ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಐಒ ಕಾರ್ಯ ನಿರ್ವಹಣೆ ಬಗ್ಗೆ ಮ್ಯಾಗ್ಸೆಸೆ ವಿಜೇತ ಅಪಸ್ವರ

By Mahesh
|
Google Oneindia Kannada News

ನವದೆಹಲಿ, ಜು. 30: ಭಾರತದ ಸಂಜೀವ್ ಚತುರ್ವೇದಿ, ಅಂಶು ಗುಪ್ತಾ ಸೇರಿದಂತೆ ಲಾವೋಸ್, ಮ್ಯಾನ್ಮಾರ್ ಮತ್ತು ಫಿಲಿಪ್ಪೀನ್ಸ್ ದೇಶಗಳ ಐವರು ಗಣ್ಯರು ಏಶ್ಯಾದ ಪ್ರತಿಷ್ಠಿತ ರಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಪಾತ್ರರಾಗಿದ್ದು ಎಲ್ಲರಿಗೂ ತಿಳಿದಿರುತ್ತದೆ. ಈ ನಡುವೆ ಪ್ರಧಾನಿ ಸಚಿವಾಲಯದ ಕಾರ್ಯ ನಿರ್ವಹಣೆ ಬಗ್ಗೆ ಸಂಜೀವ್ ಚತುರ್ವೇದಿ ಅವರು ಅಪಸ್ವರ ಎತ್ತಿದ್ದಾರೆ.

ಸಂಜೀವ್ ಚತುರ್ವೇದಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್) ಮಾಜಿ ಅಧಿಕಾರಿ (ಚೀಫ್ ವಿಜಿಲೆನ್ಸ್ ಕಮಿಷನರ್). ಪ್ರಸ್ತುತ ಅವರು ಎಐಐಎಂಎಸ್‌ನಲ್ಲೇ ಉಪ ಕಾರ್ಯದರ್ಶಿಯಾಗಿದ್ದಾರೆ. ಪ್ರಧಾನಿ ಸಚಿವಾಲಯದಲ್ಲಿ 'ಭ್ರಷ್ಟಾಚಾರ ಶೂನ್ಯ' ಎಂಬುದು ಹೆಸರಿಗಷ್ಟೇ ಇದೆ. ಕಾರ್ಯತ: ಇದನ್ನು ಪ್ರಯೋಗಿಸಬೇಕಾದರೆ ಸಾಕಷ್ಟು ಸಮಯ ಹಿಡಿಯಿತು ಎಂದು ಆರೋಪಿಸಿದ್ದಾರೆ. [ಕನ್ನಡಿಗ ಹರೀಶ್ ಹಂದೆಗೆ ಪ್ರತಿಷ್ಠಿತ ಮ್ಯಾಗ್ಸೇಸೆ ಪ್ರಶಸ್ತಿ]

'ಭ್ರಷ್ಟಾಚಾರ ರಹಿತ ಕಚೇರಿ' ಅನುಷ್ಠಾನಗೊಳಿಸಬೇಕಾದರೆ ವೈಯಕ್ತಿಕವಾಗಿ ಅನೇಕ ಒತ್ತಡಗಳು ಹಾಗೂ ತೊಂದರೆಗಳನ್ನು ತೆಗೆದುಕೊಳ್ಳಬೇಕಾಯಿತು. ಹೀಗಾಗಿ ಏಮ್ಸ್ ನಲ್ಲಿನ ಭ್ರಷ್ಟಾಚಾರವನ್ನು ಬಯಲೆಗೆಳೆಯಲಾಯಿತು. ಭ್ರಷ್ಟಾಚಾರ ರಹಿತ ಅಸ್ತ್ರ ಭ್ರಷ್ಟಾಚಾರಿಗಳ ವಿರುದ್ಧ ಇರಬೇಕೇ ಹೊರತೂ ನಿಷ್ಠಾವಂತರ ಮೇಲಲ್ಲ. ನ್ಯಾಯಾಂಗದ ನೆರವು ಇಲ್ಲದಿದ್ದರೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದಿಗೂ ಸಾಧ್ಯವಿರುತ್ತಿರಲಿಲ್ಲ ಎಂದಿದ್ದಾರೆ. [ಭಾರತದ ಇಬ್ಬರು ಸಾಧಕರಿಗೆ ಮ್ಯಾಗ್ಸೆಸ್ಸೆ ಪುರಸ್ಕಾರ]

