ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಕೃಷಿ ಸುಧಾರಣೆ ಕುರಿತು ಚರ್ಚೆ: ಇಂಗ್ಲೆಂಡ್ ರಾಯಭಾರಿಗೆ ಸಮನ್ಸ್

|
Google Oneindia Kannada News

ನವದೆಹಲಿ, ಮಾರ್ಚ್.09: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ 102 ದಿನಗಳಿಂದಲೂ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಇದರ ಮಧ್ಯೆ ಬ್ರಿಟಿಷ್ ಸಂಸತ್ ನಲ್ಲಿ ನಡೆದ ಚರ್ಚೆಯನ್ನು ಆಕ್ಷೇಪಿಸಿ ಸಮನ್ಸ್ ಜಾರಿಗೊಳಿಸಲಾಗಿದೆ.

ಭಾರತದ ಕೃಷಿ ಸುಧಾರಣೆಗಳ ಕುರಿತು ಬ್ರಿಟಿಷ್ ಸಂಸತ್ ನಲ್ಲಿ ನಡೆಸಿದ ಅನಗತ್ಯ ಚರ್ಚೆಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬ್ರಿಟಿಷ್ ಹೈಕಮಿಷನರ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.

ರೈತರ ಪ್ರತಿಭಟನೆ ಕುರಿತು ಯುಕೆ ಸಂಸದರ ಚರ್ಚೆಗೆ ಭಾರತ ತೀವ್ರ ಆಕ್ರೋಶ ರೈತರ ಪ್ರತಿಭಟನೆ ಕುರಿತು ಯುಕೆ ಸಂಸದರ ಚರ್ಚೆಗೆ ಭಾರತ ತೀವ್ರ ಆಕ್ರೋಶ

ಭಾರತದ ಕೃಷಿ ಸುಧಾರಣೆ ಕುರಿತು ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರಿಂಗ್ಲಾ ಅವರು ಬ್ರಿಟಿಷ್ ಸಂಸತ್ತಿನಲ್ಲಿ ಚರ್ಚೆ ನಡೆಸಿದ್ದಾರೆ. ಈ ನಡೆಯು ಪ್ರಜಾಪ್ರಭುತ್ವ ರಾಷ್ಟ್ರದ ರಾಜಕೀಯದಲ್ಲಿನ ಹಸ್ತಕ್ಷೇಪವನ್ನು ಸೂಚಿಸುತ್ತದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Discussion on Indian Agri Reforms In UK Parliament; India Summons British Envoy

ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಸಲ್ಲದು:

ಒಂದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಂಬಂಧಿಸಿದ ಘಟನೆಗಳನ್ನು ತಪ್ಪಾಗಿ ನಿರೂಪಿಸುವ ಮೂಲಕ ಮತ ಬ್ಯಾಂಕ್ ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ರಾಯಭಾರಿಗೆ ಸಲಹೆ ನೀಡಲಾಗಿದೆ. "ಇದು ಮತ್ತೊಂದು ಪ್ರಜಾಪ್ರಭುತ್ವ ರಾಷ್ಟ್ರದ ರಾಜಕೀಯದಲ್ಲಿ ಸಂಪೂರ್ಣ ಹಸ್ತಕ್ಷೇಪವನ್ನು ಪ್ರತಿನಿಧಿಸುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ" ಎಂದು ಹೇಳಲಾಗಿದೆ.

English summary
Discussion on Indian Agri Reforms In UK Parliament; India Summons British Envoy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X