ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಣ್ಣೆ ಖರೀದಿಸಿ ಮಹಿಳೆಯರ ಬಗ್ಗೆ ಆರ್ ಜಿವಿ ಲೇವಡಿ: ಸೋನಾ ಮಹೋಪಾತ್ರ ಸಿಡಿಮಿಡಿ

|
Google Oneindia Kannada News

ನವದೆಹಲಿ, ಮೇ.04: ಭಾರತ ಲಾಕ್ ಡೌನ್ ನಡುವೆಯೂ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದೇ ತಡ ಸೋಮವಾರ ಮದ್ಯದ ಅಂಗಡಿಗಳ ಎದುರು ಜನಸಾಗರವೋ ಜನಸಾಗರ. ಪುರುಷರಷ್ಟೇ ಅಲ್ಲದೇ ಮಹಿಳೆಯರೂ ಕೂಡಾ ಎಣ್ಣೆ ಅಂಗಡಿ ಎದುರು ಸಾಲುಗಟ್ಟಿ ನಿಂತಿದ್ದು ಇದೀಗ ತೀವ್ರ ಚರ್ಚೆ ಆಗುತ್ತಿದೆ.

ಬಾಲಿವುಡ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಬೆಂಗಳೂರಿನಲ್ಲಿರುವ ಒಂದು ಮದ್ಯದ ಅಂಗಡಿಯ ಎದುರು ಸಾಲುಗಟ್ಟಿ ನಿಂತ ಮಹಿಳೆಯರ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ವೈನ್ ಶಾಪ್ ಎದುರಿನಲ್ಲಿ ಯಾರು ಸಾಲುಗಟ್ಟಿ ನಿಂತಿದ್ದಾರೆ ಎಂದು ನೋಡಿ, ಕುಡಿದ ಪುರುಷರಿಂದ ಇವರನ್ನು ರಕ್ಷಿಸಬೇಕಿದೆ ಎಂದು ಲೇವಡಿ ಮಾಡಿದ್ದಾರೆ. ಇದಕ್ಕೆ ಗಾಯಕಿ ಸೋನಾ ಮೊಹಾಪಾತ್ರ ಟ್ವಿಟ್ಟರ್ ನಲ್ಲಿಯೇ ತಿರುಗೇಟು ಕೊಟ್ಟಿದ್ದಾರೆ.

ಅಬ್ಬಬ್ಬಾ..! ಬ್ಯಾಡಗಿಯಲ್ಲಿ ಮದ್ಯಪ್ರಿಯರಿಗೆ ಅದೇನು ಶಿಸ್ತು?ಅಬ್ಬಬ್ಬಾ..! ಬ್ಯಾಡಗಿಯಲ್ಲಿ ಮದ್ಯಪ್ರಿಯರಿಗೆ ಅದೇನು ಶಿಸ್ತು?

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣ ಸೋಮವಾರದ ಅಂಕಿ-ಅಂಶಗಳ ಪ್ರಕಾರ 42,836 ಮಂದಿಗೆ ಸೋಂಕು ತಗಲಿದ್ದು, ಇದುವರೆಗೂ ದೇಶದಲ್ಲಿ 1,389 ಮಂದಿ ಕೊರೊನಾಗೆ ಪ್ರಾಣ ಬಿಟ್ಟಿದ್ದಾರೆ. ಇನ್ನು, 11,762 ಸೋಂಕಿತರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Director Ram Gopal Varma Tweet About Womens Line Infront Off Liquor Shop

ಕೇಂದ್ರದ ನಿರ್ಧಾರವನ್ನು ಟೀಕಿಸಿದ ಬಾಲಿವುಡ್:

ದೇಶದಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಇಂಥ ಸಂದರ್ಭದಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ ಕೇಂದ್ರ ಸರ್ಕಾರದ ವಿರುದ್ಧ ಬಾಲಿವುಡ್ ಗಣ್ಯರು ನೇರವಾಗಿ ದಾಳಿ ನಡೆಸಿದ್ದರು.

Director Ram Gopal Varma Tweet About Womens Line Infront Off Liquor Shop

ಇದೀಗ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಹಿಳೆಯರೇ ಹೆಚ್ಚಾಗಿ ವೈನ್ ಶಾಪ್ ಗಳ ಎದುರು ಕ್ಯೂನಲ್ಲಿ ನಿಂತಿದ್ದಾರೆ ಎಂದು ಬಿಂಬಿಸುವ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಬಾಲಿವುಡ್ ಗಾಯಕಿ ಸೋನಾ ಮೊಹಾಪಾತ್ರ ತಿರುಗೇಟು ಕೊಟ್ಟಿದ್ದಾರೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಲಿಂಗ ಸಮಾನತೆಯನ್ನೇ ಮರತಿದ್ದಾರೆ. ಮಹಿಳೆಯರಿಗೂ ಕೂಡಾ ಮದ್ಯವನ್ನು ಖರೀದಿಸುವ ಹಾಗೂ ಮದ್ಯಪಾನ ಮಾಡುವ ಎಲ್ಲ ಹಕ್ಕು ಬಾಧ್ಯತೆಗಳಿವೆ ಎಂದು ಪ್ರತಿಟ್ವೀಟ್ ಮಾಡಿದ್ದಾರೆ.

English summary
Bollywood Director Ram Gopal Varma Tweet About Womens Line Infront Off Liquor Shop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X