Magsaysay winner ‘disappointed’ with functioning of PMO

ಡಾ. ಅಬ್ದುಲ್ ಕಲಾಂ ಅವರು ನನಗೆ ಮಾದರಿ ವ್ಯಕ್ತಿಯಾಗಿದ್ದರು. ಅವರ ಚಿಂತನೆ ಹಾಗೂ ನಿಃಸ್ವಾರ್ಥ ಮನೋಭಾವದಿಂದಾಗಿ ನಾನು ನನ್ನ ದೇಶಕ್ಕೆ ಏನಾದರೂ ಒಳ್ಳೆಯದು ಮಾಡಬಹುದು ಎಂಬ ನಂಬಿಕೆ ಹುಟ್ಟಿಕೊಂಡಿತು ಎಂದು ಚತುರ್ವೇದಿ ಹೇಳಿದ್ದಾರೆ.

ಇಬ್ಬರಿಗೂ 'ಉದ್ಯಮಶೀಲ ನಾಯಕತ್ವ' ಮತ್ತು 'ಭ್ರಷ್ಟಾಚಾರ ಬಹಿರಂಗ'ಗೊಳಿಸುವ ಕೆಲಸಗಳಿಗಾಗಿ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ರಮನ್ ಮ್ಯಾಗ್ಸೆಸೆ ಪ್ರತಿಷ್ಠಾನ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಂಶು ಗುಪ್ತಾ 'ಗೂಂಜ್' ಎಂಬ ಎನ್‌ಜಿಒ ನಡೆಸುತ್ತಿದ್ದಾರೆ. ಹಳೆಯ ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಮರುಬಳಕೆ ಮಾಡಿಕೊಂಡು ಅಮೂಲ್ಯ ಸಂಪನ್ಮೂಲವನ್ನು ಸೃಷ್ಟಿಸುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಅವರು ರೂಪಿಸಿರುವ ಸಮಾನಾಂತರ ಅರ್ಥವ್ಯವಸ್ಥೆಯು ನಗದು ಆಧರಿತವಲ್ಲ. ಬದಲಿಗೆ ರದ್ದಿ ವಸ್ತುಗಳನ್ನು ಆಧರಿಸಿದ್ದಾಗಿದೆ.

1957ರಲ್ಲಿ ಸ್ಥಾಪನೆಗೊಂಡಿರುವ ರಮನ್ ಮ್ಯಾಗ್ಸೆಸೆ ಪ್ರಶಸ್ತಿ ಏಶ್ಯಾದ ಅತ್ಯುನ್ನತ ಗೌರವವಾಗಿದ್ದು, ಈ ಪ್ರದೇಶದ ನೊಬೆಲ್ ಪ್ರಶಸ್ತಿಯೆಂದೇ ಪ್ರಸಿದ್ಧವಾಗಿದೆ. ಫಿಲಿಪ್ಪೀನ್ಸ್‌ನ ಮೂರನೆ ಅಧ್ಯಕ್ಷರಾಗಿದ್ದ ರಮನ್ ಮ್ಯಾಗ್ಸೆಸೆ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. (ಪಿಟಿಐ)

English summary
Whistleblower bureaucrat Sanjiv Chaturvedi, who has been selected for the prestigious Ramon Magsaysay award, today expressed disappoinment over functioning of the PMO and said he was able to "survive" only because of an "independent judiciary"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X