ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ 15ನೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿನಂದನೆ ತಿಳಿಸಿದ ಗಣ್ಯರು

|
Google Oneindia Kannada News

ಬೆಂಗಳೂರು ಜುಲೈ 25: ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ 15ನೇ ರಾಷ್ಟ್ರಪತಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮು ಅವರಿಗೆ ರಾಜಕೀಯ ಸೇರಿದಂತೆ ವಿವಿಧ ವಲಯಗಳ ಗಣ್ಯರು ಅಭಿನಂದನೆ ತಿಳಿಸಿದ್ದಾರೆ.

ಬಿಹಾರದ ಸಂಸದ ರವಿ ಶಂಕರ್ ಪ್ರಸಾದ್ ಅವರು, ಭಾರತದ ನೂತನ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳು. ನಿಮ್ಮ ಸರಳತೆ ಮತ್ತು ಸಾರ್ವಜನಿಕ ಜೀವನದಲ್ಲಿ ನಿಮ್ಮ ಅಪಾರ ಅನುಭವ ದೇಶಕ್ಕೆ ಪ್ರಯೋಜನಕಾರಿ ಆಗಲಿದೆ ಎಂದು ಅವರು ಶುಭಾಶಯಗಳನ್ನು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಟ್ವಿಟ್ ಮಾಡಿದ್ದು, ಭಾರತ ಗಣರಾಜ್ಯದ 15ನೇ ರಾಷ್ಟ್ರಪತಿಯಾಗಿ ಶ್ರೀಮತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಳೇ ಇದೊಂದು ಸುವರ್ಣ ದಿನವಾಗಿದೆ. ದ್ರೌಪದಿ ಮುರ್ಮು ಅವರ ನಿರೂಪಣೆಯೇ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. ಬಡ ಬುಡಕಟ್ಟು ಸಮುದಾಯದಲ್ಲಿ ಜನಿಸಿದ ಒಬ್ಬ ಹುಡುಗಿಯ ಜೀವನ, ಸಾಧನೆಯ ಹಾದಿ ರಾಷ್ಟ್ರಪತಿ ಭವನದವರೆಗೂ ಬಂದು ನಿಲ್ಲುತ್ತದೆ ಎಂದರೆ ಅದು ಎಲ್ಲಿರಿಗೂ ಸ್ಪೂರ್ತಿಯಾಗುವಂತದ್ದೆ ಎಂದು ಮುರ್ಮು ಬದಕನ್ನು ಬೊಮ್ಮಾಯಿ ಶ್ಲಾಘಿಸಿ ಅಭಿನಂದತೆ ತಿಳಿಸಿದ್ದಾರೆ.

 Dignitaries felicitated to Draupadi Murmu the 15th President of India

ಕರ್ನಾಕಟದ ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಅವರು, ಬುಡಕಟ್ಟು ಜನಾಂಗ ಮಹಿಳೆಯೊಬ್ಬರು ದೇಶದ ಸಾಂವಿಧಾನಿಕ ಉನ್ನತ ಹುದ್ದೆ ಅಲಂಕರಿಸಿದ ಈ ದಿನ ಭಾರತಕ್ಕೆ ಸುವರ್ಣ ದಿನವಾಗಿದೆ. ಭಾರತದ ಅಧ್ಯಕ್ಷರಾದ ಎರಡನೇ ಮಹಿಳೆ ದ್ರೌಪತಿ ಮುರ್ಮು ಅವರಾಗಿದ್ದಾರೆ ಎಂದರು.

ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ನಾಯಕಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ದೇಶದ ನೂತನ 15 ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

 Dignitaries felicitated to Draupadi Murmu the 15th President of India

ಅದೇ ರೀತಿ ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಸಹ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸಿದ್ದಾರೆ. ಭಾರತದ ಅತ್ಯುನ್ನತ ಹುದ್ದೆಯ ಪ್ರಮಾಣ ವಚನ ಸ್ವೀಕರಿಸುವ ಮುಲಕ ನೂತನ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಯಶಸ್ವಿಯಾಗಿ ಅಧಿಕಾರ ನಡೆಸುವಂತಾಗಲಿ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಪ್ರಥಮ ಬಾರಿಗೆ ರಾಷ್ಟ್ರಪತಿಯಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂದ ಗೌರವ ಎಂದು ಗೃಹ ಸಚಿವರು ಶುಭ ಹಾರೈಸಿ ಕೂ ಮಾಡಿದ್ದಾರೆ.

ಭಾರತ ದೇಶದ ಪರಮೋಚ್ಛ ಹುದ್ದೆ ಅಲಂಕರಿಸಿದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಅಬಕಾರಿ ಖಾತೆ ಸಚಿವ ಕೆ.ಗೋಪಾಲಯ್ಯ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ. ನಿಮ್ಮ ಈ ಸಾಧನೆ ದೇಶದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯ ಗೆಲುವು ಆಗಿದೆ. ಬುಡಕಟ್ಟು ಜನಾಂಗ ಒಬ್ಬ ಮಹಿಳೆ ಇಂದು ರಾಷ್ಟ್ರಪತಿ ಸ್ಥಾನಕ್ಕೇರಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಗೆಲುವು ಕೂಡ ಆಗಿದೆ. ತಮ್ಮ ರಾಷ್ಟ್ರಸೇವೆ ನಿರಾತಂಕವಾಗಿ ಸಾಗಲಿ, ತಾವು ಯಶಸ್ವಿ ಆಡಳಿತ ನೀಡುವಂತಾಗಲಿದೆ ಎಂದು ಅವರು ಕೂ ಮೂಲಕ ಹಾರೈಸಿದ್ದಾರೆ.

Recommended Video

ರಾಷ್ಟ್ರಪತಿ ದ್ರೌಪದಿ ಮರ್ಮು ಪ್ರಮಾಣವಚನ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಅಗೌರವ | OneIndia Kannada

ಜುಲೈ 21ರಂದು ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಕಾಂಗ್ರೆಸ್‌ನ ಚುನಾವಣೆ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಮುರ್ಮು ಅವರು ಸೋಲಿಸಿ ಗೆಲುವು ಸಾಧಿಸಿದ್ದರು. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಸಹ ಅಡ್ಡ ಮತದಾನ ಮೂಲಕ ಮುರ್ಮು ಗೆಲುವಿಗೆ ಸಾಕ್ಷಿಯಾದರು. ಅದರಂತೆ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ದ್ರೌಪದಿ ಮುರ್ಮು ಅವರು ನಡೆದು ಬಂದ ಹಾದಿ, ಅವರ ದೇಶಭಕ್ತಿ, ಅನುಭವ ಕುರಿತು ಗಣ್ಯರು ಅಭಿನಂದನೆ ತಿಳಿಸಿದ್ದಾರೆ.

English summary
Dignitaries congratulated to Draupadi Murmu the 15th President of India, after Murmu taking oath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X