ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿ: ಗಂಟಲುಮಾರಿಗೆ ಎರಡು ವಾರದಲ್ಲಿ 12 ಮಕ್ಕಳು ಬಲಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 21: ಗಂಟಲುಮಾರಿ ರೋಗಕ್ಕೆ ತುತ್ತಾಗಿ ಕೇವಲ ಎರಡನೇ ವಾರದಲ್ಲಿ 12 ಮಕ್ಕಳು ರಾಷ್ಟ್ರ ರಾಜಧಾನಿಯಲ್ಲಿ ಶಾಶ್ವತವಾಗಿ ಕಣ್ಣು ಮುಚ್ಚಿದ್ದಾರೆ.

ದೆಹಲಿಯ ವಾಲ್ಮಿಕಿ ಆಸ್ಪತ್ರೆ ಒಂದರಲ್ಲೇ ಕೇವಲ 13 ದಿನಕ್ಕೆ 11 ಮಕ್ಕಳು ಗಂಟಪುಮಾರಿ (Diphtheria) ಗೆ ತುತ್ತಾಗಿ ಮರಣಹೊಂದಿದ್ದಾರೆ.

ಅಪ್ಪನ ಶವದೆದುರು ಮಗನ ಆರ್ತನಾದ: ಕರುಳು ಕಿವುಚಿದ ಆ ಚಿತ್ರ ಅಪ್ಪನ ಶವದೆದುರು ಮಗನ ಆರ್ತನಾದ: ಕರುಳು ಕಿವುಚಿದ ಆ ಚಿತ್ರ

ಡೈಪ್ತೇರಿಯಾ ಎಂಬುದು ಗಂಟಲು ಹಾಗೂ ಮೂಗಿನ ಲೋಳೆಯಂತಹಾ ರಚನೆಯುಳ್ಳ ಅಂಗಗಳಿಗೆ ತಾಗುವ ಬ್ಯಾಕ್ಟೀರಿಯಾ ಸೋಂಕಿನಿಂದ ಬರುವ ಖಾಯಿಲೆಯಾಗಿದ್ದು. ಈ ಖಾಯಿಲೆ ಸಣ್ಣ ಮಕ್ಕಳಿಗೆ ಬಾಧಿಸುವ ಸಾಧ್ಯತೆಯೇ ಅಧಿಕ.

Diphtheria kills 12 children in 14 days in Delhi

ದೆಹಲಿಯ ಮಹರ್ಷಿ ವಾಲ್ಮಿಕಿ ಸರ್ಕಾರಿ ಆಸ್ಪತ್ರೆಯಲ್ಲಿ 11 ಮಂದಿ ಮಕ್ಕಳು ಸಾವನ್ನಪ್ಪಿದ್ದರೆ ಮತ್ತೊಂದು ಸರ್ಕಾರಿ ಆಸ್ಪತ್ರೆ ಲೋಕನಾಯಕ ಆಸ್ಪತ್ರೆಯಲ್ಲಿ ಒಬ್ಬ ಬಾಲಕ ಸಾವನ್ನಪ್ಪಿದ್ದಾನೆ. ಗಮನಿಸಬೇಕಾದ ಅಂಶವೆಂದರೆ ಖಾಸಗಿ ಆಸ್ಪತ್ರೆಯಲ್ಲಿ ಈ ಪ್ರಕರಣದಿಂದ ಒಂದೂ ಸಾವಾಗಿಲ್ಲ.

ಕಳೆದ ವರ್ಷ ಸಹ ಸೆಪ್ಟೆಂಬರ್‌ನಲ್ಲಿ ಇದೇ ಖಾಯಿಲೆಗೆ 15 ಮಂದಿ ಪ್ರಾಣ ತೆತ್ತಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗಂಟಲುಮಾರಿ ರೋಗ ಹೆಚ್ಚಿಗೆ ವ್ಯಾಪಿಸಿರುವುದು ಆತಂಕಕ್ಕೆ ತಳ್ಳಿದೆ.

English summary
12 children died in 14 days in New delhi because of Diphtheria. All deaths were recorded in two government hospitals of Delhi. Last year 15 children died in the same month due to Diphtheria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X