ಪಾಂಗೊಂಗ್ ತ್ಸೊದ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಿದ್ದವು.

ವಿವೇಕಾನಂದ ಅಂತಾರಾಷ್ಟ್ರೀಯ ಫೌಂಡೇಷನ್ ಆಯೋಜಿಸಿದ್ದ ವೆಬಿನಾರ್ ನಲ್ಲಿ ಮಾತನಾಡಿದ ಅವರು, ನಾವೆಲ್ಲಾ ಒಟ್ಟಾಗಿದ್ದು, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನಾವು ಚರ್ಚಿಸುತ್ತಿದ್ದೇವು. ಏನೆಲ್ಲಾ ಮಾಡಿದ್ದೇವು, ಅದೆಲ್ಲಾ ಫಲಿತಾಂಶವಾಗಿ ಬಂದಿದೆ. ಈವರೆಗಿನ ಸಾಧನೆ ಉತ್ತಮವಾಗಿದೆ ಎಂದರು.

English summary
Army Chief Gen MM Naravane on Wednesday said the disengagement of armies of India and China from north and south banks of Pangong Tso is a win-win situation for both sides.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X